ತೆಳ್ಳಗಿನ ವಯಸ್ಕರು ಸಾಮಾನ್ಯ ವ್ಯಕ್ತಿಗಿಂತ ಸೋಮಾರಿಯಾಗಿರುತ್ತಾರೆ; ಜಡಜೀವನ ಹೋಗಲಾಡಿಸಲು ಇಲ್ಲಿದೆ ಕೆಲವು ಟಿಪ್ಸ್

ತೆಳ್ಳಗಿನ ವಯಸ್ಕರು ಸಾಮಾನ್ಯ ವ್ಯಕ್ತಿಗಿಂತ ಸೋಮಾರಿಯಾಗಿರುತ್ತಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಜಡವನ್ನು ಹೋಲಾಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು.

ತೆಳ್ಳಗಿನ ವಯಸ್ಕರು ಸಾಮಾನ್ಯ ವ್ಯಕ್ತಿಗಿಂತ ಸೋಮಾರಿಯಾಗಿರುತ್ತಾರೆ; ಜಡಜೀವನ ಹೋಗಲಾಡಿಸಲು ಇಲ್ಲಿದೆ ಕೆಲವು ಟಿಪ್ಸ್
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jul 18, 2022 | 6:29 AM

ಅಧಿಕ ತೂಕದ ಜನರು, ಸ್ಥೂಲಕಾಯರು ಅಥವಾ ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಿರುವವರಿಗೆ ತೆಳ್ಳಗಿರುವುದು ವರವಾಗಿ ಕಾಣುತ್ತದೆ.  ಏಕೆಂದರೆ ತೆಳ್ಳಗಿರುವುದು ಯಾವಾಗಲೂ ಫಿಟ್ ಮತ್ತು ಆರೋಗ್ಯಕರವಾಗಿರುತ್ತಾರೆ. ಆದರೂ ಕೆಲವು ತೆಳ್ಳಗಿನ ಜನರು ಹೈಪೋಥೈರಾಯ್ಡಿಸಮ್, ಒಳಾಂಗಗಳ ಕೊಬ್ಬು, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಮಧುಮೇಹದಂತಹ ಪರಿಸ್ಥಿತಿಗಳಿಂದ ಬಳಲುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಹೊಸ ಸಂಶೋಧನೆಯ ಪ್ರಕಾರ, ತೆಳ್ಳಗಿನ ವಯಸ್ಕರು ಸಾಮಾನ್ಯ ವ್ಯಕ್ತಿಗಿಂತ ಸೋಮಾರಿಯಾಗಿರುತ್ತಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಜಡವನ್ನು ಹೋಲಾಡಿಸುವುದು ಹೇಗೆ? ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಸಂಖ್ಯೆ ಸಣ್ಣ ಪ್ರಮಾಣದಲ್ಲಿ ಇದ್ದರೂ 25 ಜನರಲ್ಲಿ ಒಬ್ಬರು ತೆಳ್ಳಗಿರುತ್ತಾರೆ ಮತ್ತು ಅವರ ಜೀವನಶೈಲಿ ಮತ್ತು ಆಹಾರದ ಆಯ್ಕೆಗಳಿಂದ ತೂಕವನ್ನು ಹೆಚ್ಚಿಸಲು ಹೆಣಗಾಡುತ್ತಾರೆ. ನಿಮ್ಮ ಸ್ನೇಹ ಬಳಗದಲ್ಲಿ ತೆಳ್ಳಗಿನವರು ಇದ್ದರೆ ಹೇಳುವುದನ್ನು ಕೇಳಬಹುದು, “ಎಷ್ಟು ತಿಂದರೂ ನಾನು ಹೀಗೇ, ದಪ್ಪ ಆಗುವುದಿಲ್ಲ” ಎಂದು. ಅದಾಗ್ಯೂ ತೆಳ್ಳಿನ ವ್ಯಕ್ತಿಗಳು ಸಮಾರಂಭಗಳಿಗೆ ಹೋದಾಗ ಮುಜುಗರಕ್ಕೀಡಾಗುತ್ತಾರೆ. ಹಿರಿಯರು, ಸ್ನೇಹಿತರು ಬಂದು, ನಿನಗೇನು ಮನೆಯಲ್ಲಿ ತಿನ್ನಲು ಕೊಡುವುದಿಲ್ವಾ? ನೀನೇನು ಇಷ್ಟು ಸಪೂರ ಆಗಿದ್ದೀ? ಎಂದು ಪ್ರಶ್ನಿಸುತ್ತಾರೆ. ಇನ್ನು ಕೆಲವರು ನೈಜವಾಗಿ ಒಂಟೆಯನ್ನು ನೋಡದಿದ್ದರೂ ಫೋಟೋದಲ್ಲಿ ಒಂಟೆಯನ್ನು ನೋಡಿದ ಕೆಲವರು ಬಂದು, ಏನ ನೀಡನು ಒಂಟೆ ರೀತಿ ಆಗಿದ್ದೀ ಎಂದು ಹೇಳುವುದು ಕೂಡ ಇದೆ. ಹೀಗೆ ಸಾರ್ವಜನಿಕವಾಗಿ ದೇಹದ ಮಾನಹರಾಜು ಹಾಕುಲಾಗುತ್ತದೆ.

ಇದೆಲ್ಲಾ ತಮಾಷೆಯಾಗಿದ್ದರೆ, ಇದರ ಹೊರತಾಗಿ ತೆಳ್ಳಗಿನ ವ್ಯಕ್ತಿಗಳು ಸೋಮಾರಿಯಾಗಿರುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಇದು ಗಂಭೀರ ವಿಚಾರವಾಗಿದೆ. ಏಕೆಂದರೆ ಜಡ ಜೀವನಶೈಲಿ ಕೆಲವು ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಿದ್ದರೆ ಈ ಜಡ ಜೀವನಶೈಲಿಯನ್ನು ಹೋಗಲಾಡಿವುದು ಅಥವಾ ಬದಲಾಯಿಸುವುದು ಹೇಗೆ? ನೀವು ತೆಳ್ಳಗಿನವರಾಗಿದ್ದರೆ ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಬಹುದು.

ಜಡ ಜೀವನಶೈಲಿಯನ್ನು ಹೇಗೆ ಸೋಲಿಸುವುದು?

  • ಊಟದ ನಂತರ ಸ್ವಲ್ಪ ಹೊತ್ತು ವಾಕಿಂಗ್ ಮಾಡಿ
  • ಕೂತಲ್ಲೇ ಕೂರದೆ ಪ್ರತಿ 90 ನಿಮಿಷಗಳಿಗೊಮ್ಮೆ ದೇಹವು ಚಲನೆಯಲ್ಲಿರುವಂತೆ ನೋಡಿಕೊಳ್ಳಿ
  • ಮನೆಯಿಂದ ಹೊರಬನ್ನಿ ಮತ್ತು ಕಡಿಮೆ ದೂರಕ್ಕೆ ಕಾಲ್ನಡಿಗೆಯಲ್ಲಿ ಹೋಗಲು ಪ್ರಯತ್ನಿಸಿ.
  • ಕೊಂಚ ದೂರದಲ್ಲಿ ಕಚೇರಿ ಅಥವಾ ಅಂಗಡಿಗಳಿದ್ದರೆ ಅಲ್ಲಿಗೆ ಹೋಗುವಾಗ ವಾಹನಗಳನ್ನು ಬಳಸಬೇಡಿ. ಕಾಲ್ನಡಿಗೆಯಲ್ಲೇ ಹೋಗಿ
  • ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ, ಯೋಗಾಭ್ಯಾಸ ಮಾಡಿ
  • ಮೌನವಾಗಿ ಕುಳಿತುಕೊಳ್ಳಬೇಡಿ, ಸ್ನೇಹಿತರೊಂದಿಗೆ, ಮನೆಯವರೊಂದಿಗೆ, ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಾ, ನಗುತ್ತಾ ಇರಿ
  • ಮೊಬೈಲ್​​ನಲ್ಲಿ ಮಾತನಾಡುವಾಗ ಆಕಡೆ ಈಕಡೆ ನಡೆದಾಡಿ
  • ಬಸ್​ನಲ್ಲಿ ಓಡಾಡುವಾಗ ಕುಳಿತುಕೊಳ್ಳಬೇಡಿ, ಆದಷ್ಟು ನಿಂತುಕೊಂಡೇ ಪ್ರಯಾಣಿಸಿ

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಫಿಟ್‌ನೆಸ್ ಕಾರ್ಯವನ್ನು ಪ್ರಾರಂಭಿಸುವ ಮೊದಲು ಅಥವಾ ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ.

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ