ಆಹಾರ ಸೇವಿಸಿದ ಬಳಿಕ ಉರಿಯೂತ ಅಥವಾ ಹೊಟ್ಟೆ ನೋವು ಸಮಸ್ಯೆ ಕಾಡುತ್ತಿದೆಯೇ? ಪರಿಹಾರಕ್ಕಾಗಿ ಇಲ್ಲಿದೆ ಸಲಹೆಗಳು

| Updated By: preethi shettigar

Updated on: Sep 20, 2021 | 8:08 AM

Health Tips: ನಿಮ್ಮ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿ ನಿಮ್ಮ ಹೊಟ್ಟೆ ನೋವು, ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಕೆಲವು ಸಲಹೆಗಳನ್ನು ಗಮನಿಸಿ.

ಆಹಾರ ಸೇವಿಸಿದ ಬಳಿಕ ಉರಿಯೂತ ಅಥವಾ ಹೊಟ್ಟೆ ನೋವು ಸಮಸ್ಯೆ ಕಾಡುತ್ತಿದೆಯೇ? ಪರಿಹಾರಕ್ಕಾಗಿ ಇಲ್ಲಿದೆ ಸಲಹೆಗಳು
ಸಾಂದರ್ಭಿಕ ಚಿತ್ರ
Follow us on

ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಅನೇಕರು ಹೊಟ್ಟೆ ನೋವಿನ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಹಾರ ವ್ಯವಸ್ಥೆಯಿಂದ ಹೊಟ್ಟೆ ನೋವಿನ ಸಮಸ್ಯೆ ಕಾಡುತ್ತಿದೆ. ಹೊಟ್ಟೆ ಉರಿ ಅಥವಾ ನೋವಿನಿಂದ ಜನರು ಬಳಲುತ್ತಿದ್ದಾರೆ. ಇದು ನೀವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಸರಿಯಾದ ಆಹಾರ ಸೇವಿಸದಿರುವ ಕಾರಣ ಗ್ಯಾಸ್, ಅಲ್ಸರ್, ಹೊಟ್ಟೆ ನೋವು, ಉರಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇದಲ್ಲದೇ ಆಹಾರದಲ್ಲಿ ಮಸಾಲೆಯನ್ನು ಹೆಚ್ಚು ಸೇವಿಸುವುದರಿಂದ ಜನರಲ್ಲಿ ಆಮ್ಲೀಯತೆಯ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ವಿವಿಧ ಔಷಧಿಗಳನ್ನು ಹುಡುಕುತ್ತಿರುತ್ತಾರೆ. ನಿಮ್ಮ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿ ನಿಮ್ಮ ಹೊಟ್ಟೆ ನೋವು, ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಕೆಲವು ಸಲಹೆಗಳನ್ನು ಗಮನಿಸಿ.

ಹೊಟ್ಟೆಯಲ್ಲಿ ಉರಿಯೂತ ಮತ್ತು ನೋವಿನಂತಹ ಸಮಸ್ಯೆ ಇದ್ದಲ್ಲಿ ಆಹಾರ ತಿಂದ ತಕ್ಷಣ ಸ್ವಲ್ಪ ಬೆಲ್ಲವನ್ನು ಸೇವಿಸುವುದು ಒಳ್ಳೆಯದು. ಇದು ಆಹಾರವನ್ನು ಜೀರ್ಣಿಸುವ ಕಿಣ್ವಗಳನ್ನು ಬಿಡುಗಡೆ ಮಾಡುತ್ತವೆ. ಇದಲ್ಲದೇ ಹೊಟ್ಟೆಯಲ್ಲಿ ಉರಿಯೂತದ ಸಮಸ್ಯೆಯನ್ನು ನಿವಾರಿಸುತ್ತದೆ.

ಆಹಾರ ಸೇವಿಸಿದ ಬಳಿಕ ಆಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ ತಕ್ಷಣ ಸೋಂಪು ನೀರನ್ನು ಸೇವಿಸಿ. ಇದಕ್ಕಾಗಿ ಒಂದು ಕಪ್ ನೀರಿನಲ್ಲಿ ಒಂದು ಚಮಚ ಸೋಂಪನ್ನು ಮಿಶ್ರಣ ಮಾಡಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಬಿಸಿ ಮಾಡಿ ಕುಡಿಯಿರಿ.

ಆಗಾಗ ಹೊಟ್ಟೆ ನೋವು, ಉರಿಯೂತವನ್ನು ಅನುಭವಿಸುತ್ತಿರುವ ಜನರು ನೈಸರ್ಗಿಕ ಆಲೋವೆರಾ ರಸವನ್ನು ಸೇವಿಸುವುದು ಉತ್ತಮ. ಇದು ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕರುಳಿನಲ್ಲಿ ನೀರಿನ ಅಂಶವನ್ನು ಹೆಚ್ಚಿಸುತ್ತದೆ. ಹೊಟ್ಟೆ ನೋವಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅತಿಯಾಗಿ ಸೇವಿಸಿದರೆ ಅಮೃತವೂ ವಿಷ ಎಂಬಂತೆ ಅಲೋವೆರಾ ರಸವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

ಇದನ್ನೂ ಓದಿ:

Health Tips: ಥೈರಾಯ್ಡ್​ ಸಮಸ್ಯೆ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ

Health Tips: ಬಾಯಿಯಿಂದ ದುರ್ವಾಸನೆ ಬರುತ್ತಿದೆಯೇ? ಸಮಸ್ಯೆ ಪರಿಹಾರಕ್ಕಾಗಿ ಇಲ್ಲಿದೆ ಸರಳ ಸಲಹೆಗಳು

(These tips and home remedies for stomach problems check in Kannada)