Bone Health: ಮೂಳೆಗಳ ಕಾಳಜಿಗಾಗಿ ಈ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ

| Updated By: ಆಯೇಷಾ ಬಾನು

Updated on: Sep 07, 2021 | 8:05 AM

ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ.

Bone Health: ಮೂಳೆಗಳ ಕಾಳಜಿಗಾಗಿ ಈ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ದೇಹದ ರಚನೆಯಲ್ಲಿ ಮೂಳೆಗಳು ಪ್ರಮುಖ ಪಾತ್ರವಹಿಸುತ್ತವೆ. ಎದ್ದು ನಿಲ್ಲುವ ಅಥವಾ ಓಡಾಡುವಲ್ಲಿ ಸಹಕರಿಸುವ ಮೂಳೆಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯ. ಅದಾಗ್ಯೂ ಮೂಳೆಗಳು ದುರ್ಬಲವಾಗಿದ್ದರೆ, ನಮ್ಮ ಕೆಲಸವನ್ನು ಮಾಡುವಲ್ಲಿ ನಾವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮೂಳೆಗಳ ಬೆಳವಣಿಗೆ ಮನುಷ್ಯನಲ್ಲಿ ಮೂವತ್ತು ವರ್ಷಗಳವರೆಗೆ ನಡೆಯುತ್ತದೆ. ಅದರ ನಂತರ ಸ್ಥಿರತೆ ರೂಪುಗೊಳ್ಳುತ್ತದೆ. ವಯಸ್ಸಾದಂತೆ ಮೂಳೆಗಳು ದುರ್ಬಲವಾಗುತ್ತವೆ. ಸರಿಯಾದ ಪೋಷಣೆ ಮತ್ತು ಸರಿಯಾದ ಕಾಳಜಿ ವಹಿಸಿದರೆ ಮಾತ್ರ ಮೂಳೆಗಳನ್ನು ಆರೋಗ್ಯವಾಗಿಡಬಹುದು ಎಂದು ತಜ್ಞರು ಹೇಳುತ್ತಾರೆ. ವಯಸ್ಸಾದಂತೆ ಮೂಳೆ ರೋಗಗಳನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಮೂಳೆಗಳಿಗೆ ಅಗತ್ಯವಾದ ಆಹಾರವನ್ನು ಸೇವಿಸುವುದರಿಂದ ಕೀಲುಗಳು, ಮೊಣಕಾಲು ಮತ್ತು ಮೂಳೆಗಳ ರೋಗವನ್ನು ನಿವಾರಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಅದಕ್ಕಾಗಿಯೇ ಮೂಳೆಗಳನ್ನು ಸಧೃಡವಾಗಿಡಲು ಮತ್ತು ಆರೋಗ್ಯವಾಗಿಡಲು ಉತ್ತಮ ಆಹಾರವನ್ನು ತೆಗೆದುಕೊಳ್ಳುವ ಅಗತ್ಯವಿದೆ. 

ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ. ಈ ಪೋಷಕಾಂಶಗಳಲ್ಲಿ ಹೆಚ್ಚಿನವು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ದೈನಂದಿನ ಆಹಾರದಲ್ಲಿ ಇವುಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಲೆಟಿಸ್ 
ಲೆಟಿಸ್​ನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇದೆ. ಇದು ಮೂಳೆಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಒಂದು ಕಪ್ ಲೆಟಿಸ್ ದೇಹದ ದೈನಂದಿನ ಅವಶ್ಯಕತೆಯ ಕ್ಯಾಲ್ಸಿಯಂನ 25 ಪ್ರತಿಶತವನ್ನು ಒದಗಿಸುತ್ತದೆ. ನಾರಿನಂಶವಿರುವ ಇದರ ಎಲೆಗಳಲ್ಲಿ ವಿಟಮಿನ್ ಎ ಮತ್ತು ಕಬ್ಬಿಣಾಂಶ ಹೇರಳವಾಗಿದೆ.

ಕಿತ್ತಳೆ
ಕಿತ್ತಳೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಇದು ಮೂಳೆಗಳಿಗೆ ಹೆಚ್ಚು ಬಲ ನೀಡುತ್ತದೆ.  ಕಿತ್ತಳೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್ ಅನ್ನು ನಿಯಂತ್ರಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಬಾಳೆಹಣ್ಣು
ಬಾಳೆ ಹಣ್ಣು ದೇಹದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೆಗ್ನೀಶಿಯಂನ ಹೆಚ್ಚಿನ ಅಂಶದಿಂದಾಗಿ, ಬಾಳೆಹಣ್ಣುಗಳು ಮೂಳೆಗಳ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ಬಾಳೆಹಣ್ಣು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ರೋಗಗಳನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಅನಾನಸ್
ಅನಾನಸ್ ನೇರವಾಗಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅನ್ನು ದೇಹಕ್ಕೆ ನೀಡುವುದಿಲ್ಲ. ಆದರೆ ಮೂಳೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅನಾನಸ್ ಪೊಟ್ಯಾಶಿಯಂನಲ್ಲಿ ಸಮೃದ್ಧವಾಗಿದೆ. ಆದ್ದರಿಂದ ದೇಹದಲ್ಲಿನ ಆಸಿಡ್ ಲೋಡ್ ಅನ್ನು ತಟಸ್ಥಗೊಳಿಸುತ್ತದೆ. ಅಲ್ಲದೆ ಇದು ಕ್ಯಾಲ್ಸಿಯಂ ನಷ್ಟವನ್ನು ತಡೆಯುತ್ತದೆ.

ಸ್ಟ್ರಾಬೆರಿ
ಸ್ಟ್ರಾಬೆರಿಯಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್, ಪೊಟ್ಯಾಶಿಯಂ, ವಿಟಮಿನ್ ಕೆ ಮತ್ತು ವಿಟಮಿನ್ ಸಿ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಇವು ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತವೆ.

ಪಪ್ಪಾಯಿ
ಪಪ್ಪಾಯಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. 100 ಗ್ರಾಂ ಪಪ್ಪಾಯಿಯಲ್ಲಿ 20 ಮಿಲಿಗ್ರಾಂ ಕ್ಯಾಲ್ಸಿಯಂ ಇದೆ ಎಂದು ಹೇಳಲಾಗಿದೆ. ಈ ಹಣ್ಣನ್ನು ನಿಯಮಿತ ಆಹಾರದಲ್ಲಿ ಸೇರಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ.

ಕಿವಿ ಹಣ್ಣು
ಕಿವಿ ಹಣ್ಣಿನಲ್ಲಿ ಅತ್ಯಧಿಕ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಈ ಹಣ್ಣು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ, ಆಸ್ಟಿಯೊಪೊರೋಸಿಸ್ ಅನ್ನು ತಡೆಗಟ್ಟಲು ಕಿವಿ ಹಣ್ಣು ಕೆಲಸ ಮಾಡುತ್ತದೆ.

ಇದನ್ನೂ ಓದಿ:
Digestive System: ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಈ 5 ವಿಧಾನಗಳನ್ನು ಅನುಸರಿಸಿ

Beauty Tips: ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಈ ಆಹಾರ ಪದಾರ್ಥಗಳ ಮೊರೆ ಹೋಗುವುದು ಉತ್ತಮ