Updated on: Nov 26, 2022 | 6:01 AM
Health How to make orange peel tea and its benefits health tips in kannada
ಚಯಾಪಚಯವನ್ನು ಹೆಚ್ಚಿಸುತ್ತದೆ: ಕಿತ್ತಳೆ ಹಣ್ಣಿನಂತೆ ಅದರ ಸಿಪ್ಪೆಯು ಫೈಬರ್ ಅನ್ನು ಹೊಂದಿರುತ್ತದೆ ಮತ್ತು ಈ ಪೋಷಕಾಂಶವು ಹೊಟ್ಟೆಗೆ ಮುಖ್ಯವಾಗಿದೆ. ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಪ್ರತಿದಿನ ಕಿತ್ತಳೆ ಸಿಪ್ಪೆಯ ಚಹಾವನ್ನು ಕುಡಿಯಿರಿ.
ರೋಗನಿರೋಧಕ ಶಕ್ತಿ ಹೆಚ್ಚಲಿದೆ: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಕಿತ್ತಳೆ ಸಿಪ್ಪೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿದೆ. ಚಳಿಗಾಲದಲ್ಲಿ ಶೀತ-ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳ ನಿವಾರಣೆಗೆ ಕಿತ್ತಳೆ ಚಹಾವನ್ನು ದಿನನಿತ್ಯದ ಸೇವಿಸಬಹುದು.
ರಕ್ತದೊತ್ತಡ ನಿಯಂತ್ರಣ: ಕೆಟ್ಟ ಜೀವನಶೈಲಿ, ತಪ್ಪಾದ ಆಹಾರ ಸೇವನೆ ಮತ್ತು ಹೆಚ್ಚುತ್ತಿರುವ ವಯಸ್ಸಿನ ಕಾರಣದಿಂದಾಗಿ ರಕ್ತದೊತ್ತಡದಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಇದನ್ನು ನಿಯಂತ್ರಣದಲ್ಲಿಡಲು ಕಿತ್ತಳೆ ಸಿಪ್ಪೆಯ ಚಹಾದ ಸಹಾಯ ಮಾಡಲಿದೆ. ಇದಲ್ಲದೆ, ಇದರ ಸೇವನೆಯು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲಿದೆ.