Arranged Marriage: ‘ಓಕೆ’ ಎನ್ನುವ ಮುನ್ನ ಈ ವಿಷಯಗಳಲ್ಲಿ ಕ್ಲ್ಯಾರಿಟಿ ಇರಲಿ
ಸಂಬಂಧಗಳು ಗಾಜಿನ ಕನ್ನಡಿಯಿದ್ದಂತೆ ನಾವು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳುತ್ತೇವೋ ಅಷ್ಟು ವರ್ಷ ಬಾಳಿಕೆ ಬರುತ್ತದೆ. ಎಡವಿದ್ದಲ್ಲಿ ಕ್ಷಣ ಮಾತ್ರದಲ್ಲೇ ಸಂಬಂಧಗಳು ಕಡಿದುಹೋಗುತ್ತವೆ.
ಸಂಬಂಧಗಳು ಗಾಜಿನ ಕನ್ನಡಿಯಿದ್ದಂತೆ ನಾವು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳುತ್ತೇವೋ ಅಷ್ಟು ವರ್ಷ ಬಾಳಿಕೆ ಬರುತ್ತದೆ. ಎಡವಿದ್ದಲ್ಲಿ ಕ್ಷಣ ಮಾತ್ರದಲ್ಲೇ ಸಂಬಂಧಗಳು ಕಡಿದುಹೋಗುತ್ತವೆ. ಭಾರತದಲ್ಲಿ ಈಗೀಗ ಅರೇಂಜ್ಡ್ ಮದುವೆ ಬದಲು ಲವ್ ಮ್ಯಾರೇಜ್ಗಳೇ ಹೆಚ್ಚಾಗಿವೆ, ಆದರೆ ಅರೇಂಜ್ ಮ್ಯಾರೇಜ್ಗಳು ಜಾಲ್ತಿಯಲ್ಲಿವೆ.
ಪ್ರೀತಿ ಮಾಡಿ ಮದುವೆಯಾದರೆ ನಾವು ಮೊದಲೇ ನಮ್ಮ ಬಗ್ಗೆ ಹುಡುಗ/ಹುಡುಗಿ ಬಳಿ ಮಾತನಾಡಿರುತ್ತೇವೆ, ಸಾಕಷ್ಟು ಸಮಯವನ್ನು ಕಳೆದಿರುತ್ತೇವೆ. ಆದರೆ ಅರೇಂಜ್ ಮದುವೆಗಳಲ್ಲಿ ನಿಶ್ಚಿತಾರ್ಥ, ಮದುವೆ ಬೇಗ ಬೇಗ ನಡೆದುಹೋಗಿ ಮಾತನಾಡಲು ಅವಕಾಶಗಳು ಕಡಿಮೆ ಇರುತ್ತವೆ ಹಾಗೂ ಹಿಂಜರಿಕೆಯೂ ಇರುತ್ತದೆ.
ಹಾಗಾಗಿ ಅರೇಂಜ್ ಮ್ಯಾರೇಜ್ಗೆ ಓಕೆ ಹೇಳುವ ಮುನ್ನ ಕೆಲವು ವಿಷಯಗಳನ್ನು ಪರಿಗಣಿಸಿ. ಇಷ್ಟ-ಕಷ್ಟಗಳು, ಹಣಕಾಸಿನಿಂದ ಹಿಡಿದು ಭಾವನಾತ್ಮಕ ಹೊಂದಾಣಿಕೆಯವರೆಗೆ ಎಲ್ಲದರ ಬಗ್ಗೆ ಖಚಿತಪಡಿಸಿಕೊಳ್ಳಿ.
ನಿಮ್ಮ ಬಗ್ಗೆ ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ಹೇಳಿಕೊಳ್ಳಿ ಒಂದೊಮ್ಮೆ ನೀವು ಈ ಮೊದಲು ಪ್ರೀತಿ ಮಾಡುತ್ತಿದ್ದರೆ ಅಥವಾ ನಿಮಗೆ ಹುಡುಗ ಹೀಗೆಯೇ ಇರಬೇಕು ಎಂಬ ಕನಸಿದ್ದರೆ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಿ, ಮದುವೆಯಾದ ಮೇಲೆ ಯಾವುದೋ ಒಂದು ವಿಷಯಕ್ಕೆ ಭಿನ್ನಾಭಿಪ್ರಾಯ ಬರುವಂತೆ ಮಾಡಿಕೊಳ್ಳಬೇಡಿ. ಪ್ರತಿಯೊಬ್ಬರಿಗೂ ಒಂದು ಇತಿಹಾಸವಿದೆ. ಒಂದೊಮ್ಮೆ ನಿಮ್ಮ ಹಿಂದಿನ ಘಟನೆಗಳನ್ನು ಆತನಿಗೆ ಒಪ್ಪಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಜೀವನದಲ್ಲಿ ಇರಲು ಅವರಿಗೆ ಅರ್ಹತೆಯಿಲ್ಲವೆಂದರ್ಥ.
ಅತ್ತೆಯ ಮನೆಯವರ ಬಗ್ಗೆ ತಿಳಿದುಕೊಳ್ಳಿ ದಾಂಪತ್ಯ ಜೀವನ ಸುಖಮಯವಾಗಿರಬೇಕೆಂದರೆ ಅತ್ತೆ, ಮಾನವ ಪಾತ್ರವೂ ಮಹತ್ವದ್ದಾಗಿರುತ್ತದೆ. ಮದುವೆಗೆ ಮುಂಚೆ ಅವರ ಜತೆ ಸಮಯ ಕಳೆಯುವುದು ಕಷ್ಟ ಹೀಗಾಗಿ ಎರಡೂ ಕಡೆಯವರು ಅಷ್ಟಾಗಿ ತಿಳಿದಿರುವುದಿಲ್ಲ.
ಮದುವೆಗೂ ಮುಂಚೆ ನಿಮ್ಮ ಅತ್ತೆಯೊಂದಿಗೂ ಕೂಡ ಸ್ವಲ್ಪ ಸಮಯ ಕಳೆಯಿರಿ, ಅವರ ನಿರೀಕ್ಷೆಗಳೇನು ಎಂಬುದನ್ನು ತಿಳಿಯಲು ಪ್ರಯತ್ನಿಸಿ. ಮದುವೆಯಾಗುವ ನಿಮ್ಮ ನಿರ್ಧಾರದಿಂದ ಅವರು ಸಂತಸಗೊಂಡಿದ್ದಾರೆಯೇ ಎಂದು ವಿಚಾರಿಸಿ. ಸಾಧ್ಯವಾದರೆ, ನಿಮ್ಮ ಅತ್ತೆಯೊಂದಿಗೆ ಅವರ ಅಭದ್ರತೆಯ ಬಗ್ಗೆ ಮಾತನಾಡಿ. ಇದು ಮುಂದೆ ಏನಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ ಮತ್ತು ಮಾನಸಿಕವಾಗಿ ತಯಾರಿ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಮಕ್ಕಳ ಬಗ್ಗೆ ಚರ್ಚಿಸಿ ಬಹುತೇಕರಿಗೆ ಮಕ್ಕಳು ಬೇಕು ಎನ್ನುವ ಬಯಕೆ ಸಹಜ. ಆದರೆ ನೀವು ನಿಮ್ಮ ಸಂಗಾತಿ ಬಳಿ ನೀವು ಮಕ್ಕಳನ್ನು ಹೊಂದದಿರಲು ಬಯಸುತ್ತೀರಾ ಎನ್ನುವ ಪ್ರಶ್ನೆಯನ್ನು ಕೂಡ ಕೇಳಿ. ಒಂದೊಮ್ಮೆ ಮಗು ಬೇಕೆಂದಿದ್ದರೆ ಎಷ್ಟು ಮಕ್ಕಳು ಬೇಕು ಎಂಬುದನ್ನೂ ವಿಚಾರಿಸಿ ಏಕೆಂದರೆ ನಿಮ್ಮ ಮನಸ್ಸು ಅವರು ಯೋಚನೆ ಮಾಡುವ ರೀತಿ ಬೇರೆಯದ್ದೇ ಇರುತ್ತದೆ.
Published On - 5:47 pm, Sun, 17 July 22