Eye Health: ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆಯೇ? ಕಣ್ಣುಗಳ ಆರೋಗ್ಯ ಸುರಕ್ಷತೆಗೆ ಇಲ್ಲಿವೆ ಸಲಹೆಗಳು
ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಮ್ಮ ಕಣ್ಣುಗಳು ಸಕ್ರಿವಾಗಿ ಕೆಲಸದಲ್ಲಿರುತ್ತದೆ. ಕಣ್ಣಿಗೆ ಹೆಚ್ಚು ಒತ್ತಡ ಬಿದ್ದಂತೆಯೇ ಕಣ್ಣುಗಳ ಆರೋಗ್ಯ ಹದಗೆಡುತ್ತದೆ. ಹೀಗಿರುವಾಗ ನೀವು ಕಣ್ಣಿನ ಆರೋಗ್ಯ ಸುಧಾರಿಸಿಕೊಳ್ಳಲು ಕೆಲವು ಸಲಹೆಗಳನ್ನು ಪಾಲಿಸಬೇಕಾದುದು ಅನಿವಾರ್ಯ.
ಈಗೆಲ್ಲಾ ಜನರು ಲ್ಯಾಪ್ಟಾಪ್, ಮೊಬೈಲ್ಗಳಿಗೆ ಅತಿಹೆಚ್ಚು ಅಂಟಿಕೊಂಡಿದ್ದಾರೆ. ಹೀಗಿರುವಾಗ ಅತಿಯಾಗಿ ದೂರದರ್ಶನ, ಮೊಬೈಲ್ಗಳನ್ನು ಬಳಸುವುದರಿಂದ ಕಣ್ಣಿನ ಆರೋಗ್ಯ ಹದಗೆಡುತ್ತಿದೆ. ಹೆಚ್ಚಿನ ಜನರಿಗೆ ದೃಷ್ಟಿ ಸಮಸ್ಯೆ ಚಿಕ್ಕ ವಯಸ್ಸಿನಲ್ಲಿರುವಾಗಲೇ ಕಾಣಿಸಿಕೊಳ್ಳುತ್ತಿದೆ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಸಂಗತಿ. ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಮ್ಮ ಕಣ್ಣುಗಳು ಸಕ್ರಿವಾಗಿ ಕೆಲಸದಲ್ಲಿರುತ್ತದೆ. ಕಣ್ಣಿಗೆ ಹೆಚ್ಚು ಒತ್ತಡ ಬಿದ್ದಂತೆಯೇ ಕಣ್ಣುಗಳ ಆರೋಗ್ಯ ಹದಗೆಡುತ್ತದೆ. ಹೀಗಿರುವಾಗ ನೀವು ಕಣ್ಣಿನ ಆರೋಗ್ಯ ಸುಧಾರಿಸಿಕೊಳ್ಳಲು ಕೆಲವು ಸಲಹೆಗಳನ್ನು ಪಾಲಿಸಬೇಕಾದುದು ಅನಿವಾರ್ಯ.
ನಮ್ಮ ಕಣ್ಣುಗಳು ಆರೋಗ್ಯವಾಗಿರಲು ನೈಸರ್ಗಿಕ ಬೆಳಕು ಬಹಳ ಮುಖ್ಯ. ಸೂರ್ಯನ ನೈಸರ್ಗಿಕ ಬೆಳಕಿನಲ್ಲಿ ಕಡಿಮೆ ಸಮಯ ಕಳೆಯುವುದರಿಂದ ದೃಷ್ಟಿ ಸಮಸ್ಯೆ ಕಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೀಗಿರುವಾಗ ಕಣ್ಣಿನ ಆರೋಗ್ಯ ಸುರಕ್ಷತೆಗೆ ನೀವು ಪಾಲಿಸಬೇಕಾದ ಕೆಲವು ಸಮಹೆಗಳು ಈ ಕೆಳಗಿನಂತಿವೆ;
ಸರಿಯಾಗಿ ಆಹಾರ ಸೇವಿಸಿ ನೀವು ವಿಟಮಿನ್ ಎ ಸಮೃದ್ಧವಾಗಿರುವ ಆರೋಗ್ಯಕರ ಆಹಾರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯಕವಾಗಿದೆ. ತಾಜಾ ಹಣ್ಣುಗಳು, ತರಕಾರಿಗಳು ಹೀಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ನಿಮ್ಮ ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು.
ಹಾನಿಕಾರಕ ಬೆಳಕಿನಿಂದ ದೂರವಿರಿ ಹಾನಿಕಾರಕ ವಿಕಿರಣಗಳು ಅಥವಾ ಬೆಳಕು, ಹಾನಿಕಾರಕ ಕೃತಕ ದೀಪಗಳಿಂದ ದೂರವಿರಿ. ಅಂತಹ ದೀಪಗಳನ್ನು ನೇರವಾಗಿ ನೋಡುವುದನ್ನು ತಪ್ಪಿಸಿ.
ಸೂರ್ಯನ ಬೆಳಕು ಸೂರ್ಯನ ಬೆಳಕು ನೈಸರ್ಗಿಕ ಮೂಲವಾಗಿದೆ. ಆರೋಗ್ಯಕರ ಪ್ರಮಾಣದ ಸೂರ್ಯನ ಕಿರಣಗಳು ಕಣ್ಣುಗಳಿಗೆ ಒಳ್ಳೆಯದು, ಸೂರ್ಯನನ್ನು ನೇರವಾಗಿ ನೋಡುವುದನ್ನು ಆದಷ್ಟು ತಪ್ಪಿಸಿ.
ಕೃತಕ ಬೆಳಕು ನಾವೆಲ್ಲರೂ ಹೆಚ್ಚಾಗಿ ಕೃತಕ ಬೆಳಕಿಗೆ ಹೊಂದಿಕೊಂಡಿರುತ್ತೇವೆ. ದಿನದಲ್ಲಿ ಅತಿಹೆಚ್ಚು ಸಮಯ ಕೃತಕ ಬೆಳಕಿಗೆ ಒಗ್ಗಿಕೊಳ್ಳುತ್ತೇವೆ. ಟಿವಿ, ಮೊಬೈಲ್, ಲ್ಯಾಪ್ಟಾಪ್ ಜೊತೆಗೆ ಬಲ್ಬ್, ಟ್ಯೂಬ್ಲೈಟ್ಗಳನ್ನು ಬಳಸುತ್ತೇವೆ. ದೀರ್ಘಕಾಲದವರೆಗೆ ಕೃತಕ ಬೆಳಕಿಗೆ ಒಗ್ಗಿಕೊಳ್ಳುವುದರಿಂದ ಕಣ್ಣುಗಳ ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ ಬೀರಬಹುದಾದ ಸಾಧ್ಯತೆಗಳು ಹೆಚ್ಚಾಗಿರತ್ತದೆ.
ಧೂಮಪಾನವನ್ನು ತ್ಯಜಿಸಿ ಧೂಮಪಾನವು ನಿಮ್ಮ ದೃಷ್ಟಿ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮಧುಮೇಹ ಸಂಬಂಧಿದ ದೃಷ್ಟಿ ಸಮಸ್ಯೆ ಹೆಚ್ಚಾಗಲು ಧೂಮಪಾನ ಕಾರಣವಾಗುತ್ತದೆ. ಹಾಗಾಗಿ ಧೂಮಪಾನ ಅಭ್ಯಾಸವಿದ್ದರೆ ಇಂದಿನಿಂದಲೇ ಬಿಟ್ಟುಬಿಡಿ.
ಇದನ್ನೂ ಓದಿ:
Eye Care: ಸುಡುವ ಬಿಸಿಲಿನಲ್ಲಿ ನಿಮ್ಮ ಕಣ್ಣುಗಳ ಆರೋಗ್ಯ ರಕ್ಷಣೆ ಹೇಗೆ? ಇಲ್ಲಿದೆ ತಜ್ಞರ ಸಲಹೆಗಳು
Kidney Donor Required : ‘ಒಂದು ಕಿಡ್ನಿ ಸಾಕು ನನ್ನ ಹುಟ್ಟನ್ನು ಸಾರ್ಥಕಗೊಳಿಸಿ ತೋರಿಸುತ್ತೇನೆ’