Good Sleep: ನಿಮಗೆ ಒಳ್ಳೆಯ ನಿದ್ರೆ ಬೇಕೆ? ಮಲಗುವ ಮುನ್ನ ಹೀಗೆ ಮಾಡಿ

| Updated By: shruti hegde

Updated on: Oct 06, 2021 | 9:07 AM

Health Tips: ನಿಮಗೆ ಒಳ್ಳೆಯ ನಿದ್ರೆ ಬೇಕೆ? ಮಾತ್ರೆ ಸೇವಿಸದೇಯೇ ಒಳ್ಳೆಯ ನಿದ್ರೆ ಪಡೆಯಲು ಏನು ಮಾಡಬೇಕು ಎಂದು ಚಿಂತಿಸುತ್ತಿದ್ದೀರಾ? ಇಲ್ಲಿದೆ ಸಮಸ್ಯೆಗೆ ಪರಿಹಾರ.

Good Sleep: ನಿಮಗೆ ಒಳ್ಳೆಯ ನಿದ್ರೆ ಬೇಕೆ? ಮಲಗುವ ಮುನ್ನ ಹೀಗೆ ಮಾಡಿ
ಸಂಗ್ರಹ ಚಿತ್ರ
Follow us on

ಆರೋಗ್ಯ ಪದ್ಧತಿ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ರಾತ್ರಿಯಲ್ಲಿನ ಒಳ್ಳೆಯ ನಿದ್ರೆಯನ್ನು ಕಿತ್ತುಕೊಳ್ಳಬಹುದು. ರಾತ್ರಿ ಸರಿಯಾಗಿ ನಿದ್ರೆ ಇಲ್ಲದಿದ್ದರೆ ಮರುದಿನ ಕೆಲಸ ಮಾಡಲು ಉತ್ಸಾಹವಿರುವುದಿಲ್ಲ. ಜತೆಗೆ ತಲೆನೋವಿನಂತಹ ಸಣ್ಣ ಪುಟ್ಟ ಕಿರಿ ಕಿರಿ, ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಿರುವಾಗ ಒಳ್ಳೆಯ ನಿದ್ರೆ ಪಡೆಯಲು ಏನೆಲ್ಲಾ ಮಾಡಬೇಕು ಎಂಬ ಮಾಹಿತಿ ಈ ಕೆಳಗಿನಂತಿದೆ.

ಕೆಲವರು ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲವೆಂದು ಮಾತ್ರೆ ನುಂಗುತ್ತಾರೆ. ಅದರೆ ಇವು ನಿಮ್ಮ ಇತರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮಾತ್ರೆ ಸೇವಿಸದೇಯೇ ಒಳ್ಳೆಯ ನಿದ್ರೆ ಪಡೆಯಲು ಏನು ಮಾಡಬೇಕು ಎಂದು ಚಿಂತಿಸುತ್ತಿದ್ದೀರಾ? ಇಲ್ಲಿದೆ ಸಮಸ್ಯೆಗೆ ಪರಿಹಾರ.

ರಾತ್ರಿ ಮಲಗುವ ಮುನ್ನ ಮೊಬೈಲ್​ನಿಂದ ದೂರವಿರಿ
ಹೆಚ್ಚಿನ ಜನರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್​ನೊಂದಿಗೆ ಕಳೆಯುತ್ತಾರೆ. ಇದು ದೃಷ್ಟಿ ಸಮಸ್ಯೆಗೆ ಕಾರಣವಾಗಬಹುದು. ಜತೆಗೆ ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡುತ್ತಲೇ ಇರುವುದರಿಂದ ಕಣ್ಣಿಗೆ ಒತ್ತಡ ಉಂಟಾಗುತ್ತದೆ. ಇದರಿಂದ ನಿಮ್ಮ ಮನಸ್ಥಿತಿ ಹದಗೆಟ್ಟು ಒಳ್ಳೆಯ ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ಒಳ್ಳೆಯ ನಿದ್ರೆ ಪಡೆಯಲು ನಿದ್ರೆ ಮಾಡುವ ಒಂದು ಗಂಟೆ ಮೊದಲು ಮೊಬೈಲ್​ನಿಂದ ದೂರವಿರಿ.

ಮಲಗುವ ಮುನ್ನ ಸ್ನಾನ ಮಾಡಿ
ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದು ದಣಿದಿದ್ದಾಗ ದೇಹ ಆಯಾಸಗೊಂಡಿರುತ್ತದೆ. ಹಾಗಿರುವಾಗ ಧೂಳು, ಕಲುಷಿತ ವಾತಾವರಣದಿಂದ ದೇಹವನ್ನು ರಕ್ಷಿಸಿಕೊಳ್ಳಲು ಸ್ನಾನ ಮಾಡುವುದು ಅತ್ಯವಶ್ಯಕ. ಜತೆಗೆ ಸ್ನಾನ ಮಾಡುವುದರಿಂದ ದೇಹದ ಆಯಾಸ ಕಡಿಮೆ ಆಗುತ್ತದೆ. ಇದರಿಂದ ಒಳ್ಳೆಯ ನಿದ್ರೆ ಮಾಡಬಹುದು.

ಉಸಿರಾಟ ಸಂಬಂಧಿತ ವ್ಯಾಯಾಮ
ಪ್ರತಿನಿತ್ಯ ಉಸಿರಾಟವನ್ನು ಸುಧಾರಿಸುವ ವ್ಯಾಯಾಮಗಳನ್ನು ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಜತೆಗೆ ಪ್ರಾಣಾಯಾಮ, ಯೋಗಾಸನ ಮತ್ತು ಧ್ಯಾನ ಆರೋಗ್ಯಕ್ಕೆ ಉತ್ತಮ. ಮನಸ್ಸು ಶಾಂತವಾಗಿರಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿನಿತ್ಯ ವ್ಯಾಯಾಮ ಅಭ್ಯಾಸದಲ್ಲಿ ತೊಡಗಿಕೊಳ್ಳಿ.

ಒಳ್ಳೆಯ ಪುಸ್ತಕವನ್ನು ಓದಿ
ಮಲಗುವ ಮುನ್ನ ನಿಮಗಿಷ್ಟದ ಒಳ್ಳೆಯ ಪುಸ್ತಕವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಮನಸ್ಸು ಶಾಂತವಾಗಿದ್ದರೆ ರಾತ್ರಿಯಲ್ಲಿ ಒಳ್ಳೆಯ ನಿದ್ರೆ ಮಾಡಬಹುದು. ಓದುವಾಗ ಮನಸ್ಸು ಏಕಾಗ್ರತೆಯಿಂದ ಕೂಡಿರುವುದರಿಂದ ಮನಸ್ಸಿಗೆ ಅನಗತ್ಯ ಯೋಚನೆಗಳು ಕಿರಿ ಕಿರಿ ಉಂಟು ಮಾಡುವುದಿಲ್ಲ.

ಇದನ್ನೂ ಓದಿ:

Health Tips: ಶೀತ, ಕೆಮ್ಮಿನ ಸಮಸ್ಯೆಗಳ ಪರಿಹಾರಕ್ಕಾಗಿ ಸಲಹೆಗಳು ಇಲ್ಲಿವೆ

Health Tips: ಆಫೀಸು, ಮನೆ ಈ ಎಲ್ಲವುಗಳ ಒತ್ತಡದಿಂದ ಬಳಲುತ್ತಿದ್ದೀರಾ?; ಹೊರಬರಲು ಇಲ್ಲಿವೆ ಸುಲಭ ವಿಧಾನಗಳು