Skipping: ಸ್ಕಿಪ್ಪಿಂಗ್ ಮಾಡುವ ಅಭ್ಯಾಸ ಇದೆಯೇ? ಸ್ನಾಯು ಮತ್ತು ಹೃದಯದಲ್ಲಾಗುವ ಬದಲಾವಣೆಯ ಬಗ್ಗೆ ಗಮನಹರಿಸಿ

ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ಕಣ್ಣು, ಕೈ ಮತ್ತು ಪಾದಗಳ ನಡುವಿನ ಸಮನ್ವಯವನ್ನು ಹೆಚ್ಚಾಗುತ್ತದೆ. ಆದರೆ ಇದು ಕಡಿಮೆ ಅವಧಿಯ ವ್ಯಾಯಾಮ, ಅಂದರೆ ಇದನ್ನು ಗರಿಷ್ಠ 20 ನಿಮಿಷಗಳ ಕಾಲ ಮಾಡಬೇಕು.

Skipping: ಸ್ಕಿಪ್ಪಿಂಗ್ ಮಾಡುವ ಅಭ್ಯಾಸ ಇದೆಯೇ? ಸ್ನಾಯು ಮತ್ತು ಹೃದಯದಲ್ಲಾಗುವ ಬದಲಾವಣೆಯ ಬಗ್ಗೆ ಗಮನಹರಿಸಿ
ಸಂಗ್ರಹ ಚಿತ್ರ
Follow us
TV9 Web
| Updated By: preethi shettigar

Updated on: Oct 05, 2021 | 3:18 PM

ಸ್ಕಿಪ್ಪಿಂಗ್ ಒಂದು ಪರಿಣಾಮಕಾರಿಯಾದ ವ್ಯಾಯಾಮವಾಗಿದೆ. ಇದು ದೇಹವನ್ನು ಸದೃಡವಾಗಿರಲು ಸಹಾಯ ಮಾಡುತ್ತದೆ. ಹಾಗೆಯೇ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ. ಇದರ ಜೊತೆಗೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ, ಸ್ಕಿಪ್ಪಿಂಗ್(Skipping) ಮಾಡುವುದು ಉತ್ತಮ. ಇದು ಚಯಾಪಚಯವನ್ನು ವೇಗಗೊಳಿಸುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ಕಣ್ಣು, ಕೈ ಮತ್ತು ಪಾದಗಳ ನಡುವಿನ ಸಮನ್ವಯವನ್ನು ಹೆಚ್ಚಾಗುತ್ತದೆ. ಆದರೆ ಇದು ಕಡಿಮೆ ಅವಧಿಯ ವ್ಯಾಯಾಮ, ಅಂದರೆ ಇದನ್ನು ಗರಿಷ್ಠ 20 ನಿಮಿಷಗಳ ಕಾಲ ಮಾಡಬೇಕು. ದಿನನಿತ್ಯ ಮಾಡುವ ಇತರ ವ್ಯಾಯಾಮದ ಜತೆಗೆ ಸ್ಕಿಪ್ಪಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇನ್ನು ಸ್ಕಿಪ್ಪಿಂಗ್​ಗಾಗಿ ಯಾವುದೋ ಹಗ್ಗ ಬಳಸುವುದು ಸೂಕ್ತವಲ್ಲ. ಇದಕ್ಕಾಗಿ ಸೂಕ್ತವಾದ ಹಗ್ಗವನ್ನು ಬಳಸಿ.

ಸರಿಯಾದ ಹಗ್ಗವನ್ನು ಆರಿಸಿ ಮಣಿ ಹಗ್ಗದ ತೂಕ ಕಡಿಮೆ ಇರುತ್ತದೆ. ಇದು ಸ್ಕಿಪ್ಪಿಂಗ್ ಮಾಡುವ ಕ್ರಮವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ನೀವು ಈಗತಾನೇ ಸ್ಕಿಪ್ಪಿಂಗ್ ಆರಂಭಿಸಿದರೆ, ಪ್ಲಾಸ್ಟಿಕ್ ಹಗ್ಗವನ್ನು ಆಯ್ಕೆ ಮಾಡಬೇಡಿ. ಪ್ರತಿರೋಧವನ್ನು ಹೆಚ್ಚಿಸಲು ಅಥವಾ ವೇಗವಾಗಿ ಜಿಗಿಯಲು ಬಯಸಿದರೆ ಕಡಿಮೆ ತೂಕದ ಹಗ್ಗ ಬಳಸಿ. ಅದಾಗ್ಯೂ, 3 ಅಡಿ ಎತ್ತರವಾಗಿರುವ ಹಗ್ಗ ಬಳಸಿ.

ಸ್ಕಿಪ್ಪಿಂಗ್ ಹೇಗಿರಬೇಕು? 30 ಸೆಕೆಂಡುಗಳ ಕಾಲ ನಿರಂತರವಾಗಿ ಜಿಗಿವುದು ಸೂಕ್ತ ಮಾರ್ಗವಾಗಿದೆ. ಇದನ್ನು ಎರಡೂ ಕಾಲುಗಳಿಂದ ಜಿಗಿಯುವುದು ಎಂದೂ ಕರೆಯಲಾಗುತ್ತದೆ. 60 ಸೆಕೆಂಡುಗಳ ಕಾಲ ವಿಶ್ರಾಂತಿ ಪಡೆಯಿರಿ. ತದನಂತರ 30 ಸೆಕೆಂಡುಗಳ ಕಾಲ ಜಿಗಿಯುವುದನ್ನು ಮುಂದುವರಿಸಿ. ಇದನ್ನು 9 ಬಾರಿ ಪುನರಾವರ್ತಿಸಿ. 30 ಸೆಕೆಂಡುಗಳ ಜಂಪಿಂಗ್ ಜ್ಯಾಕ್ಸ್ ನಂತರ 15 ಸೆಕೆಂಡುಗಳ ಕಾಲ ವಿಶ್ರಾಂತಿ ಪಡೆಯಿರಿ. ಕ್ರಾಸ್ ರೋಪ್ ಜಂಪಿಂಗ್ ಕೂಡ ಮಾಡಿ. ನಿಮಗೆ ಅನುಭವವಿದ್ದಾಗ ಮಾತ್ರ ಇದನ್ನು ಮಾಡಿ. ನಂತರ, 15 ಸೆಕೆಂಡುಗಳ ಕಾಲ ವಿಶ್ರಾಂತಿ ಪಡೆಯಿರಿ. ನಂತರ 30 ಸೆಕೆಂಡ್ ಸ್ಕಿಪ್ಪಿಂಗ್ ಮಾಡಿ. ಮತ್ತೊಮ್ಮೆ ವಿಶ್ರಾಂತಿ ಪಡೆಯಿರಿ. ಮತ್ತೆ 30 ಸೆಕೆಂಡುಗಳ ಸ್ಕಿಪ್ಪಿಂಗ್ ಮಾಡಿ.

ಸ್ಕಿಪ್ಪಿಂಗ್ ಮಾಡುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿ

1. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜನರು ಸ್ಕಿಪ್ಪಿಂಗ್ ಮಾಡಬಾರದು. 2. ಯಾವುದೇ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸಿದ ನಂತರವೇ ಸ್ಕಿಪ್ಪಿಂಗ್ ಮಾಡಿ. 3. ಅಧಿಕ ರಕ್ತದೊತ್ತಡ ಹೊಂದಿರುವ ಜನರು ಸ್ಕಿಪ್ಪಿಂಗ್ ಮಾಡಬಾರದು. 4. ಯಾವುದೇ ಮೂಳೆ ಸಂಬಂಧಿತ ಸಮಸ್ಯೆ ಇರುವವರು ಸ್ಕಿಪ್ಪಿಂಗ್ ಮಾಡಬಾರದು.

ಇದನ್ನೂ ಓದಿ: Health Tips: ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಒಂದಷ್ಟು ಮನೆ ಮದ್ದುಗಳು

Edamame Beans: ದೈನಂದಿನ ಆಹಾರದಲ್ಲಿ ಸೋಯಾ ಬೀನ್ಸ್ ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!