ಸದೃಢರಾಗಿಲು ಮತ್ತು ಉತ್ತಮ ಜೀವನಶೈಲಿ ಕಾಪಾಡಿಕೊಳ್ಳಲು ಇಲ್ಲಿವೆ 5 ಮಾರ್ಗಗಳು

| Updated By: preethi shettigar

Updated on: Nov 27, 2021 | 9:23 AM

ನಿಮ್ಮ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳು ಮತ್ತು ಆಹಾರದಲ್ಲಿ ಪೌಷ್ಟಿಕ ಅಂಶಗಳು ಸೇರಿದ್ದರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಹೀಗಿರುವಾಗ ನೀವು ಈ ಕೆಲವು ಮಾರ್ಗಗಳನ್ನು ಅನುಸರಿಸುವ ಮೂಲಕ ಸದೃಢತೆಯನ್ನು ಪಡೆದುಕೊಳ್ಳಬಹುದಾಗಿದೆ.

ಸದೃಢರಾಗಿಲು ಮತ್ತು ಉತ್ತಮ ಜೀವನಶೈಲಿ ಕಾಪಾಡಿಕೊಳ್ಳಲು ಇಲ್ಲಿವೆ 5 ಮಾರ್ಗಗಳು
ಯೋಗಾಸನ
Follow us on

ನಿಮ್ಮ ಆರೋಗ್ಯ ಸುಧಾರಿಸಬೇಕು ಅಂದಾದಾಗ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು. ಹಾಗಿರುವಾಗ ನೀವು ಯಾವ ಕಾಲಕ್ಕೆ ಯಾವ ಆಹಾರ ಸೇವನೆ ಮಾಡುತ್ತಿದ್ದೀರಿ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ನಿಮ್ಮ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳು ಮತ್ತು ಆಹಾರದಲ್ಲಿ ಪೌಷ್ಟಿಕ ಅಂಶಗಳು ಸೇರಿದ್ದರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಹೀಗಿರುವಾಗ ನೀವು ಈ ಕೆಲವು ಮಾರ್ಗಗಳನ್ನು ಅನುಸರಿಸುವ ಮೂಲಕ ಸದೃಢತೆಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

ವಯಸ್ದಾದಂತೆಯೇ ಸ್ನಾಯುಗಳು ದುರ್ಬಲಗೊಲ್ಳುತ್ತವೆ. ಶಕ್ತಿಯ ನಷ್ಟ, ದೇಹದಲ್ಲಿ ಆಯಾಸ ಹೀಗೆ ಮುಂತಾದ ಕೆಲವು ಅಂಶಗಳು ವಯಸ್ಸಾದಂತೆ ಕಾಣಿಸಿಕೊಳ್ಳುತ್ತದೆ ಎಂದು ನ್ಯೂಟ್ರೀಷಿಯನ್ ಮತ್ತು ವೈಜ್ಞಾನಿಕ ಸಹಾಯಕ ನಿರ್ದೇಶಕರಾದ ಗಣೇಶ್ ಕಾಡೆ ಅವರು ಹೇಳಿರುವ ಕೆಲವು ಮಾಹಿತಿಗಳನ್ನು ಇಂಡಿಯಾ ಡಾಟ್​ಕಾಮ್​ನಲ್ಲಿ ಉಲ್ಲೇಖಿಸಲಾಗಿದೆ.

ಸರಿಯಾಗಿ ಮುನ್ನೆಚ್ಚರಿಕೆವಹಿಸುವ ಮೂಲಕ ನೀವು ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದಾಗಿದೆ. ವಯಸ್ಸಾದಂತೆಯೇ ಸ್ನಾಯುಗಳ ದುರ್ಬಲತೆ ಅನಿವಾರ್ಯವಾಗಿದ್ದರೂ ನೀವು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಯ ಮೂಲಕ ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದಾಗಿದೆ.

ವಯಸ್ಸಾದಂತೆ ನೀವು ಸದೃಢರಾಗಿರಲು ಮತ್ತು ಉತ್ತಮ ಜೀವನಶೈಲಿ ನಿಮ್ಮದಾಗಲು ಈ ಕೆಲವು ಮಾರ್ಗಗಳು ;

*ಸ್ನಾಯುಗಳ ಆರೋಗ್ಯ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ನಿಯಮಿತ ವ್ಯಾಯಮದಲ್ಲಿ ತೊಡಗಿಕೊಳ್ಳಿ

*ಮಾಂಸ, ಮೊಟ್ಟೆ ಜೊತೆಗೆ ಸಸ್ಯಹಾರಿ ಪದಾರ್ಥಗಳ ಜೊತೆ ಪ್ರೋಟೀನ್ ಮೂಲವನ್ನು ಸೇವಿಸಿ

*ತರಕಾರಿಗಳು, ಹಣ್ಣುಗಳು, ಧಾನ್ಯಗಳು ಹೀಗೆ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳ ಮತ್ತು ಕ್ಯಾಲ್ಸಿಯಂ ಮತ್ತಿ ವಿಟಮಿನ್ ಡಿ ನಂತಹ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದ ಸಮತೋಲಿತ ಆಹಾರವನ್ನು ಸೇವಿಸಿ

*ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಆಹಾರ ವ್ಯವಸ್ಥೆಯ ಬಗ್ಗೆ ಚರ್ಚಿಸಿ. ಬಳಿಕ ತಜ್ಞರು ನೀಡುವ ಸಲಹೆಗಳನ್ನು ಅನುಸರಿಸಿ

ಇದನ್ನೂ ಓದಿ:

Health Tips: ಸಿಗರೇಟ್ ಸೇದುವವರೇ ಗಮನಿಸಿ; ಹೃದಯನಾಳದ ಸಮಸ್ಯೆಗೆ ಸ್ಟ್ರೋಕ್ ಮೊದಲ ಲಕ್ಷಣವಾಗಿರಬಹುದು!

Eye Health: ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆಯೇ? ಕಣ್ಣುಗಳ ಆರೋಗ್ಯ ಸುರಕ್ಷತೆಗೆ ಇಲ್ಲಿವೆ ಸಲಹೆಗಳು