ದಡಾರ(Measles) ಒಂದು ಸಾಂಕ್ರಾಮಿಕ ರೋಗವಾಗಿದ್ದು ಪ್ಯಾರೊಮಿಕ್ಸ್ ಎಂಬ ವೈರಸ್ ಈ ರೋಗಕ್ಕೆ ಕಾರಣವಾಗಿದೆ. ಈ ಕಾಯಿಲೆ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಇತ್ತೀಚೆಗೆ ದಡಾರ ಏಕಾಏಕಿ ಲಕ್ಷಾಂತರ ಜೀವಗಳಿಗೆ ಅಪಾಯವನ್ನುಂಟು ಮಾಡುತ್ತಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ದಡಾರ(measles) ರೋಗ ಲಕ್ಷಣಗಳು ಹೆಚ್ಚಾಗುತ್ತಿದ್ದು, ಇದು 12 ರಿಂದ 18 ಸೋಂಕುಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಸಂಶೋಧನೆಯ ವರದಿಯ ಪ್ರಕಾರ 2021 ರಲ್ಲಿ, ವಿಶ್ವಾದ್ಯಂತ ದಡಾರದಿಂದ ಅಂದಾಜು 9 ಮಿಲಿಯನ್ ಪ್ರಕರಣಗಳು ಮತ್ತು 128,000 ಸಾವುಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.
ದಡಾರ(Measles) ರೋಗದ ಲಕ್ಷಣಗಳು:
ಪ್ರಾರಂಭದಲ್ಲಿ ನಿಮ್ಮ ದೇಹಕ್ಕೆ ಈ ರೋಗದ ವೈರಸ್ ಆಂಟಿಕೊಂಡ 10 ರಿಂದ 12 ದಿನಗಳ ನಂತರ ಸಾಮಾನ್ಯವಾಗಿ ಹೆಚ್ಚಿನ ಜ್ವರ ಕಂಡುಬರುತ್ತದೆ. ಜೊತೆಗೆ 4 ರಿಂದ 7 ದಿನಗಳವರೆಗೆ ಜ್ವರದ ಲಕ್ಷಣ ಇರುತ್ತದೆ. ಸ್ರವಿಸುವ ಮೂಗು, ಕೆಮ್ಮು, ಕಣ್ಣು ಕೆಂಪಾಗುವುದು ಮತ್ತು ಕೆನ್ನೆಯ ಮೇಲೆ ಸಣ್ಣ ಬಿಳಿ ಚುಕ್ಕೆಗಳು ಮುಂತಾದ ರೋಗ ಲಕ್ಷಣಗಳಿಗೆ ಕಾರಣವಾಗಬಹುದು. ಪ್ರಾರಂಭದಲ್ಲಿ ಚಿಕ್ಕದಾಗಿ ಪ್ರಾರಂಭವಾದ ಕಲೆಗಳು ಅಂತಿಮವಾಗಿ ಕೈ ಮತ್ತು ಪಾದಗಳನ್ನು ತಲುಪುತ್ತದೆ.
ಇದನ್ನು ಓದಿ: ಕಿಬ್ಬೊಟ್ಟೆ ನೋಯುತ್ತಿದೆಯಾ? ನಿಮಗೆ ಈ ಸಮಸ್ಯೆಗಳಿರಬಹುದು ಎಚ್ಚರ
ಈ ರೋಗ ಲಕ್ಷಣವು ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮತ್ತು 30 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆಗೆ ಪ್ರಮುಖವಾಗಿ ಕಳಪೆ ಆಹಾರ, ಪೋಷಣೆ ಹಾಗೂ ಆಹಾರದಲ್ಲಿ ಪೋಷಕಾಂಶದ ಕೊರತೆದಿಂದಾಗಿ ಕಂಡುಬುರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:33 am, Sat, 26 November 22