Eye Care: ಸುಡುವ ಬಿಸಿಲಿನಲ್ಲಿ ನಿಮ್ಮ ಕಣ್ಣುಗಳ ಆರೋಗ್ಯ ರಕ್ಷಣೆ ಹೇಗೆ? ಇಲ್ಲಿದೆ ತಜ್ಞರ ಸಲಹೆಗಳು
ಸುಡುವ ಬಿಸಿಲಿಗೆ ನಿಮ್ಮ ಸೂಕ್ಷ್ಮ ಕಣ್ಣುಗಳ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಈ ಕೆಳಗಿಂತಿರುವ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಿ.
ಸುಡುವ ಬಿಸಿಲು, ಧೂಳು, ವಾತಾವರಣದಲ್ಲಿ ಏರು- ಪೇರಿನಿಂದ ಕಣ್ಣಿನ ಆರೋಗ್ಯ ಹದಗೆಡುತ್ತಿದೆ. ಜತೆಗೆ ಹೆಚ್ಚು ಮೊಬೈಲ್, ಕಂಪ್ಯೂಟರ್ನಂತಹ ವಸ್ತುಗಳ ಅತಿಯಾದ ಬಳಕೆಯಿಂದ ಕಣ್ಣು ಕೆಂಪಾಗುವುದು, ತುರಿಕೆಯಂತಹ ಆರೋಗ್ಯ ಸಮಸ್ಯೆಗಳು ಹೆಚ್ಚು ಕಂಡು ಬರುತ್ತಿದೆ. ಸೂಕ್ಷ್ಮವಾದ ಕಣ್ಣಿನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಹೆಚ್ಚು ಗಮನವಹಿಸಲೇ ಬೇಕು. ಕಣ್ಣು ದೇಹದಲ್ಲಿನ ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಒಂದು. ಕಣ್ಣುಗಳ ಹೊರಭಾಗವು ತೆಳುವಾದ ಮತ್ತು ಪಾರದರ್ಶಕವಾದ ಪದರಗಳಿಂದ ಮುಚ್ಚಲ್ಪಟ್ಟಿದೆ. ಇದನ್ನು ಕಾಂಜಂಕ್ಟಿವಾ ಎಂದು ಕರೆಯಲಾಗುತ್ತದೆ. ಇದಲ್ಲದೆ ನಮ್ಮ ಕಣ್ಣುಗಳು ಧೂಳು ಮತ್ತು ಮಾಲಿನ್ಯದಿಂದ ಹಾನಿಗೊಳಗಾಗಬಹುದು. ಹೀಗಿರುವಾಗ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಲು ಇಲ್ಲಿದೆ ಕೆಲವು ಸಲಹೆಗಳು.
ನೇತ್ರತಜ್ಞರಾದ ಡಾ. ಅಶ್ವಿನಿ ಅವರು ಸುಡುವ ಬಿಸಿಲಿನ ಸಮಯದಲ್ಲಿ ಕಣ್ಣುಗಳನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳಬೇಕು ಹಾಗೂ ಕಣ್ಣಿಗೆ ಯಾವೆಲ್ಲಾ ತೊಂದರೆಗಳು ಉಂಟಾಗಬಹುದು ಎಂಬುದರ ಕುರಿತಾಗಿ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಇಂಡಿಯಾ ಡಾಟ್ ಕಾಮ್ನಲ್ಲಿ ಉಲ್ಲೇಖಿಸಲಾಗಿದೆ.
ಡ್ರೈ ಐಸ್ ಸುಡುವ ಬಿಸಿಲಿಗೆ ಕಣ್ಣುಗಳು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಣ್ಣು ಕೆಂಪಾಗುವುದು, ಕಣ್ಣಿನ ಕಿರಿ ಕಿರಿಯಂಥಹ ಲಕ್ಷಣಗಳು ಕಂಡು ಬರುತ್ತದೆ. ಇದರಿಂದ ನಿಮ್ಮ ಕಣ್ಣುಗಳಿಗೆ ಹೆಚ್ಚು ಹಾನಿಯುಂಟಾಗಬಹುದು. ಹಾಗಿರುವಾಗ ಕಣ್ಣಿನ ಸುರಕ್ಷತೆಯ ಬಗ್ಗೆ ಎಚ್ಚರವಿರಲಿ.
ಕಣ್ಣಿನ ಅಲರ್ಜಿಗಳು ಕಣ್ಣಿನ ಅಲರ್ಜಿಗೆ ಮುಖ್ಯ ಕಾರಣವೆಂದರೆ ಹೆಚ್ಚಿನ ತಾಪಮಾನ ಮತ್ತು ಧೂಳು. ಆದ್ದರಿಂದ ಕಣ್ಣಿನ ಅಲರ್ಜಿಯಿಂದ ಬಳಲುತ್ತಿರುವವರಿಗೆ ಕಣ್ಣು ಕೆಂಪಾಗುವುದು, ಅಲರ್ಜಿ ಜೊತೆಗೆ ಕಣ್ಣಿನ ಉರಿಯೂತ ಸಮಸ್ಯೆ ಕಾಡುತ್ತದೆ.
ಕಾಂಜಂಕ್ಟಿವಿಟಿಸ್ ಇದು ಬಿಸಿಲಿನ ಬೇಗೆಯ ಸಮಯದಲ್ಲಿ ಸಂಭವಿಸುವ ಸಾಮಾನ್ಯ ಕಣ್ಣಿನ ಅಲರ್ಜಿಗಳಲ್ಲಿ ಒಂದಾಗಿದೆ. ಕಾಂಜಂಕ್ಟಿವಿಟಿಸ್ ಸಾಂಕ್ರಾಮಿಕವಾಗಬಹುದು ಮತ್ತು ನೇರ ಸಂಪರ್ಕದ ಮೂಲಕ ಹರಡಬಹುದು. ಅದಾಗ್ಯೂ ಕಣ್ಣುಗಳ ಕಾಳಜಿ ವಹಿಸಲು ಕೆಳಗಿನ ಸಲಹೆಗಳನ್ನು ಅನುಸರಿಸಿದರೆ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಕಣ್ಣಿನ ಕಿರಿಕಿರಿಯಿಂದ ಪರಿಹಾರ ಕಂಡುಕೊಳ್ಳಲು ಸರಳವಾದ ಈ ಕೆಲವು ಮಾರ್ಗಗಳನ್ನು ಅನುಸರಿಸಿ.
ಕಣ್ಣಿನ ಆರೋಗ್ಯ ಸುರಕ್ಷತೆಗೆ ನೀವು ಅನುಸರಿಸಬೇಕಾದ ಕೆಲವು ಮಾರ್ಗಗಳು: *ಕಣ್ಣು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ *ಹೆಚ್ಚು ನೀರು ಕುಡಿಯಿರಿ *ಸನ್ಗ್ಲಾಸ್ ಬಳಸುವ ಮೂಲಕ ಕಣ್ಣುಗಳನ್ನು ರಕ್ಷಿಸಿಕೊಳ್ಳಿ *ಸ್ವಿಮ್ಮಿಂಗ್ ಮಾಡುವಾಗ ಸೀಲಿಂಗ್ ಇರುವ ಕನ್ನಡಕಗಳನ್ನು ಧರಿಸಿ *ಎ ಸಿ ಯಿಂದ ಹೊರಬರುವ ಗಾಳಿ ಕಣ್ಣಿಗೆ ನೇರವಾಗಿ ಬೀಳದಂತೆ ನೋಡಿಕೊಳ್ಳಿ *ನಿರಂತರವಾಗಿ ನಿಮ್ಮ ಕಣ್ಣುಗಳನ್ನು ಉಜ್ಜುತ್ತಿರಬೇಡಿ *ಆಗಾಗ ಕೈಗಳನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಬಳಿಕವೇ ಕಣ್ಣುಗಳನ್ನು ಮುಟ್ಟಬಹುದು *ಕಣ್ಣುಗಳ ಆರೋಗ್ಯ ಸುಧಾರಣೆಗೆ 7 ರಿಂದ 8 ಗಂಟೆಗಳ ನಿದ್ರೆ ಪಡೆಯಿರಿ
ಇದನ್ನೂ ಓದಿ:
Eyes Care: ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಈ ಮಾರ್ಗಗಳನ್ನು ಅನುಸರಿಸಿ
ಕಡಿಮೆ ನೀರು ಕುಡಿಯುತ್ತಿದ್ದೀರಾ? ಆರೋಗ್ಯದಲ್ಲಿನ ಈ ಬದಲಾವಣೆ ಬಗ್ಗೆ ಇರಲಿ ಎಚ್ಚರ