Bleeding Gums: ವಸಡಿನ ರಕ್ತಸ್ರಾವಕ್ಕೆ ಇಲ್ಲಿದೆ ಸರಳ ಮನೆಮದ್ದು

| Updated By: Pavitra Bhat Jigalemane

Updated on: Jan 25, 2022 | 5:07 PM

ದಿನಕ್ಕೆ ಎರಡು ಬಾರಿ ತಪ್ಪದೇ  ಹಲ್ಲುಜ್ಜಿ. ಇದರಿಂದ ನಿಮ್ಮ ಹಲ್ಲುಗಳಲ್ಲಿ ಸಿಲುಕಿದ ಆಹಾರ ಸ್ವಚ್ಛವಾಗಿ ಆರೋಗ್ಯಯುತ ಹಲ್ಲು ನಿಮ್ಮದಾಗುತ್ತದೆ. ವಸಡಿನ ಸಮಸ್ಯೆಯೂ ಇರುವುದಿಲ್ಲ.

Bleeding Gums: ವಸಡಿನ ರಕ್ತಸ್ರಾವಕ್ಕೆ ಇಲ್ಲಿದೆ ಸರಳ ಮನೆಮದ್ದು
ಸಂಗ್ರಹ ಚಿತ್ರ
Follow us on

ಇಡೀ ದೇಹದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುಉ ಕೂಡ ಅಷ್ಟೇ ಮುಖ್ಯ. ವಸುಡು (Gums) ಗಳನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಹಲ್ಲುಗಳಿಗೆ ರಕ್ಷಣೆ ಸಿಗುತ್ತವೆ. ಕೆಲವೊಮ್ಮೆ ವಸಡುಗಳಲ್ಲಿ ರಕ್ತಸ್ರಾವ (Bleeding Gums), ಉರಿಯೂತ ಉಂಟಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ನಿಮ್ಮ ಟೂತ್​ಬ್ರಷ್​ಗಳು ಗಟ್ಟಿಯಾಗಿದ್ದರೆ ಅಥವಾ ನಿಮ್ಮ ವಸಡಿಗೆ ಈಗಾಗಲೆ ಬಲವಾದ ಪೆಟ್ಟು ಬಿದ್ದಿದ್ದರೆ ಅಥವಾ ಕೆಲವೊಮ್ಮೆ ವಸಡಿನಲ್ಲಿ ಸಣ್ಣ ಗಾಯಗಳಾಗಿದ್ದರೂ ಹಲ್ಲುಜ್ಜುವ ವೇಳೆ ರಕ್ತಸ್ರಾವವಾಗುತ್ತದೆ. ಆದ್ದರಿಂದ ಯಾವ ಕಾರಣಕ್ಕೆ ವಸಡಿನಲ್ಲಿ ರಕ್ತಸ್ರಾವವಾಗುತ್ತಿದೆ ಎಂದು ತಿಳಿದುಕೊಳ್ಳಿ. ಆಗ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆರಂಭದ ಹಂತಗಳಲ್ಲಿ ಮನೆಮದ್ದಿನಿಂದಲೇ (Home Remedies) ವಸಡಿನ ನೋವು, ರಕ್ತಸ್ರಾವ ಅಥವಾ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. 

ಈ ಬಗ್ಗೆ ಇಂಡಿಯನ್​ ಎಕ್ಸ್​ಪ್ರೆಸ್​ ಸುದ್ದಿಸಂಸ್ಥೆ ದಂತ ವೈದ್ಯೆ ಡಾ. ಧಾಮಿನಿ ಗರ್ವಾಲ್​ ಅವರ ಸಲಹೆಗಳನ್ನು ವರದಿ ಮಾಡಿದೆ. ಧಾಮಿನಿ ಅವರ ಪ್ರಕಾರ, ಹಲ್ಲುಜ್ಜುವ ವೇಳೆ ನಿಮ್ಮ ವಸಡಿನಲ್ಲಿ ರಕ್ತಸ್ರಾವ ಕಂಡುಬಂದರೆ ನಿಮಗೆ ಸ್ವಲ್ಪಮಟ್ಟದ ವಸಡಿನ ಸಮಸ್ಯೆ ಆರಂಭವಾಗಿದೆ ಎಂದರ್ಥ.  ಅದಕ್ಕಾಗಿ ನೀವು ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು ಎನ್ನುತ್ತಾರೆ. ಹಾಗಾದರೆ ಯಾವೆಲ್ಲಾ ಮನೆಮದ್ದುಗಳು ನಿಮ್ಮ ವಸಡಿನ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎನ್ನುವ ಮಾಹಿತಿ ಇಲ್ಲಿದೆ.

ಲವಂಗದ ಎಣ್ಣೆ:
ವಸಡಿನ ಸಮಸ್ಯೆಗೆ ಲವಂಗದ ಎಣ್ಣೆ ಅತ್ಯುತ್ತಮ ಮನೆಮದ್ದಾಗಿದೆ. ನಿಮಗೆ ವಸಡಿನನೋವು ಕಾಣಿಸಿಕೊಂಡಾಕ್ಷಣ ಲವಂಗದ ಎಣ್ಣೆಯನ್ನು ಹತ್ತಿ ಉಂಡೆಯಲ್ಲಿ ಹಾಕಿ ನೋವಿರುವ ಕಡೆ ಹಚ್ಚಿಕೊಳ್ಳಿ. ಅಥವಾ ನೀವು ಇಡಿಯಾದ ಲವಂಗವನ್ನು ನೋವಿರುವ ಜಾಗದಲ್ಲಿ ಇಟ್ಟುಕೊಂಡರೆ ನೋವು ಶಮನಗೊಳ್ಳುತ್ತದೆ,

ಆಲೋವೇರಾ:
ಆಲೋವೇರಾ ನಿಮ್ಮ ವಸಡಿನ ನೋವಿಗೆ ಉತ್ತಮ ಪರಿಹಾರವಾಗಿದೆ. ವಸಡಿನಲ್ಲಿ ನೋವು ಕಾಣಿಸಿಕೊಂಡಾಗ ಆಲೋವೇರಾವನ್ನು ತೆಗದುಕೊಂಡು ವಸಡಿನಲ್ಲಿ ಇಟ್ಟುಕೊಳ್ಳಿ ಇದು ತಂಪಿನ ಅನುಭವವನ್ನು ನೀಡಿ ರಕ್ತಸ್ರಾವವನ್ನು ಕಡಿಮೆಗೊಳಿಸುತ್ತದೆ. ಅಲೋವೆರಾ ಜೆಲ್​ ಬಳಸುವುದಾದರೆ ಬಾಯಿಗೆ ಹಾಕಿ ಮುಕ್ಕಳಿಸಿ,

ದಿನಕ್ಕೆರಡು ಬಾರಿ ಹಲ್ಲುಜ್ಜುವದು
ಅನಾರೋಗ್ಯವಾಗುವುದಕ್ಕಿಂತ ಮೊದಲೇ ಎಚ್ಚರಿಕೆ ವಹಿಸುವುದು ಒಳಿತ್ತು. ಹೀಗಾಗಿ ದಿನಕ್ಕೆ ಎರಡು ಬಾರಿ ತಪ್ಪದೇ  ಹಲ್ಲುಜ್ಜಿ. ಇದರಿಂದ ನಿಮ್ಮ ಹಲ್ಲುಗಳಲ್ಲಿ ಸಿಲುಕಿದ ಆಹಾರ ಸ್ವಚ್ಛವಾಗಿ ಆರೋಗ್ಯಯುತ ಹಲ್ಲು ನಿಮ್ಮದಾಗುತ್ತದೆ.

ತರಕಾರಿ ಮತ್ತು ಹಣ್ಣುಗಳ ಸೇವನೆ
ತಾಜಾ ತರಕಾರಿ ಮತ್ತು ಹಣ್ಣುಗಳ ಸೇವನೆಯಿಂದ ನಿಮ್ಮ ವಸಡು ಬಲಗೊಳ್ಳುತ್ತದೆ. ಇದರಿಂದ ರಕ್ತಸ್ರಾವದಂತಹ ಸಮಸ್ಯೆಗಳು ಉಲ್ಬಣಿಸುವುದಿಲ್ಲ.  ಹಣ್ಣು, ತರಕಾರಿಗಳಲ್ಲಿನ ವಿಟಮಿನ್ಸ್​ ಮತ್ತು ಮಿನರಲ್ಸ್​ಗಳು ಹಲ್ಲುಗಳನ್ನು ರಕ್ಷಿಸುತ್ತವೆ. ಅಲ್ಲದೆ ನೀವು ಜಗಿಯುವಾಗ ಹಲ್ಲುಗಳಿಗೆ ವ್ಯಾಯಾಮವಾದಂತಾಗಿ ಹಲ್ಲು, ವಸಡು ಕೂಡ ಗಟ್ಟಿಯಾಗುತ್ತವೆ.

ಉಪ್ಪು ನೀರಿನ ಬಳಕೆ:
ಪ್ರತಿದಿನ ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಮಿಶ್ರಣ ಮಾಡಿ ಬಾಯಿ ಮುಕ್ಕಳಿಸಿ. ಇದು ನಿಮ್ಮ ಹಲ್ಲುಗಳಲ್ಲಿನ ಕ್ಯಾವಿಟೀಸ್​ ಅನ್ನು ದೂರಮಾಡುತ್ತದೆ. ಜತೆಗೆ ವಸಡನ್ನೂ ಆರೋಗ್ಯವಾಗಿಡುತ್ತದೆ.

ಕೊಬ್ಬರಿ ಎಣ್ಣೆಯ ಬಳಕೆ
ಕೊಬ್ಬರಿ ಎಣ್ಣೆ ನಿಮ್ಮ ವಸಡನ್ನು ಆರೋಗ್ಯವಾಗಿಡುತ್ತದೆ. ಹೀಗಾಗಿ ರಕ್ತಸ್ರಾವದಂತಹ ಸಮಸ್ಯೆಗಳು ಕಾಣಿಸಿಕೊಂಡ ಆ ಜಾಗದಲ್ಲಿ ಎಣ್ಣೆಯನ್ನು ಹಚ್ಚಿರಿ ಇದು ನಿಮ್ಮ ವಸಡಿನಲ್ಲಿ ಗಾಯಗಳಾಗಿದ್ದರೆ ಗುಣಪಡಿಸಿ ರಕ್ತಸ್ರಾವವನ್ನೂ ತಡೆಯುತ್ತದೆ.

ವಿಟಮಿನ್ ಸಿ
ಆದಷ್ಟು ವಿಟಮಿನ್ ಸಿ ಇರುವ ಆಹಾರಗಳನ್ನು ಸೇವಿಸಿ. ಇದರಿಂದ ವಸಡುಗಳು ಸ್ವಚ್ಛವಾಗುವುದಲ್ಲದೆ, ನೋವು ಮತ್ತು ರಕ್ತಸ್ರಾವವನ್ನೂ ತಡೆಯುತ್ತದೆ. ಇದಕ್ಕಾಗಿ ಲಿಂಬು ಅಥವಾ ಆಮ್ಲವನ್ನು ತಿನ್ನುತ್ತಿರಿ. ಇದು ವಸಡುಗಳ ನೋವನ್ನು ಉಪಶಮನ ಮಾಡುತ್ತದೆ.

ಧೂಮಪಾನದಿಂದ ದೂರವಿರಿ
ಧೂಮಪಾನ ಮತ್ತು ತಂಬಾಕು ಸೇವನೆ ಎರಡೂ ಕೂಡ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಅಲ್ಲದೆ ವಸಡಿನ ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ. ಆದ್ದರಿಂದ ತಂಬಾಕು ಇರುವ ಪಾನ್​ಗಳನ್ನು ತಿನ್ನಬೇಡಿ.

ಇದನ್ನೂ ಓದಿ:

Depression Tendency: ಕೊವಿಡ್​ನಿಂದ ಮಾನಸಿಕ ಸಮಸ್ಯೆ, ಖಿನ್ನತೆ ಹೆಚ್ಚಾಗುತ್ತಾ: ಇಲ್ಲಿದೆ ತಜ್ಞರ ಉತ್ತರ

Published On - 5:06 pm, Tue, 25 January 22