ಇತ್ತೀಚಿನ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಯಗಳು ವಯಸ್ಸಲ್ಲದ ವಯಸ್ಸಿನಲ್ಲಿ ಕಂಡು ಬರುತ್ತಿರುವುದು ಸುಳ್ಳಲ್ಲ. ಇದರಲ್ಲಿ ಮಧುಮೇಹ ಕಾಯಿಲೆ ಕೂಡ ಒಂದು. ಡಯಾಬಿಟಿಸ್ (Diabetes) ಒಂದು ರೀತಿಯ ದೊಡ್ಡ ಆರೋಗ್ಯ ಸಮಸ್ಯೆ. ಈಗಾಗಲೇ ಶುಗರ್ ಅಥವಾ ಡಯಾಬಿಟಿಸ್ ಅಥವಾ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು, ಇದರಿಂದ ಹೈರಾಣಾಗಿಬಿಟ್ಟಿದ್ದಾರೆ. ಈ ರೋಗ ಒಮ್ಮೆ ಆರಂಭವಾದರೆ ಬೇರೆಯವರಂತೆ ಬದುಕಲು ಸಾಧ್ಯವಿಲ್ಲ. ಆದರೆ ಡಯಾಬಿಟಿಸ್ ಎಂದಿಗೂ ಒಮ್ಮೆಲೇ ಕಾಣಿಸಿಕೊಳ್ಳುವ ಕಾಯಿಲೆ ಅಲ್ಲ. ಇದು ನಿಮಗೆ ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ. ಆಗ ಆ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಬೆಳಿಗ್ಗೆ ಎದ್ದಾಗ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳಿಗೂ ಡಯಾಬಿಟಿಸ್ ರೋಗಕ್ಕೂ ಸಂಬಂಧ ಇರುತ್ತದೆ. ಇವುಗಳನ್ನು ನಿರ್ಲಕ್ಷ ಮಾಡದೆಯೇ ಸರಿಯಾಗಿ ಪತ್ತೆ ಹಚ್ಚಬೇಕಾಗುತ್ತದೆ. ಹಾಗಾದರೆ ಬೆಳಿಗ್ಗೆ ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ? ಡಯಾಬೇಟಿಸ್ ಹೆಚ್ಚುತ್ತಿರಲು ಕಾರಣವೇನು? ಅದನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯ ಡಾ. ಅಜಿತ್ ಜೈನ್ ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಅವರು ಹೇಳುವ ಪ್ರಕಾರ, “ಕೆಲವು ಲಕ್ಷಣಗಳನ್ನು ಕಡೆಗಣಿಸಬಾರದು. ಬೆಳಿಗ್ಗೆ ಎದ್ದಾಗ ಆಯಾಸದ ಅನುಭವ ಆಗುವಂತದ್ದು ಅಥವಾ ಬಾಯಿ ಒಣಗಿದ ಅನುಭವ ಆಗುವುದು ಅಥವಾ ಕೆಲವರಿಗೆ ಹಸಿವು ಹೆಚ್ಚು ಅಥವಾ ಕಡಿಮೆ ಆಗುವುದು, ಇನ್ನು ಕೆಲವರಿಗೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕು ಎನಿಸುವುದು ಡಯಾಬಿಟೀಸ್ ಲಕ್ಷಣವಾಗಿರಬಹುದು. ಹಾಗಾಗಿ ಈ ರೀತಿ ಅನುಭವ ಆಗುತ್ತಿದ್ದರೆ ಅದನ್ನು ಕಡೆಗಣಿಸಕೂಡದು. ತಕ್ಷಣವೇ ನಿಮ್ಮ ಶುಗರ್ ಲೆವೆಲ್ ಅನ್ನು ಪರೀಕ್ಷಿಸಿಕೊಳ್ಳಬೇಕು” ಎಂದು ಅವರು ಹೇಳುತ್ತಾರೆ.
ಡಾ. ಜೈನ್ ಅವರ ಪ್ರಕಾರ, ಟೈಪ್-2 ಡಯಾಬೇಟಿಸ್ ಬರಲು ಆಹಾರ ಮತ್ತು ಜೀವನಶೈಲಿ ಹಾಳಾಗಿರುವುದು ಮುಖ್ಯ ಕಾರಣವಾಗುತ್ತದೆ. ಸಾಮಾನ್ಯವಾಗಿ ಮೊದಲು, 50 ವರ್ಷಗಳ ಬಳಿಕ ಜನರಿಗೆ ಟೈಪ್- 2 ಡಯಾಬೇಟಿಸ್ ಕಾಣಿಸಿಕೊಳ್ಳುತ್ತಿತ್ತು ಆದರೆ ಈಗ ಚಿಕ್ಕ ವಯಸ್ಸಿನಲ್ಲಿ, ಅಂದರೆ 25 ರಿಂದ 35 ವರ್ಷ ವಯಸ್ಸಿನವರಲ್ಲಿಯೇ ಈ ಕಾಯಿಲೆ ಕಂಡುಬರುತ್ತಿದೆ. ಇದಕ್ಕೆ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ನಾವು ಮಾಡಿಕೊಂಡಂತಹ ಬದಲಾವಣೆಗಳೇ ಕಾರಣವಾಗಿರುತ್ತದೆ. ಅದಲ್ಲದೆ ಜನರ ಆಹಾರದಲ್ಲಿ ಜಂಕ್ ಫುಡ್ ಸೇವನೆ ಅತಿರೇಕವಾಗಿದೆ. ಮದ್ಯಪಾನ ಹೆಚ್ಚುತ್ತಿದೆ, ನಿದ್ರೆ ಹಾಳಾಗುತ್ತಿದೆ. ಹೀಗೆ ಅನೇಕ ಕಾರಣಗಳಿದ್ದು, ಜನರು ಟೈಪ್-2 ಡಯಾಬೇಟಿಸ್ ಕಾಯಿಲೆಗೆ ಶಿಕಾರಿಗಳಾಗುತ್ತಿದ್ದಾರೆ. ಅದಲ್ಲದೆ ಈ ಡಯಾಬೇಟಿಸ್ ಕಾಯಿಲೆಯಿಂದಾಗಿ ಜನರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರಲು ಆರಂಭಿಸಿವೆ.
ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಕುಂಬಳಕಾಯಿ ರಸವನ್ನು ಕುಡಿದರೆ ಏನಾಗುತ್ತೆ ಗೊತ್ತಾ?
ಈ ಮಹಾಮಾರಿ ಬರುವುದನ್ನು ತಪ್ಪಿಸಲು ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಬೇಕು. ಊಟದಲ್ಲಿ ಉಪ್ಪಿನ ಸೇವನೆ ಮಿತಿಯಲ್ಲಿದ್ದರೆ ಒಳ್ಳೆಯದು. ಮಾನಸಿಕ ಒತ್ತಡದಿಂದ ಹೊರಗೆ ಬನ್ನಿ ಮತ್ತು ಕನಿಷ್ಠ ಆರು ಗಂಟೆಗಳು ಸರಿಯಾಗಿ ನಿದ್ರೆ ಮಾಡುವ ಮೂಲಕ ಆರೋಗ್ಯವಾಗಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ