ಕಚೇರಿ ಬಿಟ್ಟು ದೂರದಲ್ಲಿ ಕೆಲಸ ಮಾಡುವುದರಿಂದ ಕಚೇರಿ ಮತ್ತು ಮನೆಗೆ ಓಡಾಡುವ ಸಮಯವನ್ನು ಸಾಕಷ್ಟು ಉಳಿಸಬಹುದು. ಆದರೆ ಈ ಹೊಸ ಯೋಚನೆಯ ಒಂದು ದೊಡ್ಡ ನ್ಯೂನ್ಯತೆ ಎಂದರೆ ಜನರು ವಿರಾಮವಿಲ್ಲವೇ ಅದೆಷ್ಟೋ ಕಚೇರಿಗೆ ಸಂಬಂಧಿಸಿದ ಮೀಟಿಂಗ್ಗಳನ್ನು ಸಹಿಸಿಕೊಳ್ಳುವುದು. ಈ ಕುರಿತಂತೆ ಹೊಸ ಅಧ್ಯಯನವೊಂದು ನಡೆದಿದ್ದು, ಹಗಲಿನಲ್ಲಿ ಬೇಕಾದ ವಿರಾಮದ ಮಹತ್ವವನ್ನು ತಿಳಿಸಿದೆ. ಮೈಕ್ರೋಸಾಫ್ಟ್ ಹ್ಯೂಮನ್ ಫ್ಯಾಕ್ಟರ್ಸ್ಲ್ಯಾಬ್ ನಡೆಸಿದ ಸಂಶೋಧನೆಯನ್ನು ಪ್ರಮುಖ ವೃತ್ತಿಪರರು ಉಲ್ಲೇಖಿಸಿದ್ದಾರೆ. ಮತ್ತು ದೂರದಿಂದ ಕೆಲಸ ಮಾಡುವ ಜನರು ಮೆದುಳಿಗೆ ಒಡ್ಡುತ್ತಿರುವ ಒತ್ತಡವನ್ನು ಸುಧಾರಿಸಿಕೊಳ್ಳಲು ಕೆಲಸದ ಸಮಯದಲ್ಲಿ ಸಣ್ಣ ವಿರಾಮವನ್ನು ತೆಗೆದುಕೊಳ್ಳುವುದು ಕಡ್ಡಾಯ ಎಂದು ಪ್ರತಿಪಾದಿಸಿದ್ದಾರೆ.
ದಿ ಹಸ್ಟಲ್ ನ್ಯೂಸ್ ಔಟ್ಲೆಟ್ನಲ್ಲಿ ವಿಷಯ ವಿಶ್ಲೇಷಕರಾಗಿ ಕೆಲಸ ಮಾಡುತ್ತಿರುವ ಸ್ಟೈಫ್ ಸ್ಮಿತ್ ಹೇಳಿದಂತೆ, ಅವರು ದೂರದಿಂದಲೆ ಕೆಲಸ ಮಾಡುವುದನ್ನು ಪ್ರೀತಿಸುತ್ತಾರೆ. ಮತ್ತು ಅದರ ಕುರಿತಾಗಿ ತನ್ನ ಬ್ಲಾಗ್ನಲ್ಲಿ ಬರೆದಿದ್ದಾರೆ. ಹಾಗೆಯೇ ಅವರು ಟ್ವೀಟ್ ಮಾಡಿದ ಪೋಸ್ಟ್ ಮೈಕ್ರೋಸಾಫ್ಟ್ ಸಂಶೋಧನೆಯದ್ದಾಗಿದೆ.
If you weren’t convinced of Zoom fatigue yet, Microsoft’s Human Factors Lab measured brain activity of workers in 4 back-to-back meetings.
The result?
Without breaks, lots of stress.
This is your friendly reminder to Marie Kondo your calendar.
? less stress
? more stress pic.twitter.com/GKYvWn47pc— Steph Smith (@stephsmithio) April 22, 2021
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ತಿಳಿಸುವಂತೆ ಕಚೇರಿಯ ಮೀಟಿಂಗ್ನಲ್ಲಿ ಕಚೇರಿ ಸಿಬ್ಬಂದಿಯ ಮೆದುಳು ಯಾವ ರೀತಿ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಮತ್ತು ಬ್ರೇಕ್ ತೆಗೆದುಕೊಂಡಾಗ ಮೆದುಳಿನ ಕಾರ್ಯ ಹೇಗಿರುತ್ತದೆ ಎಂಬುದನ್ನು ನಕ್ಷೆಯ ಮೂಲಕ ತಿಳಿಸಲಾಗಿದೆ. ನೆಟ್ಟಿಗರು ಈ ವಿಷವನ್ನು ಒಪ್ಪಿದ್ದಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ಹೌದು. ದಯವಿಟ್ಟು ಬ್ಯಾಕ್-ಟು-ಬ್ಯಾಕ್ ಮೀಟಿಂಗ್ಗಳನ್ನು ನಿಲ್ಲಿಸಿ ಎಂದು ನೆಟ್ಟಿಗರು ಸ್ಮಿತ್ ಅವರ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
ಸಣ್ಣ ವಿರಾಮದ ಸಮಯದಲ್ಲಿ ಕಿಟಕಿಗಳನ್ನು ತೆರೆಯಬೇಕು. ತಮ್ಮ ಕೆಲಸಕ್ಕೆ ಅನುಗುಣವಾಗಿ ಸೂರ್ಯನ ಬೆಳಕನ್ನು ಸ್ಪರ್ಶಿಸಿ ಎಂದು ಇನ್ನೋರ್ವರು ಸೂಚನೆ ನೀಡಿದ್ದಾರೆ. ಯೋಜನೆಯನ್ನು ಮೇಲ್ವಿಚಾರಣೆ ಮಾಡಿದ ಮೈಕ್ರೊಸಾಫ್ಟ್ ಹ್ಯೂಮನ್ ಫ್ಯಾಕ್ಟರ್ಸ್ ಎಂಜಿನಿಯರಿಂಗ್ ಸಮೂಹದ ಹಿರಿಯ ನಿರ್ದೇಶಕ ಮೈಕಲ್ ಬೋಹನ್, ತಮ್ಮ ಸಂಶೋಧನೆಯು ಮೆದುಳಿಗೆ ವಿರಾಮ ನೀಡುವಲ್ಲಿ ಪ್ರಮುಖವಾಗಿದೆ. ಮೀಟಿಂಗ್ನಲ್ಲಿ ಒಬ್ಬರು ಕಡಿಮೆ ದಣಿದಂತೆ ಅನಿಸಬಹುದು. ಆ ಸಮಯದಲ್ಲಿ ಅವರು ಸುಧಾರಿಸಿಕೊಳ್ಳುತ್ತಾರೆ. ಮತ್ತು ಮೀಟಿಂಗ್ನಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ. ಸಾಂಕ್ರಾಮಿಕ ರೋಗದಿಂದಾಗಿ ಬ್ಯಾಕ್-ಟು-ಬ್ಯಾಕ್ ಮೀಟಿಂಗ್ಗಳು ಸುಲಭವಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಕೆಲವರಲ್ಲಿ ಮಾನಸಿಕ ಸಮಸ್ಯೆಗಳು