ಸಾಮಾನ್ಯವಾಗಿ ಹೃದಯ ಸಂಬಂಧಿ ಖಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ಕಂಡು ಬರುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರಿಗೆ ಅನಿಯಮಿತ ಮುಟ್ಟಿನ ಸಮಸ್ಯೆಗಳು, ಗರ್ಭಧಾರಣೆಯ ತೊಡಕುಗಳು, ಅತಿಯಾದ ಮಾತ್ರೆಗಳ ಸೇವನೆ ಪರಿಣಾಮದಿಂದ ಹೃದಯ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಈಗಾಗಲೇ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಅದೆಷ್ಟೋ ಔಷಧಿಗಳನ್ನು ಮಾಡಿರಬಹುದು. ಈ ಕೆಲವು ಹಣ್ಣುಗಳ ಸೇವನೆ ನಿಮ್ಮ ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
ನಿಮ್ಮ ಜೀವನ ಶೈಲಿಯಲ್ಲಿ ಸುಧಾರಣೆಯ ಬದಲಾವಣೆ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಜತೆಗೆ ಹೃದಯ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹಾಗಿರುವಾಗ ಈ ಕೆಲವು ಹಣ್ಣುಗಳು ನಿಮ್ಮ ಹೃದಯವನ್ನು ರೋಗಗಳ ಅಪಾಯದಿಂದ ರಕ್ಷಿಸುತ್ತವೆ. ಅವು ಯಾವುವು ಎಂಬ ಮಾಹಿತಿ ಈ ಕೆಳಗಿನಂತಿದೆ.
ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು ಪೋಷಕಾಂಶಗಳಿಂದ ತುಂಬಿವೆ. ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕ್ ನ್ಯೂಟ್ರಿಷನ್ ಪ್ರಕಾರ, 150 ಗ್ರಾಂ ಬೆರ್ರಿ ಹಣ್ಣುಗಳು ಹೃದಯರಕ್ತನಾಳದ ಖಾಯಿಲೆಗಳ ಅಪಾಯದ ಶೇ 15 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೇಬು ಹಣ್ಣುಗಳು
ದಿನಕ್ಕೆ ಒಂದು ಸೇಬು ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅಮೆರಿಕನ್ ಜರ್ನಲ್ ಆಫ್ ನ್ಯೂಟ್ರಿಷನ್ ಹೇಳುವಂತೆ ನಿಯಮಿತ ಸೇಬುಹಣ್ಣುಗಳ ಸೇವನೆ ಅನೇಕ ರೋಗಗಳಿಂದ ರಕ್ಷಣೆಯನ್ನು ನೀಡುತ್ತದೆ. ಖಾಯಿಲೆಯ ಅಪಾಯವನ್ನು ತಡೆಗಟ್ಟುತ್ತದೆ.
ಸಿಟ್ರಸ್ ಹಣ್ಣುಗಳು
ವಿಟಮಿನ್ ಸಿ ಹೊಂದಿರುವ ಕಿತ್ತಳೆ, ದ್ರಾಕ್ಷಿ, ನಿಂಬೆ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಹೃದಯನಾಳದ ಖಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ.
ಇದನ್ನೂ ಓದಿ:
Health Tips: ಶುಂಠಿ ಚಹಾ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?
Health Tips: ಮರಸೇಬು ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿಯಬೇಕು