Tea Side Effects: ನೀವು ಚಹಾ ಪ್ರಿಯರೇ?; ಸಂಜೆ ಟೀ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ
ನೀವು ಪ್ರತಿದಿನ ಸಂಜೆ ಚಹಾವನ್ನು ಕುಡಿಯಲು ಇಷ್ಟಪಡುವವರಲ್ಲಿ ಒಬ್ಬರಾಗಿದ್ದೀರಾ? ಇದು ಆರೋಗ್ಯಕರ ಅಭ್ಯಾಸ ಎಂದು ನೀವು ಭಾವಿಸುತ್ತೀರಾ?
ಭಾರತೀಯರು ಚಹಾವನ್ನು (Chai) ಬಹಳ ಇಷ್ಟಪಡುತ್ತಾರೆ. ಅದರಲ್ಲೂ ಹಾಲು ಬೆರೆಸಿ ಮಾಡುವ ಚಹಾ ಎಂದರೆ ಇಷ್ಟಪಡದಿರುವವರೇ ಕಡಿಮೆ. ದಿನಕ್ಕೆ ಐದಾರಕ್ಕಿಂತ ಹೆಚ್ಚು ಲೋಟ ಟೀ (Tea) ಕುಡಿಯುವವರೂ ಇದ್ದಾರೆ. ಬೆಳಗ್ಗೆ ಎದ್ದ ಕೂಡಲೆ ಚಹಾ ಕುಡಿಯದೇ ಇದ್ದರೆ ಕೆಲವರಿಗೆ ದಿನ ಆರಂಭವಾಗುವುದೇ ಇಲ್ಲ. ನೀವು ಕೂಡ ಚಹಾ ಪ್ರಿಯರಾಗಿದ್ದರೆ ಸಂಜೆ ಟೀ ಸೇವಿಸುವುದನ್ನು ಬಿಟ್ಟುಬಿಡುವುದು ಉತ್ತಮ.
ಸಂಜೆ ವೇಳೆ ಟೀ ಕುಡಿಯುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಈ ಬಗ್ಗೆ ಆಯುರ್ವೇದ ತಜ್ಞರಾದ ಡಾ. ಡಿಕ್ಸಾ ಭಾವಸರ್ ಸವಲಿಯಾ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ. ಭಾರತೀಯ ಜನಸಂಖ್ಯೆಯ ಸುಮಾರು ಶೇ. 64ರಷ್ಟು ಜನರು ಪ್ರತಿದಿನ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಅವರಲ್ಲಿ ಶೇ. 30ರಷ್ಟು ಜನರು ಸಂಜೆ ಟೀಯನ್ನು ಕುಡಿಯುತ್ತಾರೆ.
ನೀವು ಪ್ರತಿದಿನ ಸಂಜೆ ಚಹಾವನ್ನು ಕುಡಿಯಲು ಇಷ್ಟಪಡುವವರಲ್ಲಿ ಒಬ್ಬರಾಗಿದ್ದೀರಾ? ಇದು ಆರೋಗ್ಯಕರ ಅಭ್ಯಾಸ ಎಂದು ನೀವು ಭಾವಿಸುತ್ತೀರಾ? ಹಾಗಾದರೆ ಮುಂದೆ ಓದಿ…
ಇದನ್ನೂ ಓದಿ: ಚಹಾ ಕುಡಿಯುವಾಗ ಈ 5 ಆಹಾರದಿಂದ ದೂರವಿರಿ
ಸಂಜೆ ಚಹಾ ಕುಡಿಯುವುದು ಆರೋಗ್ಯಕರವೇ?: “ವೈದ್ಯಕೀಯ ವಿಜ್ಞಾನದ ಪ್ರಕಾರ, ನೀವು ನಿದ್ರೆ ಮಾಡುವುದಕ್ಕಿಂತ 10 ಗಂಟೆಗಳ ಮೊದಲು ಕೆಫೀನ್ ಅನ್ನು ಸೇವಿಸದಿದ್ದರೆ ಉತ್ತಮ ನಿದ್ರೆ ಬರುತ್ತದೆ. ಇದರಿಂದ ಆರೋಗ್ಯಕರ ಜೀರ್ಣಕ್ರಿಯೆಯನ್ನು ಹೊಂದಲು ಸಹಾಯಕವಾಗುತ್ತದೆ.
View this post on Instagram
ಸಂಜೆ ಯಾರು ಚಹಾ ಸೇವಿಸಬಹುದು?: ಡಾ. ಸವಲಿಯಾ ಅವರ ಪ್ರಕಾರ, ಈ ಗುಂಪಿಗೆ ಸೇರುವ ಜನರು ಸಂಜೆಯ ವೇಳೆ ಚಹಾ ಕುಡಿಯಬಹುದು. – ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು – ಆ್ಯಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಲ್ಲದವರು – ಆರೋಗ್ಯಕರ ಜೀರ್ಣಕ್ರಿಯೆಯನ್ನು ಹೊಂದಿರುವವರು – ಯಾರಿಗೆ ಚಹಾ ಕುಡಿಯದಿದ್ದರೆ ಸಾಧ್ಯವೇ ಇಲ್ಲ ಎನ್ನುವಷ್ಟು ಅದಕ್ಕೆ ಅಂಟಿಕೊಂಡಿರುವುದಿಲ್ಲವೋ ಅವರು. – ಯಾರಿಗೆ ನಿದ್ರೆಯ ಸಮಸ್ಯೆಗಳಿಲ್ಲವೋ ಅವರು. – ಯಾರು ಪ್ರತಿದಿನ ಸಮಯಕ್ಕೆ ತಿನ್ನುತ್ತಾರೆಯೋ ಅವರು. – 1 ಕಪ್ ಚಹಾಕ್ಕಿಂತ ಅರ್ಧ ಅಥವಾ ಅದಕ್ಕಿಂತಲೂ ಕಡಿಮೆ ಕುಡಿಯುವವರು.
ಇದನ್ನೂ ಓದಿ: Healthy and Refresh: ಬೆಳಗ್ಗಿನ ಆರೋಗ್ಯಕರ ಆರಂಭಕ್ಕಾಗಿ ಈ ರೀತಿಯಾಗಿ ಚಹಾ ತಯಾರಿಸಿ
ಸಂಜೆ ಚಹಾವನ್ನು ಯಾರು ಕುಡಿಯಬಾರದು?: ಈ ರೋಗಲಕ್ಷಣಗಳನ್ನು ಹೊಂದಿರುವ ಜನರು ಸಂಜೆಯ ವೇಳೆ ಚಹಾವನ್ನು ತ್ಯಜಿಸುವಂತೆ ಡಾ. ಸವಲಿಯಾ ಸಲಹೆ ನೀಡಿದ್ದಾರೆ.
– ನಿದ್ರೆಗೆ ಅಡ್ಡಿಪಡಿಸಿದವರು ಅಥವಾ ನಿದ್ರಾಹೀನತೆಯಿಂದ ಬಳಲುತ್ತಿರುವವರು – ಆತಂಕದಿಂದ ಬಳಲುತ್ತಿರುವವರು ಮತ್ತು ಒತ್ತಡದ ಜೀವನ ನಡೆಸುವವರು – ಅತಿಯಾದ ವಾತ ಸಮಸ್ಯೆಗಳನ್ನು ಹೊಂದಿರುವವರು (ಒಣ ಚರ್ಮ ಮತ್ತು ಕೂದಲು) – ತೂಕ ಹೆಚ್ಚಿಸಲು ಬಯಸುವವರು – ಅನಿಯಮಿತ ಹಸಿವು ಹೊಂದಿರುವ ಜನರು – ಹಾರ್ಮೋನ್ ಸಮಸ್ಯೆಯಿಂದ ಬಳಲುತ್ತಿರುವವರು – ಮಲಬದ್ಧತೆ/ಆಸಿಡಿಟಿ ಅಥವಾ ಗ್ಯಾಸ್ಟ್ರಿಕ್ ತೊಂದರೆ ಇರುವವರು. – ಚಯಾಪಚಯ ಮತ್ತು ಸ್ವಯಂ ನಿರೋಧಕ ಕಾಯಿಲೆ ಇರುವವರು. – ಕಡಿಮೆ ತೂಕ ಹೊಂದಿರುವವರು. – ಆರೋಗ್ಯಕರ ಚರ್ಮ, ಕೂದಲು ಮತ್ತು ಕರುಳು ಬಯಸುವವರು.