AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಋತುಚಕ್ರದ ನಂತರವೂ ಅತಿಯಾಗಿ ಬಿಳಿ ವಿಸರ್ಜನೆಯ ಜೊತೆಗೆ ದುರ್ವಾಸನೆ ಬರುತ್ತಿದ್ದರೆ ಚಿಂತಿಸಬೇಡಿ! ಈ ರೀತಿ ಮಾಡಿ

ಋತುಚಕ್ರದ ನಂತರ ಬಿಳಿ ವಿಸರ್ಜನೆ ಅಥವಾ ಸ್ರಾವವಾಗುವುದು ಸಹಜ. ಆದರೆ ಕೆಲವರಲ್ಲಿ ಇದು ಅತಿಯಾಗಿ ಹೋಗುತ್ತದೆ. ಇನ್ನು ಕೆಲವರಲ್ಲಿ ಬಿಳಿ ಸ್ರಾವದಿಂದ ದುರ್ವಾಸನೆ ಕಂಡುಬರುತ್ತದೆ. ಈ ರೀತಿ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಆದರೂ ಕೂಡ ಋತುಚಕ್ರದ ನಂತರ ಬಿಳಿ ಸ್ರಾವವಾಗುವುದು ಸಹಜವೇ ಅಥವಾ ಇಲ್ಲವೇ? ಮುಟ್ಟಿನ ನಂತರ ಬಿಳಿ ಸ್ರಾವ ಅತಿಯಾಗಿ ಕಾಣಿಸಿಕೊಂಡರೆ ಮಹಿಳೆಯರು ಏನು ಮಾಡಬೇಕು? ಈ ರೀತಿಯಾಗಲು ಕಾರಣವೇನು? ಇದನ್ನು ತಡೆಯುವುದು ಹೇಗೆ? ಹೀಗೆ ಹಲವಾರು ರೀತಿಯ ಗೊಂದಲಗಳಿರಬಹುದು. ಅವುಗಳಿಗೆ ಸ್ಪಷ್ಟ ಉತ್ತರ ಈ ಸ್ಟೋರಿಯಲ್ಲಿದೆ.

ಋತುಚಕ್ರದ ನಂತರವೂ ಅತಿಯಾಗಿ ಬಿಳಿ ವಿಸರ್ಜನೆಯ ಜೊತೆಗೆ ದುರ್ವಾಸನೆ ಬರುತ್ತಿದ್ದರೆ ಚಿಂತಿಸಬೇಡಿ! ಈ ರೀತಿ ಮಾಡಿ
White Discharge After Menstruation
ಪ್ರೀತಿ ಭಟ್​, ಗುಣವಂತೆ
|

Updated on: Oct 03, 2025 | 7:58 PM

Share

ಮಹಿಳೆಗೆ ಋತುಚಕ್ರ ಎನ್ನುವಂತದ್ದು ಸಾಮಾನ್ಯ. ಒಂದು ವಯಸ್ಸು ಮೀರುವ ವರೆಗೆ ಪ್ರತಿ ತಿಂಗಳು ಕೂಡ ಈ ಪ್ರಕ್ರಿಯೆ ನಡೆಯುತ್ತದೆ. ಋತುಚಕ್ರದ ನಂತರ ಮಹಿಳೆಯರಲ್ಲಿ ರಕ್ತಸ್ರಾವ ನಿಲ್ಲುತ್ತದೆ, ಆದರೆ ಯೋನಿಯಿಂದ ಬಿಳಿ ವಿಸರ್ಜನೆ (ಲ್ಯುಕೋರಿಯಾ) ಬರುತ್ತದೆ. ಇದು ಎಲ್ಲರಲ್ಲಿಯೂ ಕಂಡುಬರುವ ಸಹಜ ಪ್ರಕ್ರಿಯೆ. ಏಕೆಂದರೆ ಇದು ಯೋನಿಯನ್ನು ಸ್ವಚ್ಛಗೊಳಿಸಲು ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ಕೆಲವರಲ್ಲಿ ಇದು ಅತಿಯಾಗಿ ಹೋಗುತ್ತದೆ. ಇನ್ನು ಕೆಲವರಲ್ಲಿ ಬಿಳಿ ಸ್ರಾವದಿಂದ ದುರ್ವಾಸನೆ ಕಂಡುಬರುತ್ತದೆ. ಈ ರೀತಿ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯ ಮಾಡಬಾರದು. ಇವು ಒಂದು ರೀತಿಯ ಅಸಹಜ ಲಕ್ಷಣಗಳಾಗಿವೆ. ಮಾತ್ರವಲ್ಲ ಕಳವಳಕಾರಿ ವಿಷಯವೂ ಹೌದು. ಹಾಗಾದರೆ ಮುಟ್ಟಿನ ನಂತರ ಬಿಳಿ ಸ್ರಾವ (White Discharge) ಅತಿಯಾಗಿ ಕಾಣಿಸಿಕೊಂಡರೆ ಮಹಿಳೆಯರು ಏನು ಮಾಡಬೇಕು, ಈ ರೀತಿಯಾಗಲು ಕಾರಣವೇನು, ಇದನ್ನು ತಡೆಯುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸ್ತ್ರೀರೋಗ ತಜ್ಞರು ಹೇಳುವ ಪ್ರಕಾರ, ಮುಟ್ಟಿನ ನಂತರ ಕಂಡುಬರುವ ಬಿಳಿ ಸ್ರಾವವು ಒಂದು ರೀತಿಯ ಸೋಂಕಿನ ಸಂಕೇತವಾಗಿರಬಹುದು. ಇದನ್ನು ತಡೆಗಟ್ಟಲು, ಮಹಿಳೆಯರು ಯಾವಾಗಲೂ ಸ್ವಚ್ಛವಾದ ಒಳ ಉಡುಪು ಧರಿಸುವುದು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತಹ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಇದೆಲ್ಲದರ ಜೊತೆಗೆ ಕೆಲವು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು.

ಋತುಚಕ್ರದ ನಂತರ ಬಿಳಿ ಸ್ರಾವ ಏಕೆ ಕಂಡು ಬರುತ್ತದೆ?

ಸಾಮಾನ್ಯವಾಗಿ ಋತುಚಕ್ರದ ನಂತರ, ಈಸ್ಟ್ರೊಜೆನ್ ಮಟ್ಟಗಳು ಹೆಚ್ಚಾಗುತ್ತವೆ. ಇದು ಗರ್ಭಕಂಠವು ಹೆಚ್ಚು ಲೋಳೆಯನ್ನು ಉತ್ಪಾದಿಸುವಂತೆ ಮಾಡುತ್ತದೆ, ಇದು ಬಿಳಿ ಸ್ರಾವದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಂಡೋತ್ಪತ್ತಿ ಸಮೀಪಿಸಿದಾಗ, ಸ್ರಾವವು ಮತ್ತಷ್ಟು ಹೆಚ್ಚಬಹುದು, ಅದು ಬಿಳಿ ಮತ್ತು ಕೆನೆ ಬಣ್ಣದಲ್ಲಿರಬಹುದು. ಋತುಚಕ್ರದ ನಂತರ, ಮೊಟ್ಟೆಯು ಪಕ್ವವಾಗಲು ಪ್ರಾರಂಭಿಸಿದಾಗ, ಕೆಲವು ದಿನಗಳ ವರೆಗೆ ಬಿಳಿ ಅಥವಾ ಸಾಮಾನ್ಯ ಸ್ರಾವ ಇರಬಹುದು. ಆದರೆ ಮಹಿಳೆಯರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇರಬಹುದು, ಋತುಚಕ್ರದ ನಂತರ ಬಿಳಿ ಸ್ರಾವವಾಗುವುದು ಸಹಜವೇ ಅಥವಾ ಇಲ್ಲವೇ? ಮುಟ್ಟಿನ ಆರಂಭಕ್ಕೂ ಮೊದಲೇ ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯರಲ್ಲಿ ಬಿಳಿ ಸ್ರಾವ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಸ್ಥಿತಿಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ತುರಿಕೆ ಅಥವಾ ದುರ್ವಾಸನೆ ಇದ್ದಾಗ ಮಾತ್ರ ಬಿಳಿ ಸ್ರಾವವಾಗುವುದನ್ನು ನಿರ್ಲಕ್ಷ್ಯ ಮಾಡಬಾರದು.

ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸ ಈ ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದಲ್ಲ

ಋತುಚಕ್ರದ ನಂತರ ಬಿಳಿ ವಿಸರ್ಜನೆಯಾಗುವುದಕ್ಕೆ ಏನು ಮಾಡಬೇಕು?

ಖಾಸಗಿ ಭಾಗಗಳ ಸ್ವಚ್ಛತೆಗೆ ವಿಶೇಷ ಗಮನ ಕೊಡಿ. ಒಳ ಉಡುಪು ಹತ್ತಿಯಿಂದ ಮಾಡಿದ್ದಾಗಿರಲಿ ಅಥವಾ ಮೆತ್ತನೆಯ ಬಟ್ಟೆಗಳನ್ನೇ ಧರಿಸಿ. ಇನ್ನು ಅಂಜೂರದಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಹೊಟ್ಟೆ ನೋವಿನ ಜೊತೆಗೆ ಬಿಳಿ ವಿಸರ್ಜನೆ ಸಮಸ್ಯೆಗಳನ್ನು ನಿಯಂತ್ರಿಸಲು ಅವು ಸಹಾಯ ಮಾಡುತ್ತವೆ. ಹಾಗಾಗಿ ಪ್ರತಿ ತಿಂಗಳು ತಪ್ಪದೆ ಅಂಜೂರವನ್ನು ಸೇವನೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ