Health Tips: ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಲು ಹೀಗಿರಲಿ ನಿಮ್ಮ ಆಹಾರ ಕ್ರಮ
TV9 Web | Updated By: shruti hegde
Updated on:
Aug 30, 2021 | 7:35 AM
ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಸಮಸ್ಯೆ ಜನರಲ್ಲಿ ಹೆಚ್ಚು ಕಾಡುತ್ತಿದೆ. ನಾವು ಆಹಾರದಲ್ಲಿ ಕೆಲವೊಂದಿಷ್ಟು ಪದಾರ್ಥಗಳನ್ನು ಸೇರಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಅವುಗಳು ಯಾವುವು ಎಂಬುದನ್ನು ತಿಳಿಯೋಣ.
1 / 5
ಬೆಳ್ಳುಳ್ಳಿ ಮತ್ತು ಈರುಳ್ಳಿ ಮೂತ್ರಪಿಂಡಕ್ಕೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಮ್ಯಾಂಗನೀಸ್, ವಿಟಮಿನ್ ಸಿ, ಬಿ ಮತ್ತು ಇತರ ಪೋಷಕಾಂಶಗಳಿರುತ್ತದೆ. ಈ ಕಾರಣಕ್ಕಾಗಿ ಬೆಳ್ಳುಳ್ಳಿಯನ್ನು ಮೂತ್ರಪಿಂಡ ಆರೋಗ್ಯ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಈರುಳ್ಳಿಯು ಫ್ಲೇವನಾಯ್ಡ್ಗಳನ್ನು ಹೊಂದಿರುತ್ತದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು ಮೂತ್ರಪಿಂಡ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ.
2 / 5
ಪಾಲಾಕ್ ಕೂಡಾ ಮೂತ್ರಪಿಂಡಕ್ಕೆ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಪಾಲಾಕ್ ಸೊಪ್ಪಿನಲ್ಲಿ ಬೀಟಾ ಕ್ಯಾರೋಟಿನ್, ಕಬ್ಬಿಣ, ಮೆಗ್ನೀಷಿಯಂ, ವಿಟಮಿನ್ ಎ, ಸಿ, ಕೆ ಮತ್ತು ಫೋಲೇಟ್ ಸಮೃದ್ಧವಾಗಿರುತ್ತದೆ. ಇದು ಮೂತ್ರಪಿಮಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
3 / 5
ಅನಾನಸ್ ಕೂಡಾ ಮೂತ್ರಪಿಂಡ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಹೆಚ್ಚಿನ ಫೈಬರ್ ಮತ್ತು ಕಡಿಮೆ ಪೊಟ್ಯಾಷಿಯಮ್ ಇರುತ್ತದೆ. ಅಲ್ಲದೆ ಅನಾನಸ್ನಲ್ಲಿ ಬ್ರೊಮೆಲೈನ್ ಎಂಬ ಕಿಣ್ವವಿದೆ. ಇದು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ.
4 / 5
ಮೂತ್ರಪಿಂಡದ ಆರೋಗ್ಯದ ದೃಷ್ಟಿಯಿಂದ ಎಲೆಕೋಸು ತುಂಬಾ ಒಳ್ಳೆಯದು. ಎಲೆಕೋಸು ಉತ್ತಮ ಪ್ರಮಾಣದ ವಿಟಮಿನ್ ಕೆ, ಸಿ ಮತ್ತು ಬಿ ಅನ್ನು ಹೊಂದಿರುತ್ತದೆ. ಇದು ನಾರಿನ ಉತ್ತಮ ಮೂಲವಾಗಿದೆ. ಇದರಲ್ಲಿರುವ ಸೋಡಿಯಂ ಪ್ರಮಾಣ ತುಂಬಾ ಕಡಿಮೆ. ಅದ್ದರಿಂದ ಮೂತ್ರಪಿಂಡವನ್ನು ಆರೊಗ್ಯವಾಗಿಡಲು ಎಲೆಕೋಸು ಸಹಾಯಕವಾಗಿದೆ.
5 / 5
ಕ್ಯಾಪ್ಸಿಕಂ ಮೂತ್ರಪಿಂಡಕ್ಕೆ ತುಂಬಾ ಒಳ್ಳೆಯದು. ವಿಟಮಿನ್ ಸಿ ಯೊಂದಿಗೆ ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.