Digestive System: ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಈ 5 ವಿಧಾನಗಳನ್ನು ಅನುಸರಿಸಿ

ಯಾವುದೇ ಫಾಸ್ಟ್​ ಫುಡ್​ ಅಥವಾ ಇನ್ನಿತರ ಆಹಾರವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ನೋವು ಮತ್ತು ಎದೆಯುರಿ ಉಂಟಾಗಬಹುದು.

Digestive System: ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಈ 5 ವಿಧಾನಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Sep 06, 2021 | 6:37 AM

ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ರುಚಿಕರವಾದ ಆಹಾರಕ್ಕೆ ಒಗ್ಗಿಕೊಂಡಿರುತ್ತಾರೆ. ಆದರೆ ಹಿಂದೆ ಮುಂದೆ ಯೋಚಿಸದೆ ತಿನ್ನುವುದು ಹಲವಾರು ಸಮಸ್ಯೆಗಳನ್ನು ತರುತ್ತದೆ. ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಯಾವುದೇ ಫಾಸ್ಟ್​ ಫುಡ್​ ಅಥವಾ ಇನ್ನಿತರ ಆಹಾರವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ನೋವು ಮತ್ತು ಎದೆಯುರಿ ಉಂಟಾಗಬಹುದು. ಹೀಗಾಗಿ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗಾಗಿ ಪ್ರತಿಯೊಬ್ಬರೂ ಈ 5 ವಿಧಾನಗಳನ್ನು ಅನುಸರಿಸುವುದು ಸೂಕ್ತ. 

1. ಫೈಬರ್​ಯುಕ್ತ ಆಹಾರ ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆಯನ್ನು ಆರೋಗ್ಯವಾಗಿಡಬಹುದು. ಹೀಗಾಗಿ ನಾರಿನಂಶವಿರುವ ಹಣ್ಣುಗಳು, ಧಾನ್ಯಗಳು ಮತ್ತು ತರಕಾರಿಗಳನ್ನು ತಿನ್ನಲು ವೈದ್ಯರು ಸೂಚಿಸುತ್ತಾರೆ. ಇದು ಜೀರ್ಣ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಕರಗದ ನಾರು ಮತ್ತು ಕರಗುವ ನಾರು ಎಂದು ಎರಡು ವಿಧಗಳಿವೆ. ಇವು ಮಲಬದ್ಧತೆ, ಅತಿಸಾರ ಮತ್ತು ಗ್ಯಾಸ್ಟ್ರಿಕ್ನಂತಹ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತವೆ.

2. ಆಹಾರವನ್ನು ಚೆನ್ನಾಗಿ ಅಗಿಯಿರಿ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅನೇಕ ಜನರು ಆಹಾರವನ್ನು ಸರಿಯಾಗಿ ಅಗಿಯುವುದಿಲ್ಲ. ಕೆಲವು ಆಹಾರಗಳು ಕರಗಲು ಬಹಳ ಸಮಯ ತೆಗೆದುಕೊಳ್ಳಬಹುದು. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗಾಗಿ ನೀವು ಆಹಾರವನ್ನು ನಿಧಾನವಾಗಿ ಅಗಿಯಬೇಕು. ಆಗ ಮಾತ್ರ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ.

3. ಆರೋಗ್ಯಕರ ಜೀವನಶೈಲಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ನೀವು ಆರೋಗ್ಯಕರ ಜೀವನಶೈಲಿ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಕೆಟ್ಟ ಅಭ್ಯಾಸಗಳನ್ನು ತಪ್ಪಿಸಬೇಕು. ಧೂಮಪಾನ, ಮದ್ಯಪಾನ ನಿಲ್ಲಿಸಬೇಕು ಮತ್ತು ಸಾಧ್ಯವಾದಾಗಲೆಲ್ಲಾ ನಿದ್ರೆ ಮತ್ತು ಆರೋಗ್ಯಕರ  ಆಹಾರವನ್ನು ಸೇವಿಸಬೇಕು.

4. ಮಾಂಸ ಆಹಾರ ತಪ್ಪಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಮಾಂಸ ಆಹಾರಗಳಿಂದ ದೂರವಿರುವುದು ಉತ್ತಮ. ಕೊಬ್ಬು ಕಡಿಮೆ ಇರುವ ಮಾಂಸವನ್ನು ಸೇವಿಸಿ. ಕೆಂಪು ಮಾಂಸವು ಹೆಚ್ಚಿನ ಕೊಬ್ಬನ್ನು ಹೊಂದಿದ್ದು ಇದು ಮಲಬದ್ಧತೆಗೆ ಕಾರಣವಾಗಬಹುದು. ಇದನ್ನು ತಡೆಯಲು ಚಿಕನ್  ನಂತಹ ಆಹಾರದಿಂದ ಆದಷ್ಟು ದೂರ ಇರಿ.

5. ಸಾಕಷ್ಟು ನೀರು ಕುಡಿಯಿರಿ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಆಗಾಗ್ಗೆ ನೀರು ಕುಡಿಯಿರಿ. ಕರುಳಿನ ಚಲನೆಯನ್ನು ಸುಧಾರಿಸುವಲ್ಲಿ ನೀರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆ ಮೂಲಕ ಹೊಟ್ಟೆ ಉಬ್ಬುವುದು ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Health Tips: ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಸರಳ ವಿಧಾನವನ್ನು ಅನುಸರಿಸಿ

Health Tips: ವಾರಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಚಿಕನ್​ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಎಚ್ಚರ ವಹಿಸಿ

(follow these 5 methods for healthy Digestive system)