ಅಂಟುಜಾಡ್ಯದಂತೆ ಇಂದಿಗೂ ಪ್ರಪಂಚದಾದ್ಯಂತ ಮಹಿಳೆಯರಲ್ಲಿದೆ ಮುಟ್ಟು, ಋತುಚಕ್ರ, ಹೊರಗಾಗುವ ಗೊಡ್ಡು ಸಂಪ್ರದಾಯ -ಫಿಲಿಪೈನ್ಸ್​​ನಲ್ಲಿದೆ ಶಾಕಿಂಗ್​ ಆಚರಣೆ

|

Updated on: Sep 16, 2023 | 12:52 PM

Menstruation superstitions: ಆ 36 ಮೂಢನಂಬಿಕೆಗಳು! ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರನ್ನ ಮನೆಯಿಂದ, ಗ್ರಾಮದಿಂದ ಹೊರಗಿಟ್ಟು ಮೌಢ್ಯಾಚರಣೆ ಮಾಡುವುದು ಅಂಟುಜಾಡ್ಯದಂತೆ. ಪ್ರಪಂಚದಾದ್ಯಂತ ಈ ಗೊಡ್ಡು ಸಂಪ್ರದಾಯವನ್ನು ಇಂದಿನ ಆಧುನಿಕ ಸಮಾಜದಲ್ಲಿಯೂ ಯಾವುದೇ ಎಗ್ಗುಸಿಗ್ಗು ಇಲ್ಲದೆ ಆಚರಿಸುತ್ತಾರೆ. ಇದರ ಕುರಿತು ವಿವರವಾದ ಲೇಖನ

ಅಂಟುಜಾಡ್ಯದಂತೆ ಇಂದಿಗೂ ಪ್ರಪಂಚದಾದ್ಯಂತ ಮಹಿಳೆಯರಲ್ಲಿದೆ ಮುಟ್ಟು, ಋತುಚಕ್ರ, ಹೊರಗಾಗುವ ಗೊಡ್ಡು ಸಂಪ್ರದಾಯ -ಫಿಲಿಪೈನ್ಸ್​​ನಲ್ಲಿದೆ ಶಾಕಿಂಗ್​ ಆಚರಣೆ
ಅಂಟುಜಾಢ್ಯದಂತೆ ಇಂದಿಗೂ ಪ್ರಪಂಚದಾದ್ಯಂತ ಮಹಿಳೆಯರಲ್ಲಿರುವ ಮುಟ್ಟು, ಋತುಚಕ್ರ, ಹೊರಗಾಗುವ ಗೊಡ್ಡು ಸಂಪ್ರದಾಯ
Follow us on

ಮುಟ್ಟು (Menstruation) ಅಥವಾ ಋತುಚಕ್ರ ಅವಧಿಯಲ್ಲಿ (periods) ಮಹಿಳೆಯರು ಕೆಲ ನಿರ್ದಿಷ್ಟ ಸಸ್ಯಗಳನ್ನು ಮುಟ್ಟಬಾರದು, ಮನೆಯಲ್ಲಿ ತಿಂಡಿ-ತೀರ್ಥ ಮಾಡಬಾರದು ಎಂಬೆಲ್ಲಾ ಅಂಟುಜಾಡ್ಯದಂತೆ ಹಲವಾರು ಮೂಢನಂಬಿಕೆಗಳು ಚಾಲ್ತಿಯಲ್ಲಿವೆ (myths). ಪ್ರಪಂಚದಾದ್ಯಂತದ ಈ ಬಗ್ಗೆ ಪುರಾಣಗಳು ಕೇಳಿಬರುತ್ತವೆ. ಕೆಲವು ಈ ಮೊದಲು ನಾವು ಕೇಳಿದ್ದಂತಹವೇ ಆಗಿದ್ದರೆ, ಇನ್ನು ಹಲವು ನಮಗೆ ಹೊಚ್ಚ ಹೊಸ ಮೌಢ್ಯಗಳಾಗಿವೆ. ಈ ಮೂಢನಂಬಿಕೆಗಳು (superstitions) ಸಮಾಜದಲ್ಲಿ ಬಹಳಷ್ಟು ನಡವಳಿಕೆಗಳ ಮೇಲಿನ ನಿರ್ಬಂಧಗಳಾಗಿವೆ, ಲಿಂಗ ಆಧಾರಿತ ನಿಷೇಧಗಳು ಮತ್ತು ತಾರತಮ್ಯ ಧೋರಣೆಗಳು ಇಲ್ಲಿ ಮನೆಮಾಡಿವೆ. ಈ ಮೌಢ್ಯ ಪುರಾಣಗಳು ಮಹಿಳೆಯರಿಗೆ ತಮ್ಮ ಋತುಚಕ್ರದ ಬಗ್ಗೆ ಮಾತನಾಡಲು ಕಷ್ಟಕರವಾಗಿಸುತ್ತದೆ – ಇದು ಮೌನ, ​​ಅವಮಾನ ಮತ್ತು ತಪ್ಪು ಕಲ್ಪನೆಗೆ ಕಾರಣವಾಗುತ್ತದೆ. ಮುಟ್ಟಿಗೆ ಸಂಬಂಧಿಸಿದ ಜಾಗತಿಕ ಮೌಢ್ಯ ಪುರಾಣಗಳು ಹೀಗಿವೆ. ಯಾವ ದೇಶದಲ್ಲಿ ಮಹಿಳೆ ಪಿರಿಯಡ್ ನಲ್ಲಿರುವಾಗ ಏನೆಲ್ಲ ಕಟ್ಟುಪಾಡುಗಳನ್ನು ಅನುಭವಿಸಬೇಕು ಎಂಬ ವಿವರ ಇಲ್ಲಿದೆ (ಇವುಗಳಲ್ಲಿ ಬಹುತೇಕ ಆಚರಣೆಗಳು ಕಾಮನ್​ ಆಗಿ ಸಾಮಾನ್ಯವಾಗಿವೆ):

ಯು.ಎಸ್​/ಯು.ಕೆ:

1. ನೀವು ಅವಲಕ್ಷಣದವರು. 2. ಹತ್ತಿಉಂಡೆಗಳು (ಟ್ಯಾಂಪೂನ್‌) ನಿಮ್ಮ ಕನ್ಯಾಪೊರೆಯನ್ನು ಒಡೆಯುತ್ತವೆ ಮತ್ತು ನಿಮ್ಮನ್ನು ಅಶುದ್ಧರನ್ನಾಗಿ ಮಾಡುತ್ತವೆ. 3. ಸ್ನಾನ ಮಾಡುವಂತಿಲ್ಲ. 4. ಪ್ರತಿಯೊಬ್ಬರೂ Premenstrual syndrome (PMS) ಗೆ ಒಳಗಾಗುತ್ತಾರೆ… ಮುಂದೆ ಅದು ಯಾವಾಗಲೂ ಗಡಿಬಿಡಿಗೊಳಿಸುತ್ತದೆ/ ಕಿರಿಕಿರಿಯುಂಟುಮಾಡುತ್ತದೆ. 5. ಕ್ಯಾಂಪ್​ ಮಾಡಲು ಹೋಗಬಾರದು. ಏಕೆಂದರೆ ಪ್ರಾಣಿಗಳು (ಕರಡಿ) ಅದನ್ನು ದೂರದಿಂದ ವಾಸನೆ ಮಾಡುತ್ತದೆ. 6. ನಿಮ್ಮ ಮೊದಲ ಋತುಚಕ್ರದವರೆಗೂ ತಲೆಗೂದಲನ್ನು ಕಟ್​​ ಮಾಡಬಾರದು. 7. ಉಪ್ಪಿನಕಾಯಿ ಹಾಕುವ ಪ್ರಕ್ರಿಯೆಯಲ್ಲಿ ನೀವು ಆ ತರಕಾರಿಯನ್ನು ಮುಟ್ಟಿದರೆ ಅದು ಉಪ್ಪಿನಕಾಯಿಯಾಗುವುದಿಲ್ಲ ಅಥವಾ ಕೆಟ್ಟುಹೋಗುತ್ತದೆ.

ನೇಪಾಳ:

8. ನೀವು ಮನೆಗಳಲ್ಲಿ ಇರುವಂತಿಲ್ಲ ಅಥವಾ ಯಾರೊಂದಿಗೂ ಸಂಪರ್ಕ ಹೊಂದುವಂತಿಲ್ಲ.

ಇಸ್ರೇಲ್:

9. ನೀವು ಮೊದಲ ಬಾರಿಗೆ ಮುಟ್ಟು ಆದಾಗ ನಿಮ್ಮ ಮುಖದ ಮೇಲೆ ಮನೆಯ ಹಿರಿಯರು ಹೊಡೆಯುತ್ತಾರೆ. ಇದರಿಂದ ಮುಂದೆ ನೀವು ಬೆಳೆಯುತ್ತಾ ಸುಂದರವಾದ ಕೆಂಪು ಕೆನ್ನೆಗಳನ್ನು ಹೊಂದಿರುತ್ತೀರಿ. 10. ನಿಮ್ಮ ಮುಟ್ಟಿನ ಅವಧಿಯಲ್ಲಿ ನೀವು ಬಿಸಿ ನೀರಿನಿಂದ ಸ್ನಾನ ಮಾಡಿದರೆ ನಿಮಗೆ ರಕ್ತಸ್ರಾವ ಹೆಚ್ಚಾಗುತ್ತದೆ.

ಕೊಲಂಬಿಯಾ

11. ನೀವು ತಂಪು ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಅವು ನಿಮಗೆ ಸ್ನಾಯು ಸೆಳೆತ ತರುತ್ತದೆ. 12. ನಿಮ್ಮ ತಲೆಗೆ ಸ್ನಾನ ಮಾಡಬೇಡಿ ಅಥವಾ ತಲೆಗೂದಲು ಕತ್ತರಿಸಬೇಡಿ.

ಪೋಲೆಂಡ್

13. ಲೈಂಗಿಕ ಕ್ರಿಯೆ ನಡೆಸಿದರೆ ಅದರಿಂದ ನಿಮ್ಮ ಸಂಗಾತಿ ಸಾಯಬಹುದು.

ಇದನ್ನೂ ಓದಿ: ಗುಬ್ಬಿ ತಾಲೂಕಿನಲ್ಲಿ ಋತುಚಕ್ರವಾದ ಮಹಿಳೆಯರನ್ನು ಊರಿಂದ ಹೊರಗಿಡುವ ಸಂಪ್ರದಾಯ, ಗ್ರಾಮಸ್ಥರಿಗೆ ಚಳಿ ಬಿಡಿಸಿದ ತಹಶೀಲ್ದಾರ್ ಆರತಿ

ರೊಮೇನಿಯಾ

14. ನೀವು ಹೂವುಗಳನ್ನು ಸ್ಪರ್ಶಿಸುವಂತಿಲ್ಲ ಹಾಗೆ ಮಾಡಿದರೆ ಅವು ಬೇಗನೆ ಬಾಡುತ್ತವೆ.

ಮಲೇಷ್ಯಾ

15. ನಿಮ್ಮ ಪ್ಯಾಡ್‌ಗಳನ್ನು ಎಸೆಯುವ ಮೊದಲು ನೀವು ಅವುಗಳನ್ನು ತೊಳೆಯಬೇಕು. ಇಲ್ಲದಿದ್ದರೆ ದೆವ್ವ ಬಂದು ನಿಮ್ಮನ್ನು ಕಾಡುತ್ತದೆ.

ಭಾರತ

16. ನೀವು ಅಡುಗೆಮನೆಗೆ ಪ್ರವೇಶಿಸುವಂತಿಲ್ಲ, ಅಡುಗೆ ಮಾಡುವಂತಿಲ್ಲ. 17. ನೀವು ಪೂಜಾ ಸ್ಥಳವನ್ನು ಪ್ರವೇಶಿಸುವಂತಿಲ್ಲ. 18. ನಾಲ್ಕನೇ ದಿನದಂದು ಅಥವಾ ನಂತರ ನೀವು ತಲೆಗೆ ಸ್ನಾನ ಮಾಡಬಹುದು. ಆನಂತರವಷ್ಟೇ ನೀವು ದೇವರ ಮಂದಿರಕ್ಕೆ ಪ್ರವೇಶಿಸಬಹುದು. 19. ನಿಮ್ಮನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿಕೊಳ್ಳಬೆಕು. ಅದಕ್ಕೇ ನಿಮ್ಮ ಮುಟ್ಟಿನ ಅವಧಿಯ ಮೊದಲ ದಿನದಂದು ತಲೆಗೂದಲು ತೊಳೆಯಬೇಕು. ಇದೇ ಕ್ರಮದಲ್ಲಿ 20. ನೀವು ನಿಮ್ಮ ಕೂದಲನ್ನು ತೊಳೆದರೆ, ನಿಮ್ಮ ರಕ್ತಸ್ರಾವದ ಹರಿವು ಕಡಿಮೆಯಾಗುತ್ತದೆ ಮತ್ತು ಇದು ನಂತರದ ಜೀವನದಲ್ಲಿ ನಿಮ್ಮ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ.

ಮೆಕ್ಸಿಕೋ

21. ನಿಮ್ಮ ಗರ್ಭಾಶಯದ ಆರೈಕೆಗಾಗಿ ನೀವು ಕೆಲವೊಂದು ನೃತ್ಯಗಳ ಮಾಡುವುದನ್ನು ತಪ್ಪಿಸಬೇಕು. 22. ನಿಮ್ಮ ಉಗುರುಗಳಿಗೆ ಬಣ್ಣ ಹಚ್ಚಬಾರದು, ನಿಮ್ಮ ತಲೆಗೂದಲನ್ನು ತೊಳೆಯಬಾರದು ಅಥವಾ ನಿಂಬೆ ಪಾನಕವನ್ನು ಕುಡಿಯಬಾರದು.

ಬ್ರೆಜಿಲ್

23. ನಿಮ್ಮ ತಲೆಗೂದಲನ್ನು ತೊಳೆಯಬಾರದು. 24. ನೀವು ಬರಿಗಾಲಿನಲ್ಲಿ ನಡೆಯುವಂತಿಲ್ಲ. ಏಕೆಂದರೆ ಸ್ನಾಯು ಸೆಳೆತ ಬರಬಹುದು.

ಅರ್ಜೆಂಟೀನಾ

25. ನೀವು ಹಾಲಿನ ಕೆನೆ ಮಾಡುವಂತಿಲ್ಲ, ಅದು ಮೊಸರು ಆಗಿಬಿಡುತ್ತದೆ. 26. ನೀವು ಸ್ನಾನ ಮಾಡಿದರೆ, ನಿಮ್ಮ ರಕ್ತಸ್ರಾವವು ನಿಲ್ಲುತ್ತದೆ ಮತ್ತು ರಕ್ತಸ್ರಾವ ಸ್ಥಗಿತಗಳ್ಳುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಫಿಲಿಪೈನ್ಸ್

27. ನಿಮ್ಮ ಮೊದಲ ಋತುಚಕ್ರದ ಅವಧಿಯಲ್ಲಿ ಮೊದಲ ಮುಟ್ಟಿನ ರಕ್ತದಿಂದ ನಿಮ್ಮ ಮುಖವನ್ನು ತೊಳೆಯಬೇಕು. ಹಾಗೆ ಮಾಡಿದರೆ ಓಳ್ಳೆಯ ಚರ್ಮವನ್ನು ಹೊಂದಲು ಸಾಧ್ಯವಾಗುತ್ತದೆ.

ಇಟಲಿ

28. ಮುಟ್ಟಿನ ಅವಧಿಯಲ್ಲಿ ಹಿಟ್ಟು ಕಲಸಿದರೆ ಅದು ಸರಿಯಾಗಿ ಬರುವುದಿಲ್ಲ. 29. ನೀವು ಸಸ್ಯಗಳನ್ನು ಸ್ಪರ್ಶಿಸುವಂತಿಲ್ಲ. 30. ನೀವು ಮಾಡುವ ಎಲ್ಲ ಅಡುಗೆಯೂ ಹಾಳಾಗುತ್ತದೆ. 31. ನೀವು ಬೀಚ್ ಅಥವಾ ಸ್ವಿಮ್ಮಿಂಗ್​​ ಪೂಲ್​​ಗೆ ಹೋಗುವಂತಿಲ್ಲ (ಅಂದರೆ ನೀರಿನೊಂದಿಗೆ ಸಂಪರ್ಕವಿಲ್ಲ).

ಫ್ರಾನ್ಸ್

32. ನೀವು ಮಯನೀಸ್ ಮಾಡುವಂತಿಲ್ಲ. ಅದು ಮೊಸರು ಆಗಿಬಿಡುತ್ತದೆ.

ಜಪಾನ್

33. ನಿಮಗೆ ಅಡುಗೆ ರುಚಿಯಲ್ಲಿ ಅಸಮತೋಲನ, ಅಸ್ವಾದಿಷ್ಟ ಕಂಡುಬರುತ್ತದೆ. ಹಾಗಾಗಿ ನೀವು ಸುಶಿ (ಅಡುಗೆ) ಮಾಡುವಂತಿಲ್ಲ.

ತೈವಾನ್

34. ಸ್ನಾನದ ನಂತರ ನೀವು ತಲೆಗೂದಲನ್ನು ಒಣಗಿಸಿಕೊಳ್ಳಬೇಕು.

ವೆನೆಜುವೆಲಾ

35. ನಿಮ್ಮ ಬಿಕಿನಿ ಭಾಗದಲ್ಲಿ ಶೇವಿಂಗ್ ಮಾಡುವುದನ್ನು ತಪ್ಪಿಸಿ, ಏಕೆಂದರೆ ಈ ಅವಧಿಯಲ್ಲಿ ಚರ್ಮವು ಕಡುಬಣ್ಣದ್ದಾಗಿ ಬಿಡುತ್ತದೆ.

ಬೊಲಿವಿಯಾ

36. ನೀವು ಮುಟ್ಟಿನ ಅಧಿಯಲ್ಲಿ ಶಿಶುವನ್ನು ತೊಟ್ಟಿಲಿಗೆ ಹಾಕಿ ತೂಗುವಂತಿಲ್ಲ. ಅಂದರೆ ಶಿಶುವಿನ ಪಾಲನೆ ಮಡುವಂತಿಲ್ಲ. ಹಾಗೆ ಮಾಡಿದರೆ ನಿಮ್ಮ ಮಗು ಅನಾರೋಗ್ಯಕ್ಕೆ ತುತ್ತಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Sat, 16 September 23