ದಿನಕ್ಕೆ 7 ಗಂಟೆಗಿಂತಲೂ ಕಡಿಮೆ ನಿದ್ರೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಅಪಾಯ ತಪ್ಪಿದ್ದಲ್ಲ

ಒಬ್ಬ ಮನುಷ್ಯ ಆರೋಗ್ಯವಾಗಿರಲು ಆತನಿಗೆ ನಿದ್ರೆಯ ಅವಶ್ಯಕತೆ ತುಂಬಾ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಷ್ಟು ಧಾವಂತದ ಜೀವನ ಎಂದರೆ ಜನರಿಗೆ ಸರಿಯಾಗಿ ನಿದ್ರೆ ಮಾಡುವುದಕ್ಕೂ ಸಮಯ ಸಿಗುವುದಿಲ್ಲ. ಇನ್ನು ಕೆಲವರಿಗೆ ಸಿಕ್ಕ ಸಮಯದಲ್ಲಿ ನಿದ್ರೆ ಬರುವುದಿಲ್ಲ. ಹೀಗೆ ಪ್ರತಿನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡಲು ಸಾಧ್ಯವೇ ಆಗುವುದಿಲ್ಲ. ಆದರೆ ಅಸಮರ್ಪಕ ನಿದ್ರೆಯಿಂದ ದೇಹಕ್ಕೆ ಹಾನಿ ಉಂಟಾಗುತ್ತದೆ. ಅದು ಹೇಗೆ? ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದಿನಕ್ಕೆ 7 ಗಂಟೆಗಿಂತಲೂ ಕಡಿಮೆ ನಿದ್ರೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಅಪಾಯ ತಪ್ಪಿದ್ದಲ್ಲ
Sleep Deprivation Side Effects

Updated on: Oct 02, 2025 | 8:30 PM

ಜೀವನದಲ್ಲಿ ಆರೋಗ್ಯ ಚೆನ್ನಾಗಿರಬೇಕು ಎಂದರೆ ಒಳ್ಳೆಯ ಆಹಾರ ಸೇವನೆ ಮಾಡುವುದರ ಜೊತೆಗೆ ಸರಿಯಾಗಿ ನಿದ್ರೆಯನ್ನು ಮಾಡಬೇಕಾಗುತ್ತದೆ. ಇದನ್ನು ನಿರ್ಲಕ್ಷಿಸುವುದರಿಂದಲೇ ನಾನಾ ರೀತಿಯ ಆರೋಗ್ಯ (Health) ಸಮಸ್ಯೆಗಳು ಕಂಡುಬರುತ್ತದೆ. ಸರಿಯಾದ ಆರೋಗ್ಯಕ್ಕೆ ನಿದ್ರೆ ಅವಶ್ಯಕ ಎಂಬುದು ಹಲವು ಸಂಶೋಧನೆಗಳಿಂದಲೂ ಬಹಿರಂಗಗೊಂಡಿದೆ. ದೇಹವು ಸರಿಯಾಗಿ ವಿಶ್ರಾಂತಿ ಪಡೆಯದಿದ್ದಾಗ ಆಯಾಸ ಅಥವಾ ಕಿರಿಕಿರಿ ಉಂಟಾಗುತ್ತದೆ ಕೆಲವೊಮ್ಮೆ ಅದು ಮೀರಿಯೂ ಹೋಗಬಹುದು. ದೀರ್ಘಕಾಲದ ನಿದ್ರೆಯ ಕೊರತೆ, ಅದರಲ್ಲಿಯೂ ರಾತ್ರಿ ಸಮಯದಲ್ಲಿ ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆ (Sleep) ಮಾಡುವುದು ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ಕಾಯಿಲೆಗಳು ಬರುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಗಾದರೆ ಅಸಮರ್ಪಕ ನಿದ್ರೆಯಿಂದ ದೇಹಕ್ಕೆ ಯಾವ ರೀತಿಯ ಹಾನಿ ಉಂಟಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

  • ದಿನಕ್ಕೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಇದರಿಂದ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಸಮಸ್ಯೆಗಳು ಕೂಡ ಉಂಟಾಗಬಹುದು.
  • ಕಡಿಮೆ ನಿದ್ರೆ ಮಾಡುವುದರಿಂದ ಸ್ಮರಣ ಶಕ್ತಿ ಕಡಿಮೆಯಾಗುತ್ತದೆ. ನಿದ್ರಾಹೀನತೆಯು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಏಕಾಗ್ರತೆ ಕಡಿಮೆಯಾಗುವ ಅಪಾಯವೂ ಇದೆ.
  • ಸಾಕಷ್ಟು ನಿದ್ರೆಯ ಕೊರತೆಯು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಸೋಂಕುಗಳು ಸಹ ವೇಗವಾಗಿ ಹರಡುತ್ತವೆ. ಅದಕ್ಕಾಗಿಯೇ ದಿನಕ್ಕೆ ಎಂಟು ಗಂಟೆಗಳ ನಿದ್ರೆ ಅಗತ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
  • ದಿನಕ್ಕೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳು ಅಸ್ಥಿರವಾಗುತ್ತವೆ. ಇದು ಆಹಾರ ಸೇವನೆಯನ್ನು ಹೆಚ್ಚಿಸುತ್ತದೆ ಮತ್ತು ಪರಿಣಾಮವಾಗಿ ತೂಕ ಹೆಚ್ಚಾಗುತ್ತದೆ.
  • ನಿದ್ರೆಯ ಕೊರತೆಯು ಇನ್ಸುಲಿನ್ ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
  • ದಿನಕ್ಕೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಒತ್ತಡ, ಆತಂಕ ಮತ್ತು ಖಿನ್ನತೆ ಉಂಟಾಗುತ್ತದೆ.
  • ಅಗತ್ಯಕ್ಕಿಂತ ಕಡಿಮೆ ನಿದ್ರೆ ಮಾಡುವುದರಿಂದ ಮುಖದ ಅಂದ ಹಾಳಾಗುತ್ತದೆ. ಇದು ಸುಕ್ಕುಗಳು ಮತ್ತು ಕಪ್ಪು ವರ್ತುಲಗಳಿಗೂ ಕಾರಣವಾಗುತ್ತದೆ.
  • ಸಾಕಷ್ಟು ನಿದ್ರೆ ಮಾಡದಿರುವುದು ಪುರುಷರು ಮತ್ತು ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ, ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ದಿನಕ್ಕೆ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಜೀರ್ಣಕಾರಿ ಸಮಸ್ಯೆಗಳು, ಅನಿಲ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ