
ರಕ್ತದಲ್ಲಿನ ಸಕ್ಕರೆ ಮಟ್ಟ (low blood sugar) ಕಡಿಮೆಯಾದರೆ ತುಂಬಾ ಅಪಾಯವನ್ನು ಎದುರಿಸಬೇಕಾಗುತ್ತದೆ. ಇದೀಗ ಇಂತಹ ಪರಿಸ್ಥಿತಿಯನ್ನು ಆರೋಗ್ಯ ಸಚಿವರೊಬ್ಬರು ಅನುಭವಿಸಿದ್ದಾರೆ. ಸ್ವೀಡನ್‌ನ ಹೊಸದಾಗಿ ನೇಮಕಗೊಂಡ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಈ ವೇಳೆ ಅವರು ಇದ್ದಕ್ಕಿದ್ದಂತೆ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಇದು ಟಿವಿಯಲ್ಲಿ ನೇರಪ್ರಸಾರವಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದ ಸಚಿವೆ ಎಲಿಸಬೆಟ್ ಲ್ಯಾನ್ನ್ನಿ ತಕ್ಷಣ ಅಲ್ಲಿದ್ದ ಸಿಬ್ಬಂದಿಗಳು ಅವರನ್ನು ಎತ್ತಲು ಸಹಾಯ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಸುಧಾರಿಸಿಕೊಂಡ ಎಲಿಸಬೆಟ್ ಲ್ಯಾನ್, ಮತ್ತೆ ವೇದಿಕೆಗೆ ಬಂದು ನನಗೆ ಹೈಪೊಗ್ಲಿಸಿಮಿಯಾ ಎಂದೂ ಕರೆಯಲ್ಪಡುವ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿರುವ ಕಾರಣ ಈ ರೀತಿ ಆಗಿದೆ ಎಂದು ಅದರ ಬಗ್ಗೆ ವಿವರಿಸಿದ್ದಾರೆ.
ಈ ಘಟನೆ ಸೆ.9ರಂದು ನಡೆದಿದೆ. ಸ್ವೀಡನ್‌ನ ಹೊಸ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ಅವರು ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಮತ್ತು ಇತರ ಅಧಿಕಾರಿಗಳ ಮುಂದೆಯೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಅಲ್ಲಿದ್ದ ಸಿಬ್ಬಂದಿಗಳು ಸಹಾಯ ಮಾಡಿ ಅವರನ್ನು ಚೇತರಿಸಿಕೊಳ್ಳವಂತೆ ಮಾಡಿದ್ದಾರೆ. ನಂತರ ಮತ್ತೆ ವೇದಿಕೆಗೆ ಬಂದಿದ್ದಾರೆ. ನನಗೆ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದ ಕಾರಣ ಹೀಗೆ ಆಗಿದೆ ಎಂದು ವಿವರಿಸಿದ್ದಾರೆ. ಸಿಬ್ಬಂದಿಗಳಿಗೆ ಅವರು ಧನ್ಯವಾದವನ್ನು ಕೂಡ ಹೇಳಿದ್ದಾರೆ.
ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಅಥವಾ ವೈದ್ಯಕೀಯವಾಗಿ ಹೈಪೊಗ್ಲಿಸಿಮಿಯಾ ಎಂದು ಕರೆಯಲ್ಪಡುವ ಈ ಆರೋಗ್ಯ ಸಮಸ್ಯೆಯು, ಗ್ಲೂಕೋಸ್ ಮಟ್ಟವು ಆರೋಗ್ಯಕರ ಮಿತಿಗಳಿಗಿಂತ ಕಡಿಮೆಯಾದಾಗ ಸಂಭವಿಸುತ್ತದೆ. ಸಾಮಾನ್ಯವಾಗಿ ಮಧುಮೇಹಿಗಳಿಗೆ 70 mg/dL ಗಿಂತ ಕಡಿಮೆ, ಅಥವಾ ಮಧುಮೇಹವಿಲ್ಲದವರಿಗೆ 55 mg/dL ಗಿಂತ ಕಡಿಮೆಯಾದಾಗ ಇದು ಸಂಭವಿಸುತ್ತದೆ. ಗ್ಲೂಕೋಸ್ ಮೆದುಳಿನ ಪ್ರಾಥಮಿಕ ಶಕ್ತಿಯ ಮೂಲವಾಗಿದೆ, ಆದ್ದರಿಂದ ಹಠಾತ್ ಕುಸಿತದಿಂದ ಮಾನಸಿಕ ಕಾರ್ಯವನ್ನು ದುರ್ಬಲಗೊಳಿಸುತ್ತದೆ, ಮೂರ್ಛೆ ಹೋಗಬಹುದು ಮತ್ತು ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ರೋಗಗ್ರಸ್ತವಾಗಿ ಕಾಡಬಹುದು. ಕೆಲವೊಂದು ಕೋಮಾಕ್ಕೆ ಹೋಗುವ ಸಾಧ್ಯತೆಗಳು ಕೂಡ ಇದೆ.
ಈ ರೀತಿ ಆಗುವ ಮೊದಲು ಕೆಲವೊಂದು ಲಕ್ಷಣಗಳು ಕಂಡು ಬರುತ್ತದೆ. ಹಾಗಾಗಿ ಇದನ್ನು ಪತ್ತೆ ಮಾಡಿ ಎಚ್ಚರ ವಹಿಸಿದರೆ ಜೀವ ಉಳಿಯುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತಷ್ಟು ಕಡಿಮೆಯಾದರೆ, ಮಾತು ಅಸ್ಪಷ್ಟವಾಗುವುದು, ಮೂರ್ಛೆ ಹೋಗುವುದು, ಸಮನ್ವಯದ ನಷ್ಟ ಮತ್ತು ಪ್ರಜ್ಞೆ ತಪ್ಪುವುದು ಮುಂತಾದ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಮಧುಮೇಹ ಇರುವವರಲ್ಲಿ, ವಿಶೇಷವಾಗಿ ಇನ್ಸುಲಿನ್ ಅಥವಾ ಸಲ್ಫೋನಿಲ್ಯುರಿಯಾಸ್ ಅಥವಾ ಮೆಗ್ಲಿಟಿನೈಡ್‌ಗಳಂತಹ ಕೆಲವು ಔಷಧಿಗಳನ್ನು ಬಳಸುವವರಲ್ಲಿ ಅಪಾಯ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ಕಿವಿಯಲ್ಲಿ ಆಗ್ಗಾಗೆ ಉಂಟಾಗುವ ಅಡಚಣೆ ನಿವಾರಿಸುವುದು ಹೇಗೆ? ಇದರ ಒಂದು ಹನಿ ಸಾಕು
ಸಮತೋಲಿತ ಊಟಗಳೊಂದಿಗೆ ನಿಯಮಿತವಾಗಿ ತಿನ್ನಿರಿ: ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸಂಯೋಜಿಸುವ ಊಟ ಮತ್ತು ತಿಂಡಿ ತಿನ್ನುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿ ಇರಿಸಿ.
ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಗೆ 15-15 ನಿಯಮ ಬಳಸಿ : ನೀವು ಕಡಿಮೆ (ರಕ್ತದಲ್ಲಿನ ಸಕ್ಕರೆ 70 mg/dL ಗಿಂತ ಕಡಿಮೆ) ಕಂಡು ಬಂದರೆ, 15 ಗ್ರಾಂ ವೇಗವಾಗಿ ಕಾರ್ಯನಿರ್ವಹಿಸುವ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿ, 15 ನಿಮಿಷ ಕಾಯಿರಿ, ನಂತರ ಮತ್ತೆ ನೋಡಿ. ಇನ್ನೂ ಕಡಿಮೆಯಿದ್ದರೆ ಮತ್ತೆ ಹೀಗೆ ಮಾಡಿ. ಸ್ಥಿರವಾದ ನಂತರ ಅದೇ ಮಟ್ಟವನ್ನು ಕಾಪಾಡಿ.
ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಗಾಗ್ಗೆ ಪರೀಕ್ಷಿಸಿಕೊಳ್ಳಿ ಅಥವಾ ನಿರಂತರ ಗ್ಲೂಕೋಸ್ ಮಾನಿಟರ್ (CGM) ಬಳಸಿ. ಇದು ನಿಮ್ಮ ಕಡಿಮೆ ಸೆಕ್ಕರೆ ಮಟ್ಟದಿಂದ ಬಗ್ಗೆ ತಿಳಿಯುತ್ತದೆ. ಹಾಗೆ ಅದನ್ನು ನಿಯಂತ್ರಣದಲ್ಲಿ ಇಡಲು ಎಚ್ಚರಿಸುತ್ತದೆ.
ಈ ವಸ್ತುಗಳು ನಿಮ್ಮ ಬಳಿ ಇಟ್ಟುಕೊಳ್ಳಿ: ಗ್ಲೂಕೋಸ್ ಮಾತ್ರೆಗಳು, ಜ್ಯೂಸ್, ಜೇನುತುಪ್ಪ ಅಥವಾ ಕ್ಯಾಂಡಿ ಇಟ್ಟುಕೊಳ್ಳಿ. ಇದರ ಜತೆಗೆ ಗ್ಲುಕಗನ್ ಕಿಟ್ಗಳನ್ನು ಇಟ್ಟುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ