ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳು, ನಾನಾ ಬಗೆಯ ಭಕ್ಷ್ಯಗಳನ್ನು ಸೇವಿಸಿ ಗಂಟಲು ನೋವು ಸಮಸ್ಯೆ ಕಾಡಬಹುದು. ಹೀಗಿರುವಾಗ ಮನೆ ಮದ್ದುಗಳನ್ನು ಬಳಸಿ ಗಂಟಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಗಂಟಲು ನೋವು ನಿವಾರಣೆ ಆಗಲು ಮನೆಮದ್ದುಗಳು ಯಾವುವು ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಕೆಲವು ಪರಿಹಾರ ಮಾರ್ಗಗಳು. ಈ ಮನೆ ಮದ್ದುಗಳನ್ನು ಮಾಡಿ ಕುಡಿಯುವುದರಿಂದ ಬಹುಬೇಗ ಗಂಟಲು ನೋವು ನಿವಾರಣ ಮಾಡಿಕೊಳ್ಳಬಹುದು.
ಅರಿಶಿಣವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಿಮಗೆ ಗಂಟಲು ನೋವು ಇದ್ದರೆ ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಅರ್ಧ ಚಮಚ ಅರಿಶಿಣ ಮತ್ತು ರುಚಿಗೆ ಚಿಟಿಕೆ ಉಪ್ಪನ್ನು ಮಿಶ್ರಣ ಮಾಡಿ ಸೇವಿಸಿ. ಇಲ್ಲವೇ, ಉಗುರು ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಕುಡಿಯುವ ಮೂಲಕ ಗಂಟಲು ನೀವು ನಿವಾರಣೆ ಮಾಡಿಕೊಳ್ಳಬಹುದಾಗಿದೆ.
ಗಂಟಲು ನೋವು ನಿವಾರಣೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ರಸವನ್ನು ಮಿಶ್ರಣ ಮಾಡಿ. ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ಇದು ಗಂಟಲು ನೋವಿನಿಂದ ಪರಿಹಾರ ನೀಡುತ್ತದೆ. ಒಣ ಕೆಮ್ಮು ಮತ್ತು ನೋಯುತ್ತಿರುವ ಗಂಟಲು ಚಿಕಿತ್ಸೆಗಾಗಿ ಉಪ್ಪು ಮತ್ತು ಬೆಚ್ಚಗಿನ ನೀರಿನ್ನು ಕುಡಿಯಿರಿ. ಬಿಸಿ ಬಿಸಿ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಿರಿ. ರುಚಿಗಾಗಿ ನಿಂಬೆ ರಸ ಕೂಡಾ ಸೇರಿಸಿಕೊಳ್ಳಬಹುದು. ಇದು ನಿಮ್ಮ ಗಂಟಲು ನೋವನ್ನು ಕಡಿಮೆ ಸಮಯದಲ್ಲಿ ಪರಿಹರಿಸುತ್ತದೆ.
ಹಸಿ ಬೆಳ್ಳುಳ್ಳಿ ನಂಜುನಿರೋಧಕ ಗುಣಗಳನ್ನು ಹೊಂದಿದೆ. ಇದು ಗಂಟಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಸೇವಿಸುವ ಮೂಲಕ ಗಂಟು ನೋವು ಬಹುಬೇಗ ಕಡಿಮೆ ಆಗುತ್ತದೆ. ಇಲ್ಲವೇ ಬೆಳ್ಳುಳ್ಳಿಯಿಂದ ತಯಾರಾದ ಪದಾರ್ಥಗಳನ್ನು ಸೇವಿಸುವ ಮೂಲಕ ಗಂಟಲು ನೋವನ್ನು ಗುಣಪಡಿಸಿಕೊಳ್ಳಬಹುದು.
ಇದನ್ನೂ ಓದಿ:
Mint Benefits: ಮನಸ್ಥಿತಿ ಸುಧಾರಣೆ ಜತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುವ ಪುದೀನಾ ಸೇವನೆಯ ಬಗ್ಗೆ ತಿಳಿಯಿರಿ