AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Almond Benefits: ಬಾದಾಮಿ ಸೇವನೆಯಿಂದ ಆಗುವ ಐದು ಪ್ರಯೋಜನಗಳು; ಆಯುರ್ವೇದ ತಜ್ಞರ ಸಲಹೆ

ಬಾದಾಮಿಯ ಪೌಷ್ಟಿಕಾಂಶದ ಗುಣಲಕ್ಷಣಗಳಲ್ಲಿ ಬಲವಾದ ನಂಬಿಕೆಯಿಂದ ಹುಟ್ಟಿಕೊಂಡಿದೆ, ಬಾದಾಮಿಯ ದೈನಂದಿನ ಸೇವನೆಯು ವಾತ ಮತ್ತು ಪಿತ್ತ ದೋಷಗಳನ್ನು ನಿವಾರಿಸಲು ಪ್ರಯೋಜನಕಾರಿಯಾಗಿದ್ದು, ಮಧುಮೇಹಕ್ಕೆ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಸಹಕಾರಿಯಾಗಲಿದೆ.

Almond Benefits: ಬಾದಾಮಿ ಸೇವನೆಯಿಂದ ಆಗುವ ಐದು ಪ್ರಯೋಜನಗಳು; ಆಯುರ್ವೇದ ತಜ್ಞರ ಸಲಹೆ
ಬಾದಾಮಿ
TV9 Web
| Edited By: Rakesh Nayak Manchi|

Updated on: Aug 14, 2022 | 7:00 AM

Share

ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳ ಅಗತ್ಯವಿರುತ್ತದೆ. ಇದು ನಿಮ್ಮ ಆಹಾರದಲ್ಲಿ ಪ್ರಧಾನವಾಗಿರಬೇಕು. ಪೌಷ್ಟಿಕತಜ್ಞರು ಮತ್ತು ಆರೋಗ್ಯ ತಜ್ಞರು ಅವುಗಳಲ್ಲಿ ಕೆಲವನ್ನು ಮಧ್ಯಾಹ್ನದ ತಿಂಡಿಯಾಗಿ ತಿನ್ನಲು ಹಾಗೂ ಶಕ್ತಿಯ ಮರುಪೂರಣವನ್ನು ಉತ್ತೇಜಿಸಲು ಶಿಫಾರಸು ಮಾಡುತ್ತಾರೆ. ಆಯುರ್ವೇದದ ಪ್ರಕಾರ, ವಾತ, ಪಿತ್ತ ಮತ್ತು ಕಫ ಸಮತೋಲನದಲ್ಲಿದ್ದರೆ ದೇಹವು ಆರೋಗ್ಯಕರ ಸ್ಥಿತಿಯಲ್ಲಿರುತ್ತದೆ. ಯಾವುದೇ ಅಸಮತೋಲನವು ಆರೋಗ್ಯದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಪೌಷ್ಟಿಕಾಂಶದ ಗುಣಗಳನ್ನು ಹೊಂದಿರುವ ಬಾದಾಮಿಯ ದೈನಂದಿನ ಸೇವನೆಯು ವಾತ ಮತ್ತು ಪಿತ್ತ ದೋಷಗಳನ್ನು ನಿವಾರಿಸಲು ಸಹ ಪ್ರಯೋಜನಕಾರಿ ಎಂದು ನಂಬಲಾಗಿದೆ.

ಹಿರಿಯ ಆಯುರ್ವೇದ ತಜ್ಞ ಡಾ.ವಿಶಾಖ ಮಹೀಂದ್ರೂ ಅವರು ಪ್ರತಿದಿನ ಬಾದಾಮಿ ಸೇವಿಸುವುದರಿಂದ ಆಗುವ ಪ್ರಮುಖ ಐದು ಪ್ರಯೋಜನಗಳನ್ನು ಸೂಚಿಸಿದ್ದಾರೆ. ಅವುಗಳು ಈ ಕೆಳಗಿನಂತಿವೆ:

ಮಧುಮೇಹಿಗಳಿಗೆ ಪ್ರಯೋಜನಕಾರಿ: ನೆನೆಸಿದ ಬಾದಾಮಿ ಸೇವನೆಯು ದುರ್ಬಲತೆ ಮತ್ತು ದೌರ್ಬಲ್ಯದಂತಹ ಮಧುಮೇಹದ ಕೆಲವು ತೊಡಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆಯುರ್ವೇದದ ಪ್ರಕಾರ, ಸ್ಥೂಲಕಾಯತೆ, ಪ್ರಿಡಿಯಾಬಿಟಿಸ್ ಮೆಟಬಾಲಿಕ್ ಸಿಂಡ್ರೋಮ್‌ನಂತಹ ಅಸ್ವಸ್ಥತೆಗಳನ್ನು ಸಂಯೋಜಿಸುವ ಮಧುಮೇಹ ಪರಿಸ್ಥಿತಿಗಳಲ್ಲಿ ಬಾದಾಮಿ ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉತ್ತಮ: ಆಯುರ್ವೇದದ ಪ್ರಕಾರ, ಬಾದಾಮಿಯ ದೈನಂದಿನ ಸೇವನೆಯು ದೇಹದ ಅಂಗಾಂಶಗಳಿಗೆ ತೇವಾಂಶವನ್ನು ನೀಡುತ್ತದೆ, ಚರ್ಮದ ಬಣ್ಣವನ್ನು ಸುಧಾರಿಸುತ್ತದೆ ಮತ್ತು ಅದರ ಹೊಳಪನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಮತ್ತು ಕೂದಲು ಉದುರುವಿಕೆ ನಿಯಂತ್ರಣಕ್ಕೂ ಸಹಕಾರಿಯಾಗಿದೆ.

ಜ್ಞಾಪಕಶಕ್ತಿ ಹೆಚ್ಚಿಸಲು ಸಹಕಾರಿ: ಆಯುರ್ವೇದದ ಪ್ರಕಾರ, ನರಮಂಡಲವನ್ನು ಬಲಪಡಿಸಲು ಪ್ರತಿದಿನ ಬಾದಾಮಿ ಸೇವಿಸಬೇಕು. ಬಾದಾಮಿ ಸೇವನೆಯು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ.

ಸಂತಾನೋತ್ಪತ್ತಿ ಕಾರ್ಯದ ಸಾಮರ್ಥ್ಯಕ್ಕೆ ಬೆಂಬಲ: ಪ್ರತಿನಿತ್ಯ ಬಾದಾಮಿ ಸೇವನೆ ಮಾಡುವುದರಿಂದ ಸಂತಾನೋತ್ಪತ್ತಿ ಅಂಗಾಂಶ ಮತ್ತು ಕಾರ್ಯದ ಸಾಮರ್ಥ್ಯವನ್ನು ಬೆಂಬಲಿಸುತ್ತದೆ. ಉತ್ತಮ ಪ್ರಯೋಜನಗಳನ್ನು ಪಡೆಯಲು ಪ್ರತಿದಿನ ತಿನ್ನಲು ಶಿಫಾರಸು ಮಾಡಲಾಗಿದೆ.

ಸ್ನಾಯುವಿನ ಶಕ್ತಿ ಹೆಚ್ಚಿಸಲು ಪರಿಣಾಮಕಾರಿ: ಬಾದಾಮಿಯಂತಹ ಬೀಜಗಳನ್ನು ಸೇವಿಸುವುದು ಕ್ರಮೇಣ ತೂಕವನ್ನು ಹೆಚ್ಚಿಸುವ ಆರೋಗ್ಯಕರ ವಿಧಾನಗಳಲ್ಲಿ ಒಂದಾಗಿದೆ. ಬಾದಾಮಿಯು ಆಯುರ್ವೇದದ ಪ್ರಕಾರ ದೇಹದ ದ್ರವ್ಯರಾಶಿ ಮತ್ತು ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೆಚ್ಚಿನ ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಜನರಿಂದ ತುಂಬಿ ಹೋಯ್ತು ಕೆ.ಆರ್ ಮಾರ್ಕೆಟ್!
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಜನರಿಂದ ತುಂಬಿ ಹೋಯ್ತು ಕೆ.ಆರ್ ಮಾರ್ಕೆಟ್!
ಶಿಗ್ಗಾಂವಿ ದೇವಾಲಯದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕ
ಶಿಗ್ಗಾಂವಿ ದೇವಾಲಯದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕ