ಆತ್ಮಹತ್ಯೆ ಆಲೋಚನೆಯಿಂದ ಹೊರಬರುವುದು ಹೇಗೆ? ಇಲ್ಲಿದೆ ಸಲಹೆ

ಪ್ರೀತಿಯಲ್ಲಿ ಮೋಸಹೋಗಿದ್ದರೆ, ಹತ್ತಿರದವರನ್ನು ಕಳೆದುಕೊಂಡಿದ್ದರೆ, ಸಾಲದಬಾಧೆ ಹೆಚ್ಚಾದರೆ ದೀರ್ಘಕಾಲದ ಖಿನ್ನತೆಯಿಂದ ಬಳಲುತ್ತಿದ್ದರೆ ಆತ್ಮಹತ್ಯೆಯಂತಹ ಕೆಟ್ಟ ಯೋಚನೆಗಳನ್ನು ಜನರು ತಲೆಯಲ್ಲಿ ತುಂಬಿಕೊಳ್ಳುತ್ತಾರೆ.

ಆತ್ಮಹತ್ಯೆ ಆಲೋಚನೆಯಿಂದ ಹೊರಬರುವುದು ಹೇಗೆ? ಇಲ್ಲಿದೆ ಸಲಹೆ
Depression
Updated By: ನಯನಾ ರಾಜೀವ್

Updated on: Aug 13, 2022 | 12:24 PM

ಪ್ರೀತಿಯಲ್ಲಿ ಮೋಸಹೋಗಿದ್ದರೆ, ಹತ್ತಿರದವರನ್ನು ಕಳೆದುಕೊಂಡಿದ್ದರೆ, ಸಾಲದಬಾಧೆ ಹೆಚ್ಚಾದರೆ ದೀರ್ಘಕಾಲದ ಖಿನ್ನತೆಯಿಂದ ಬಳಲುತ್ತಿದ್ದರೆ ಆತ್ಮಹತ್ಯೆಯಂತಹ ಕೆಟ್ಟ ಯೋಚನೆಗಳನ್ನು ಜನರು ತಲೆಯಲ್ಲಿ ತುಂಬಿಕೊಳ್ಳುತ್ತಾರೆ. ಆದರೆ ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರವಿದೆ ಎಂಬುದನ್ನು ಮರೆತಿರುತ್ತಾರೆ.

ಒಂದು ಸಲ ಆ ಕೆಟ್ಟ ಯೋಚನೆಯಿಂದ ಹೊರಬಂದರೆ ಅಯ್ಯೋ ತಾನು ಎಂಥಾ ದೊಡ್ಡ ತಪ್ಪು ಮಾಡುತ್ತಿದ್ದೆ ಎಂಬುದು ಅವರ ಅರಿವಿಗೆ ಬರುತ್ತದೆ. ನೋವನ್ನು ಸಹಿಸಲಾಗದೆ, ಇನ್ನು ಸಾವೇ ಪರಿಹಾರ ಎಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಾರೆ. ಆದರೆ ವಾಸ್ತವವಾಗಿ ಇದು ತಾತ್ಕಾಲಿಕ.

ಈ ಸಮಯದಲ್ಲಿ ನೀವು ಆ ಯೋಚನೆಯನ್ನು ಬದಲಿಸಿದರೆ ಉತ್ತಮ ಭವಿಷ್ಯವು ನಿಮ್ಮ ಮುಂದಿರುತ್ತದೆ. ಒಂದು ವಿಷಯ ನೆನಪಿಟ್ಟುಕೊಳ್ಳಿ ನಿಮ್ಮ ಭಾವನೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಹಾಗೆಯೇ ನಿಮ್ಮ ಸಮಸ್ಯೆಗಳು ಕೂಡ ಇಂದಲ್ಲಾ ನಾಳೆ ಕೊನೆಗೊಳ್ಳಲೇ ಬೇಕಲ್ಲವೆ.

ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಗಳಿಂದ ದೂರಬರಲು ಸಲಹೆ

-ಪ್ರತಿದಿನ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ. ನೇರವಾಗಿ ಭೇಟಿಯಾಗಲು ಆದ್ಯತೆ ನೀಡಿ ಅದೂ ಸಾಧ್ಯವಾಗದಿದ್ದರೆ ಫೋನ್‌ನಲ್ಲಿ ಮಾತನಾಡಿ. ನಿಮ್ಮ ಎಲ್ಲಾ ನೋವುಗಳನ್ನು ಅವರೊಂದಿಗೆ ಹಂಚಿಕೊಳ್ಳಿ.

-ನಿಮ್ಮ ಆತ್ಮೀಯ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ.

-ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆಯನ್ನು ವಿವರಿಸಿ.

-ಪ್ರತಿ ದಿನ ಕನಿಷ್ಠ 20 ರಿಂದ 40 ನಿಮಿಷ ಬಿಸಿಲಿನಲ್ಲಿ ಇರಿ ಅಥವಾ ಉದ್ಯಾನವನಕ್ಕೆ ಹೋಗಿ ಸಣ್ಣ ವಾಕಿಂಗ್ ಮಾಡಿ

-ನಿಮ್ಮ ಭಾವನೆಗಳು ನಿಯಂತ್ರಣದಲ್ಲಿಲ್ಲದಿದ್ದರೂ ಕೂಡಾ ಸಾಧ್ಯವಾದಷ್ಟು ಸಾಮಾನ್ಯ ದಿನಚರಿಯನ್ನು ಕಾಪಾಡಿಕೊಳ್ಳಿ.

-10 ನಿಮಿಷಗಳ ವ್ಯಾಯಾಮಗಳು ನಿಮ್ಮ ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.

-ದುಃಖ ಭರಿತ ಸಂಗೀತವನ್ನು ಆಲಿಸಬೇಡಿ. ಕೆಲವು ಹಳೆಯ ಫೋಟೋಗಳನ್ನು ನೋಡಬೇಡಿ, ಹಳೆಯ ಪತ್ರಗಳನ್ನು ಓದಬೇಡಿ.

– ನಿಮಗೆ ಖುಷಿ ಕೊಡುತ್ತದೆ ಎನ್ನುವ ವಿಷಯಗಳ ಕಡೆಗೆ ಹೆಚ್ಚು ಸಮಯವನ್ನು ಮೀಸಲಿಡಿ.

– ನೀವು ಯಾವ ಗುರಿಯನ್ನು ಸಾಧಿಸಬೇಕು ಎಂದುಕೊಂಡಿದ್ದೀರೋ ಅದರತ್ತ ಹೆಜ್ಜೆ ಹಾಕಿ.

ಈ ಕೆಲಸವನ್ನು ಮಾಡಬೇಡಿ

– ಒಂಟಿಯಾಗಿ ಒಂದೆಡೆ ಕೂರಬೇಡಿ

– ಮದ್ಯ ಮತ್ತು ಡ್ರಗ್ಸ್ ಖಿನ್ನತೆಯನ್ನು ಹೆಚ್ಚಿಸುತ್ತವೆ. ನಿಮ್ಮ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.

-ಆತ್ಮಹತ್ಯೆ ಮಾಡಿಕೊಂಡರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಅದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ