ಕಣ್ತುಂಬ ನಿದ್ದೆಗೆ ಇಲ್ಲಿದೆ ಸಿಂಪಲ್​ ಟಿಪ್ಸ್​

| Updated By: Pavitra Bhat Jigalemane

Updated on: Feb 09, 2022 | 3:09 PM

ಆರೋಗ್ಯ ಎಲ್ಲರಿಗೂ ಬೇಕು. ಅದಕ್ಕೆ ಸರಿಯಾದ ನಿದ್ದೆ ಬೇಕು. ಕೆಲವೊಮ್ಮೆ ದಿನನಿತ್ಯದ ಅಭ್ಯಾಸಗಳಿಂದ ನಿದ್ದೆಯ ಕೊರೆತೆಯುಂಟಾಗುತ್ತದೆ. ಹೀಗಾಗಿ ಈ ಟಿಪ್ಸ್​ಗಳನ್ನು ಫಾಲೋ ಮಾಡಿ ಕಣ್ತುಂಬ ನಿದ್ದೆ ಪಡೆಯಬಹುದು.

ಕಣ್ತುಂಬ ನಿದ್ದೆಗೆ ಇಲ್ಲಿದೆ ಸಿಂಪಲ್​ ಟಿಪ್ಸ್​
ಪ್ರಾತಿನಿಧಿಕ ಚಿತ್ರ
Follow us on

ನಿದ್ದೆ (Sleep) ಬದುಕಿನ ಅವಿಭಾಜ್ಯ ಅಂಗ. ಪ್ರತೀ ಜೀವಿಯ ಆರೋಗ್ಯ ಸುಧಾರಣೆಗೆ ನಿದ್ದೆ ಅತಿ ಮುಖ್ಯವಾಗಿದೆ. ಆರೊಗ್ಯವಂತ ವ್ಯಕ್ತಿಗೆ ಕನಿಷ್ಠ 6-8 ಗಂಟೆಗಳ ನಿದ್ದೆ ಬೇಕೇ ಬೇಕು. ಸರಿಯಾಗಿ ನಿದ್ದೆಯಾದರೆ ಮಾತ್ರ ಇಡೀ ದಿನ ಚೈತನ್ಯದಿಂದ ಇರಬಹುದು. ನಿದ್ದೆಯ ಕೊರತೆಯಾದರೆ  ಮಾನಸಿಕ ಖಿನ್ನತೆ (Depression), ಆತಂಕ (anxiety), ಸುಖಾಸುಮ್ಮನೆ ಭಯ ಕಾಡುವುದು, ತಲೆನೋವು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ  ಆತಿಯಾದ ಮೊಬೈಲ್​, ಟ್ಯಾಬ್​, ಕಂಪ್ಯೂಟರ್​ಗಳ ಬಳಕೆ, ಪಾರ್ಟಿಗಳಂತಹ ಅಭ್ಯಾಸದಿಂದ ರಾತ್ರಿ ತಡವಾಗಿ ಮಲಗುವುದು ಹಲವರ ಅಭ್ಯಾಸವಾಗಿ ಹೋಗಿದೆ. ಇನ್ನೂ ಕೆಲವರು ಹಗಲಿನಲ್ಲಿ ನಿದ್ದೆ ಮಾಡುತ್ತಾರೆ. ಇದು ಇನ್ನೂ ಅಪಾಯಕಾರಿ ಅಭ್ಯಾಸವಾಗಿದೆ. ಇದು ಕೇವಲ ನಿದ್ದೆಯ ಕೊರತೆ ಮಾತ್ರವಲ್ಲದೆ ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ. ಹೀಗಾಗಿ ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಂಡರೆ ನೆಮ್ಮದಿಯಾಗಿ ಕಣ್ತುಂಬ ನಿದ್ದೆಯನ್ನು ಪಡೆಯಬಹುದಾಗಿದೆ. ಅದಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್.

ಕೆಫಿನ್ ಅಂಶಗಳ ಪದಾರ್ಥ ಸೇವನೆ:
ಕಾಫಿ, ಟೀಯಂತಹ ಕೆಫಿನ್​ ಅಂಶಗಳು ನಿಮ್ಮ ನಿದ್ದೆಯನ್ನು ಹಾಳು ಮಾಡತ್ತದೆ. ಹೀಗಾಗಿ, ಮಲಗುವ ಒಂದೆರಡು ತಾಸು ಮೊದಲು ಟೀ ಕಾಫಿಗಳನ್ನು ಸೇವಿಸಬೇಡಿ. ಅದರ ಜೊತೆಗೆ ಇಡೀ ದಿನದಲ್ಲೂ ಹೆಚ್ಚು ಕಾಫಿ, ಟೀ ಗಳ ಸೇವನೆ ಬೇಡ.

ನಿದ್ದೆಯ ಮೊದಲು ಊಟ ಬೇಡ:
ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸ ಬೇಡ. ಊಟ ಮಾಡಿದಾಗ ಹೊಟ್ಟೆ ಭಾರವಾಗಿರುತ್ತದೆ. ಇದರಿಂದ ಸರಿಯಾದ ರೀತಿಯಲ್ಲಿ ನಿದ್ದೆ ಬರದಿರಬಹುದು. ಹೀಗಾಗಿ ಊಟವಾಗಿ 2 ಗಂಟೆಗಳ ಬಳಿಕ ನಿದ್ದೆಗೆ ಜಾರಿದರೆ ಉತ್ತಮ ನಿದ್ದೆ ಪಡೆಯಬಹುದು.

ನಿರಂತರ ನಿದ್ದೆ ಅಪಾಯಕಾರಿ:
ನೀವೇನಾದರೂ ನಿರಂತರವಾಗಿ ನಿದ್ದೆ ಮಾಡುತ್ತಿದ್ದರೆ ಅಂತಹ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಿ.  ನಿದ್ದೆಗೂ ಒಂದು ಸಮಯವಿದೆ ಅಷ್ಟೇ ಇದ್ದರೆ ಒಳಿತು. ಇಲ್ಲವಾದರೆ ನಿಮಗೆ ಅಪಾಯ ತಂದೊಡ್ಡಬಹದು.

ಮೊಬೈಲ್​ ಬಳಕೆ ಬೇಡ:
ಮಲಗುವಾಗ ಮೊಬೈಲ್​ ಅನ್ನು ಬಳಸಬೇಡಿ. ಮೊಬೈಲ್​ ಸ್ಕ್ರೀನ್​ನಿಂದ ಹೊರಬರುವ ಬೆಳಕು ಕಣ್ಣಿಗೆ ಹಾನಿಯುಂಟು ಮಾಡಿ ನಿಮ್ಮ ನಿದ್ದೆಯನ್ನು ಕಸಿಯಬಹುದು.

ಸರಿಯಾದ ವಾತಾವರಣ ನಿರ್ಮಿಸಿಕೊಳ್ಳಿ:
ನಿದ್ದೆಯನ್ನು ಮಾಡಲು ಸರಿಯಾದ ವಾತಾವರಣ ನಿರ್ಮಿಸಿಕೊಳ್ಳಿ. ಉಷ್ಣತೆಯನ್ನು ಸರಿಯಾದ ಪ್ರಮಾಣದಲ್ಲಿ  ಇರಿಸಿಕೊಳ್ಳಿ. ಚೆನ್ನಾಗಿ ಗಾಳಿ ಬರುವಂತೆ ಕಿಟಕಿಯಿರುವ ಕಡೆಗೆ ಮಲಗುವ ವ್ಯವಸ್ಥೆ ಮಾಡಿಕೊಳ್ಳಿ. ಆಗ ಉತ್ತಮ ನಿದ್ದೆ ನಿಮ್ಮದಾಗುವುದು

ಇದನ್ನೂ ಓದಿ:

Tampon Safety Tips: ಮುಟ್ಟಿನ ದಿನಗಳಲ್ಲಿ ಟಾಂಪೂನ್​ಗಳ ಬಳಕೆಯ ಮುನ್ನ ಈ ಅಂಶಗಳನ್ನು ಗಮನಿಸಿ

ದೇಹಕ್ಕೆ ಬೇಕಾದ ಪ್ರೋಟೀನ್​ ಅಂಶಗಳನ್ನು ಪೂರೈಸಲು ಡಯೆಟ್​ ಪಟ್ಟಿಯಲ್ಲಿ ಈ ಆಹಾರಗಳಿರಲಿ

Published On - 3:06 pm, Wed, 9 February 22