ದೇಹದಲ್ಲಿನ ಅತಿಯಾದ ತೂಕ ಇಳಿಕೆಗೆ ಜಿಮ್ ಹಾಗೂ ಮತ್ತಿತ್ತರ ಪ್ರಯೋಗಗಳನ್ನು ಮಾಡುತ್ತೇವೆ. ದೇಹದ ತೂಕ ಇಳಿಕೆಗೆ ನಮ್ಮ ನಡುವೆಯೇ ಇರುವ ಕೆಲವು ಸರಳವಾದ ವಿಧಾನಗಳೆಡೆಗೆ ಗಮನ ಹರಿಸುವುದಿಲ್ಲ. ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಅತಿಯಾದ ದೇಹದ ತೂಕಕ್ಕೆ ಬ್ರೇಕ್ ಹಾಕಬಹುದು. ಹೌದು ಕೆಲವು ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವೂ ಉತ್ತಮಗೊಳ್ಳುತ್ತದೆ. ತೂಕವೂ ನಷ್ಟವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಂದರ್ಭವೂ ಎದುರಾಗುವುದಿಲ್ಲ. ಒಮೆಗಾ 3 ಬೀಜಗಳು ದೇಹಕ್ಕೆ ಬೇಕಾದ ಪ್ರೊಟೀನ್, ಆರೋಗ್ಯಕರ ಕೊಬ್ಬನ್ನು ನೀಡಿ ನಿಮ್ಮ ಆರೋಗ್ಯ ಸುಧಾರಣೆಗೆ ಕಾರಣವಾಗುತ್ತದೆ. ಈ ಬೀಜಗಳನ್ನು ಸೇವಿಸುವುದರಿಂದ ಅತಿಯಾದ ತೂಕದ ನಷ್ಟಕ್ಕೆ ಸಹಾಯಕವಾಗಲಿದೆ.
ಚಿಯಾ ಬೀಜಗಳು
ದೇಹದ ತೂಕವನ್ನು ಇಳಿಸಲು ಚಿಯಾ ಬೀಜದಲ್ಲಿರುವ ಪೈಬರ್ ಅಂಶಗಳು ಸಹಾಯಕವಾಗಿದೆ. ಈ ಬಗ್ಗೆ ಯುಎಸ್ಡಿಎ ಅಧ್ಯಯನವೂ ತಿಳಿಸಿದೆ. 28.3 ಗ್ರಾಂ ಚಿಯಾ ಬೀಜದಲ್ಲಿ (2 ಚಮಚ) ಸುಮಾರು 10 ಗ್ರಾಂನಷ್ಟು ಪೈಬರ್ ಅಂಶವಿರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ರಾತ್ರಿ ನೀವು ನೀರಿನಲ್ಲಿ ಚಿಯಾ ಬೀಜಗಳನ್ನು ನೆನೆಸಿಟ್ಟು ಬೆಳಗ್ಗೆ ಸೇವಿಸಿದರೆ ಆರೋಗ್ಯಕ್ಕೂ ಉತ್ತಮವಾಗಿದೆ.
ಅಗಸೆ ಬೀಜ
ಅಗಸೆ ಬೀಜಗಳು ನಿಮ್ಮ ಪಿಟ್ನೆಸ್ ಸೂತ್ರಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಏಕೆಂದರೆ ಅಗಸೆ ಬೀಜಗಳು ದೇಹದಲ್ಲಿನ ತೂಕ ನಷ್ಟಕ್ಕೆ ಸಹಾಯಕವಾಗಿದೆ. ಅಗಸೆ ಬೀಜಗಳನ್ನು ನೀವು ಮೊಸರು ಅಥವಾ ಚಹಾದೊಂದಿಗೂ ಮಿಶ್ರಣ ಮಾಡಿ ಸೇವಿಸಬಹುದು ಇದು ನಿಮ್ಮ ಅತಿಯಾದ ತೂಕ ನಷ್ಟಕ್ಕೆ ಹೇಳಿ ಮಾಡಿಸಿದ ಆಹಾರವಾಗಿದೆ.
ಎಳ್ಳು
ಎಳ್ಳು ಅಥವಾ ತಿಲ್ ನಿಮ್ಮ ದೇಹದ ತೂಕವನ್ನು ನಿಭಾಯಿಸಲು ಉತ್ತಮ ಆಹಾರವಾಗಿದೆ. ಏಷ್ಯಾದಲ್ಲಿ ಹೆಚ್ಚು ಬಳಕೆಯಾಗುವ ಎಳ್ಳು ದೇಹಕ್ಕೆ ತಂಪು ಕೂಡ ಹೌದು. ಹೀಗಾಗಿ ನೀವು ಎಳ್ಳಿನ ಜ್ಯೂಸ್ ಸೇರಿದಂತೆ ಹಲವು ರೀತಿಯಲ್ಲಿ ಬಳಸಬಹುದು.
ಸೂರ್ಯಕಾಂತಿ ಬೀಜಗಳು
ನೀವು ದೇಹದ ತೂಕ ಇಳಿಸಲು ಯೋಜಿಸಿದ್ದರೆ ಸೂರ್ಯಕಾಂತಿ ಬೀಜಗಳ ಬಳಕೆ ಉತ್ತಮ ಆಯ್ಕೆಯಾಗಿದೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ಪೈಬರ್ ಮತ್ತು ಪ್ರೋಟೀನ್ ಅಂಶಗಳನ್ನು ಹೊಂದಿರುವ ಸೂರ್ಯಕಾಂತಿ ಬೀಜಗಳು ದೇಹವನ್ನು ಆರೋಗ್ಯವಾಗಿಡಲು ಸಹಾಯಕವಾಗಿದೆ.
ಸೆಣಬಿನ ಬೀಜಗಳು
ಸೆಣಬಿನ ಬೀಜಗಳಲ್ಲಿರುವ ಪ್ರೋಟೀನ್ ಹಾಗೂ ಪೈಬರ್ ಅಂಶಗಳು ನಿಮ್ಮ ದೇಹದ ಬೊಜ್ಜನ್ನು ಕರಗಿಸಲು ಉತ್ತಮ ಆಹಾರವಾಗಿದೆ. ಸೆಣಬಿನ ಬೀಜಗಳ ಬಗ್ಗೆ ಹಲವು ರೀತಿಯ ಹೇಳಿಕೆಗಳಿದ್ದರೂ, ಅರೋಗ್ಯ ಸುಧಾರಿಸುವಲ್ಲಿ ಸೆಣಬಿನ ಬೀಜಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ:
ಚಳಿಗಾಲದಲ್ಲಿ ಕಾಡುವ ಮಂಡಿನೋವಿನಿಂದ ಮುಕ್ತಿ ಪಡೆಯಲು ಈ ಕ್ರಮಗಳನ್ನು ಅನುಸರಿಸಿ