ತಾಮ್ರದ ನೀರಿನ ಬಾಟಲಿ vs ಸ್ಟೀಲ್ ಬಾಟಲಿ, ಆರೋಗ್ಯಕ್ಕೆ ಯಾವುದು ಒಳ್ಳೆಯದು?
ನೀವು ತಾಮ್ರದ ಬಾಟಲಿ ಅಥವಾ ಸ್ಟೀಲ್ ಬಾಟಲಿಗಳಲ್ಲಿ ಯಾವುದನ್ನು ಖರೀದಿಸಬೇಕು ಎಂಬ ಗೊಂದಲದಲ್ಲಿದ್ದೀರಾ? ತಾಮ್ರದ ಬಾಟಲಿಯಲ್ಲಿ ನೀರನ್ನು ಸಂಗ್ರಹಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಸ್ವಚ್ಛತೆಯ ದೃಷ್ಟಿಯಿಂದ ಸ್ಟೀಲ್ ಬಾಟಲಿ ಒಳ್ಳೆಯದು. ಬಾಳಿಕೆ ಬರುತ್ತದೆ ಜೊತೆಗೆ ಪ್ಲಾಸ್ಟಿಕ್ ಬಾಟಲಿಗಳಂತೆ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ. ಹಾಗಾದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಯಾವುದರ ಬಳಕೆ ಉತ್ತಮ ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ನೀರು(water) ಕುಡಿಯುವುದು ಬಹಳ ಮುಖ್ಯ. ಅದರಲ್ಲಿಯೂ ಹೊರಗೆ ಹೋಗುವಾಗ ತಪ್ಪದೆ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯ ಅಭ್ಯಾಸ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರು ಮತ್ತು ಮನೆಯಲ್ಲಿ ಚಿಕ್ಕ ಮಕ್ಕಳಿರುವವರು, ಆರೋಗ್ಯ ಸಮಸ್ಯೆಯನ್ನು ದೂರವಿಡಲು ಹೆಚ್ಚಿನ ಗಮನ ವಹಿಸುತ್ತಿದ್ದು ತಮ್ಮ ಯೋಗಕ್ಷೇಮದ ದೃಷ್ಟಿಯಿಂದ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ತಪ್ಪಿಸುತ್ತಿದ್ದಾರೆ. ಅದರ ಬದ್ಲಾಗಿ ಸ್ಟೀಲ್ (Steel) ಅಥವಾ ತಾಮ್ರದ (Copper ) ಬಾಟಲಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಯಾವುದರ ಬಳಕೆ ಉತ್ತಮ ಎಂಬುದರ ಬಗ್ಗೆ ತಿಳಿದುಕೊಳ್ಳಿ.
ತಾಮ್ರದ ಬಾಟಲಿಗಳ ಪ್ರಯೋಜನಗಳೇನು?
- ಆಯುರ್ವೇದದ ಪ್ರಕಾರ, ತಾಮ್ರದ ಪಾತ್ರೆ ಅಥವಾ ಬಾಟಲಿಗಳಲ್ಲಿ ಇಟ್ಟಂತಹ ನೀರಿನಲ್ಲಿ ಔಷಧೀಯ ಗುಣಗಳಿರುತ್ತದೆ. ನೀರನ್ನು ತಾಮ್ರದ ಪಾತ್ರೆ ಅಥವಾ ಬಾಟಲಿಗಳಲ್ಲಿ ಕನಿಷ್ಠ 8 ಗಂಟೆಗಳ ಕಾಲ ಇಟ್ಟರೆ, ತಾಮ್ರದಲ್ಲಿನ ಖನಿಜಗಳು ನೀರಿನಲ್ಲಿ ಬೆರೆಯುತ್ತವೆ.
- ತಾಮ್ರದ ನೀರು ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ತಾಮ್ರದ ಪಾತ್ರೆ ಅಥವಾ ಬಾಟಲಿಗಳಲ್ಲಿ ಸಂಗ್ರಹಿಸಿಟ್ಟ ನೀರು ರೋಗಾಣುಗಳನ್ನು ನಿವಾರಣೆ ಮಾಡಿ ನೀರನ್ನು ಶುದ್ಧಗೊಳಿಸುತ್ತದೆ.
- ತಾಮ್ರದ ನೀರು ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ತಾಮ್ರದ ಬಾಟಲಿಗಳನ್ನು ಬಳಸುವವರು ದಿನನಿತ್ಯ ಸ್ವಚ್ಛವಾಗಿ ತೊಳೆಯಬೇಕಾಗುತ್ತದೆ.
ಸ್ಟೀಲ್ ಬಾಟಲಿಗಳ ಪ್ರಯೋಜನಗಳು;
- ಸಾಮಾನ್ಯವಾಗಿ ಹೆಚ್ಚಿನವರು ಸ್ಟೀಲ್ ಬಾಟಲಿಗಳನ್ನು ಬಳಕೆ ಮಾಡುತ್ತಾರೆ. ಇದರಲ್ಲಿ ತಾಮ್ರದ ನೀರಿನ ಔಷಧೀಯ ಗುಣಗಳು ಇಲ್ಲವಾದರೂ, ಹೆಚ್ಚು ಬಾಳಿಕೆ ಬರುತ್ತವೆ ಜೊತೆಗೆ ಹೆಚ್ಚಿನ ಅಪಾಯವೂ ಇಲ್ಲ.
- ಸ್ಟೀಲ್ ಬಾಟಲಿಗಳು ಪ್ಲಾಸ್ಟಿಕ್ ಬಾಟಲಿಗಳಂತೆ ನೀರನ್ನು ಕಲುಷಿತಗೊಳಿಸುವುದಿಲ್ಲ. ನೀರನ್ನು ಎಷ್ಟು ಸಮಯ ಸಂಗ್ರಹಿಸಿದರೂ, ರುಚಿ ಬದಲಾಗುವುದಿಲ್ಲ.
- ಸ್ಟೇನ್ಲೆಸ್ ಸ್ಟೀಲ್ ಸವೆತಕ್ಕೆ ಒಳಗಾಗುವುದಿಲ್ಲ, ಅದಕ್ಕಾಗಿಯೇ ಇದು ದೀರ್ಘಕಾಲದ ವರೆಗೆ ಬಾಳಿಕೆ ಬರುತ್ತದೆ.
- ಕೆಲವು ಸ್ಟೀಲ್ ಬಾಟಲಿಗಳು ಇನ್ಸುಲೇಷನ್ ಹೊಂದಿರುವುದರಿಂದ, ಅವುಗಳಲ್ಲಿರುವ ನೀರನ್ನು ಒಂದೇ ತಾಪಮಾನದಲ್ಲಿ ದೀರ್ಘಕಾಲದ ವರೆಗೆ ಸಂಗ್ರಹಿಸಬಹುದು.
- ಸ್ಟೀಲ್ ಬಾಟಲಿಗಳನ್ನು ಸಂಪೂರ್ಣವಾಗಿ ಮರುಬಳಕೆ ಮಾಡಬಹುದು, ಅದು ಪರಿಸರಕ್ಕೆ ಹಾನಿಕಾರಕವಲ್ಲ.
ಇದನ್ನೂ ಓದಿ: ಪುರುಷರೇ, ಮೂತ್ರವಿಸರ್ಜನೆಯ ಸಮಯದಲ್ಲಿ ನೋವು ಬಂದರೆ ನಿರ್ಲಕ್ಷಿಸಬೇಡಿ
ನಿಮ್ಮ ಆರೋಗ್ಯಕ್ಕೆ ಅನುಸಾರವಾಗಿ ನೀವು ಬಾಟಲಿಗಳ ಆಯ್ಕೆ ಮಾಡಬಹುದು. ತಾಮ್ರದ ನೀರು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡಿದರೆ, ಸ್ಟೀಲ್ ಬಾಟಲಿಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ನೀವು ನಿಯಮಿತವಾಗಿ ತಾಮ್ರದ ನೀರನ್ನು ಕುಡಿಯಲು ಬಯಸಿದರೆ ತಾಮ್ರದ ಬಾಟಲಿಗಳನ್ನು ಬಳಸಿ. ಆದರೆ ಸ್ವಚ್ಛತೆಯ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇನ್ನು ಸ್ಟೀಲ್ ಬಾಟಲಿಗಳನ್ನು ಸುಲಭವಾಗಿ ಬಳಸಬಹುದು ಜೊತೆಗೆ ಆರೋಗ್ಯಕ್ಕೂ ಹಾನಿ ಮಾಡುವುದಿಲ್ಲ. ಹಾಗಾಗಿ ನಿಮ್ಮ ಆರೋಗ್ಯ ಅಗತ್ಯಗಳ ಆಧಾರದ ಮೇಲೆ ಸರಿಯಾದ ಆಯ್ಕೆ ಮಾಡುವ ಮೂಲಕ ಹೈಡ್ರೇಟ್ ಆಗಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ