ನರಗಳ ಸಮಸ್ಯೆಯನ್ನು ಪ್ರಾರಂಭದಲ್ಲೇ ಗುರುತಿಸಲು ಶೇ.60ರಷ್ಟು ಜನರು ವಿಫಲರಾಗುತ್ತಾರೆ; ಸಮೀಕ್ಷೆ

ದೇಹಕ್ಕೆ ಬೇಕಾದ ಜೀವಸತ್ವಗಳು ಮತ್ತು ವಿಟಮಿನ್​ಗಳನ್ನು ಆಹಾರದಿಂದ ಪಡೆಯಬೇಕು. ಇದರಲ್ಲಿ ಸಮಸ್ಯೆ ಏನೆಂದರೆ ಅಗತ್ಯವಾದ ವಿಟಮಿನ್ ಬಿ12 ಅಂಶವನ್ನು ಜನರು ಕಡೆಗಣಿಸುತ್ತಾರೆ.

ನರಗಳ ಸಮಸ್ಯೆಯನ್ನು ಪ್ರಾರಂಭದಲ್ಲೇ ಗುರುತಿಸಲು ಶೇ.60ರಷ್ಟು ಜನರು ವಿಫಲರಾಗುತ್ತಾರೆ; ಸಮೀಕ್ಷೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Sep 05, 2021 | 11:07 AM

ಭಾರತದಲ್ಲಿ ಶೇ. 60ರಷ್ಟು ಜನರು ನರಗಳ ಸಮಸ್ಯೆಯನ್ನು ಪ್ರಾರಂಭದಲ್ಲೇ ಗುರುತಿಸಲು ವಿಫಲರಾಗುತ್ತಿದ್ದಾರೆ ಎಂಬುದು ಗುರುವಾರ ಬಿಡುಗಡೆಗೊಂಡ ಆರೋಗ್ಯ ಸಮೀಕ್ಷೆಯಿಂದ ತಿಳಿದು ಬಂದಿದೆ. ಹೀಲ್ ಹೆಲ್ತ್ ಸಂಶೋಧನೆಯಿಂದ ತಿಳಿದು ಬಂದಂತೆ ಭಾರತದಲ್ಲಿ 12 ನಗರಗಳನ್ನು ಆಯ್ದು 1,800 ಸ್ಪಂದಕರೊಂದಿಗೆ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ. 90ರಷ್ಟು ಆರೋಗ್ಯಕರ ನರಗಳು ಮುಖ್ಯವೆಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಕೇವಲ ಶೇ. 38ರಷ್ಟು ಜನರು ನರಗಳು ರಕ್ತನಾಳಗಳಿಗಿಂತ ಭಿನ್ನ ಎಂದು ತಿಳಿದಿದ್ದಾರೆ. ಜನರಿಗೆ ಸೀಮಿತವಾದ ಜ್ಞಾನವಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಬಿ ಜೀವಸತ್ವಗಳ ಕೊರತೆಯು ನರಗಳ ಹಾನಿಗೆ ಕಾರಣವಾಗುತ್ತದೆ ಎಂದು ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟೈಮ್ಸ್ ನೌ ನ್ಯೂಸ್ ವರದಿ ಮಾಡಿದೆ.

ಇದರ ಜತೆಗೆ ವಿಟಮಿನ್ ಬಿ ಕೊರತೆಯಿಂದ ಜನರು ದುರ್ಬಲ ನರಗಳನ್ನು ಹೊಂದುತ್ತಿದ್ದಾರೆ. ಅಪೌಷ್ಟಿಕತೆಯಿಂದಾಗಿ ನಿಮ್ಮ ನರಗಳು ಶಕ್ತಿಯನ್ನು ಪಡೆಯುತ್ತಿಲ್ಲ. ವಿಟಮಿನ್ ಬಿ12 ಕೊರತೆಯು ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿದೆ. ಇತರ ಆರೋಗ್ಯ ಕೊರತೆಗಳ ಜತೆಗೆ ಅನುಚಿತ ಆಹಾರ ಮತ್ತು ಜೀವನ ಶೈಲಿಯ ಬದಲಾವಣೆಗಳಿಂದಾಗಿ ಅಪೌಷ್ಟಿಕತೆಯು ಕಾಡುತ್ತಿದೆ.

ದೇಹಕ್ಕೆ ಬೇಕಾದ ಜೀವಸತ್ವಗಳು ಮತ್ತು ವಿಟಮಿನ್​ಗಳನ್ನು ಆಹಾರದಿಂದ ಪಡೆಯಬೇಕು. ಇದರಲ್ಲಿ ಸಮಸ್ಯೆ ಏನೆಂದರೆ ಅಗತ್ಯವಾದ ವಿಟಮಿನ್ ಬಿ12 ಅಂಶವನ್ನು ಜನರು ಕಡೆಗಣಿಸುತ್ತಾರೆ. ಹಾಗಾಗಿಯೇ ಜನರಲ್ಲಿ ಈ ಅಂಶ ಕಡಿಮೆಯಾಗುತ್ತಿದೆ, ವಿಶೇಷವಾಗಿ ವಯಸ್ಸಾದವರಲ್ಲಿ ಎಂದು ಬಾಂಬೆ ಹಾಸ್ಪಿಟಲ್ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್​ನ ಹೆಚ್ಒಡಿ ಡಾ. ಸತೀಶ್ ಖಾದಿಲ್ಕರ್ ಹೇಳಿದ್ದಾರೆ.

ಶೇ. 73ರಷ್ಟು ಜನರು ತರಕಾರಿಗಳನ್ನು ಅವಲಂಬಿಸಿದ್ದಾರೆ. ಶೇ. 69ರಷ್ಟು ಜನರು ವಿಟಮಿನ್ ಬಿ12ಗಾಗಿ ಹಣ್ಣುಗಳನ್ನು ಅವಲಂಬಿಸಿದ್ದಾರೆ ಎಂಬುದು ರಾಷ್ಟ್ರೀಯ ಸಮೀಕ್ಷೆಯ ಫಲಿತಾಂಶದಿಂದ ತಿಳಿದು ಬಂದಿದೆ. ಉತ್ತಮ ಪೌಷ್ಟಿಕಾಂಶವು ಸಾಮಾನ್ಯವಾಗಿ ನರಗಳ ಆರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನೀವು ಸೇವಿಸುವ ಆಹಾರವು ನಿಮ್ಮ ನರಮಂಡಲದ ಕಾರ್ಯ ಚಟುವಟಿಕೆಯನ್ನು ಸುಧಾರಿಸತ್ತದೆ ಎಂದು ಭಾರತೀಯ ವೈದ್ಯ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ತಿವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ:

Health Tips: ಯಕೃತ್ತು ಆರೋಗ್ಯ ಸುಧಾರಿಸಲು ಸೇವಿಸಬೇಕಾದ ಆಹಾರ ಪದಾರ್ಥಗಳು

Health Tips: ಉತ್ತಮ ಆರೋಗ್ಯಕ್ಕಾಗಿ ಈ ಸಲಹೆಗಳು; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು

(Mote Then 60 percent Indian people have poor nerve health Ignored survey)

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ