ಪುರುಷರಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷಿಸಬೇಡಿ

ಥೈರಾಯ್ಡ್ ಸಮಸ್ಯೆ ಪುರುಷರನ್ನೂ ಕಾಡುತ್ತದೆ ಎಂದರೆ ನಂಬುತ್ತೀರಾ? ಹೌದು, ನಾವು ಈ ರೀತಿಯ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂದು ಭಾವಿಸುತ್ತೇವೆ. ಇದು ನಮ್ಮ ತಪ್ಪು ಕಲ್ಪನೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪುರುಷರಲ್ಲಿ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಬಂಜೆತನಕ್ಕೆ ಕಾರಣವಾಗಬಹುದು ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದರ ಜೊತೆಗೆ ಅವುಗಳ ಲಕ್ಷಣಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಹಾಗಾದರೆ ಥೈರಾಯ್ಡ್ ಪುರುಷರಲ್ಲಿ ಯಾವಾಗ ಕಂಡು ಬರುತ್ತದೆ? ಅದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪುರುಷರಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷಿಸಬೇಡಿ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Jan 29, 2025 | 12:07 PM

ಸಾಮಾನ್ಯವಾಗಿ ನೀವು ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಕಂಡು ಬರುತ್ತದೆ ಎಂಬುದನ್ನು ಕೇಳಿರಬಹುದು. ಕೆಲವರ ಅನುಭವಕ್ಕೂ ಬಂದಿರಬಹುದು ಆದರೆ ಈ ಸಮಸ್ಯೆ ಪುರುಷರನ್ನೂ ಕಾಡುತ್ತದೆ ಎಂದರೆ ನಂಬುತ್ತೀರಾ? ಹೌದು, ನಾವು ಈ ರೀತಿಯ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂದು ಭಾವಿಸುತ್ತೇವೆ. ಇದು ನಮ್ಮ ತಪ್ಪು ಕಲ್ಪನೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪುರುಷರಲ್ಲಿ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಬಂಜೆತನಕ್ಕೆ ಕಾರಣವಾಗಬಹುದು ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದರ ಜೊತೆಗೆ ಅವುಗಳ ಲಕ್ಷಣಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಹಾಗಾದರೆ ಥೈರಾಯ್ಡ್ ಪುರುಷರಲ್ಲಿ ಯಾವಾಗ ಕಂಡು ಬರುತ್ತದೆ? ಅದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹೈಪರ್ ಥೈರಾಯ್ಡಿಸಮ್ ಎನ್ನುವುದು ನಿಮ್ಮ ಥೈರಾಯ್ಡ್ ಗ್ರಂಥಿಯು ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸುವ ಸ್ಥಿತಿಯಾಗಿದೆ. ಇದನ್ನು “ಹೈಪರ್‌ ಥೈರಾಯ್ಡ್” ಎಂದೂ ಕರೆಯಲಾಗುತ್ತದೆ. ಇದರ ಲಕ್ಷಣಗಳು ಸೂಕ್ಷ್ಮವಾಗಿರುತ್ತವೆ. ನಿರ್ದಿಷ್ಟವಾಗಿ ಅಲ್ಲ. ಕೆಲವು ರೋಗಲಕ್ಷಣಗಳು ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುತ್ತವೆ. ಕೆಲವು ರೋಗಲಕ್ಷಣಗಳು ಪುರುಷರಲ್ಲಿ ಮಾತ್ರ ಕಾಣಸಿಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಇದು ನಿಮ್ಮ ಹೃದಯ, ಸ್ನಾಯುಗಳು, ವೀರ್ಯದ ಗುಣಮಟ್ಟಗಳಿಗೆ ತೊಂದರೆಯನ್ನು ಉಂಟು ಮಾಡಬಹುದು.

ಪುರುಷರಲ್ಲಿ ಥೈರಾಯ್ಡ್‌ ಲಕ್ಷಣಗಳನ್ನು ಹೇಗೆ ಕಂಡು ಹಿಡಿಯಬಹುದು?

ಸಾಮಾನ್ಯವಾಗಿ ಈ ಆರೋಗ್ಯ ಸಮಸ್ಯೆಯಲ್ಲಿ ಆತಂಕ, ಕಿರಿಕಿರಿ, ತೂಕ ನಷ್ಟ, ಸ್ನಾಯು ದೌರ್ಬಲ್ಯ, ಕಣ್ಣಿನ ಕಿರಿಕಿರಿ ಮತ್ತು ಮರೆಗುಳಿತನ ಸೇರಿವೆ. ಕೆಲವೊಮ್ಮೆ ಮುಖ ಮತ್ತು ದೇಹದ ಭಾಗವು ಊದಿಕೊಂಡಿರುತ್ತದೆ. ಬೆವರು ಕಡಿಮೆಯಾಗುತ್ತದೆ, ಚರ್ಮವು ಒಣಗುತ್ತದೆ, ಕೂದಲು ಉದುರುತ್ತದೆ, ಗಂಟಲು ಊದಿಕೊಳ್ಳುತ್ತದೆ, ಧ್ವನಿಯಲ್ಲಿ ಬದಲಾವಣೆಗಳಾಗುತ್ತದೆ, ಹೈಪರ್ ಥೈರಾಯ್ಡಿಸಮ್ ಹೊಂದಿರುವ ಪುರುಷರಲ್ಲಿ ತೂಕ ಹೆಚ್ಚಾಗುತ್ತದೆ, ಈ ಕಾರಣದಿಂದಾಗಿ, ಅಧಿಕ ರಕ್ತದೊತ್ತಡ ಮತ್ತು ಬಿಪಿಯಲ್ಲಿ ಏರಿಳಿತಗಳು ಹೆಚ್ಚು ಗೋಚರಿಸುತ್ತವೆ. ಇನ್ನು ಕೆಲವರಲ್ಲಿ ಅಂಗೈಗಳಲ್ಲಿ ಜುಮುಗುಡುವಿಕೆ ಮತ್ತು ಮರಗಟ್ಟುವಿಕೆ, ಹೃದಯ ಬಡಿತ ಕಡಿಮೆಯಾಗುವುದು, ಪಾದಗಳಲ್ಲಿ ಊತ ಮತ್ತು ನಡೆಯುವಾಗ ಕಾಲುಗಳಲ್ಲಿ ಸಮನ್ವಯದ ಕೊರತೆ ಇದರ ಲಕ್ಷಣಗಳಾಗಿವೆ.

ಕೆಲವೊಮ್ಮೆ ಬೆನ್ನುಮೂಳೆ ಮತ್ತು ಸೊಂಟದಲ್ಲಿ ದೌರ್ಬಲ್ಯದಂತಹ ಸಮಸ್ಯೆಗಳು ಕಂಡುಬರುತ್ತವೆ. ಇದು ಅವರಿಗೆ ತುಂಬಾ ಅನಾನುಕೂಲತೆಯನ್ನುಂಟು ಮಾಡುತ್ತದೆ. ಹಠಾತ್ ಅತಿಯಾದ ಕೂದಲು ಉದುರುವಿಕೆ ಇದ್ದರೂ ಸಹ ಜಾಗರೂಕರಾಗಿರಿ. ಹೈಪರ್ ಥೈರಾಯ್ಡಿಸಮ್ ನಿಂದಾಗಿ, ಸ್ನಾಯುಗಳ ಸಾಂದ್ರತೆ ಕಡಿಮೆಯಾಗುತ್ತವೆ ಜೊತೆಗೆ ಮಂದವಾಗುತ್ತವೆ. ಸಾಮಾನ್ಯವಾಗಿ ಈ ಸಮಸ್ಯೆ ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ರೀತಿಯ ರೋಗಲಕ್ಷಣಗಳು ಕಂಡುಬರುತ್ತದೆಯಾದರೂ, ಪುರುಷರ ಮೇಲೆ ಮಾತ್ರ ಪರಿಣಾಮ ಬೀರುವ ಕೆಲವು ತೊಡಕುಗಳಿವೆ. ಅವುಗಳೆಂದರೆ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಕಡಿಮೆ ವೀರ್ಯ, ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಪುರುಷರಲ್ಲಿ ಹೈಪರ್ ಥೈರಾಯ್ಡಿಸಮ್‌ಗೆ ಕಾರಣವೇನು?

ಸಾಮಾನ್ಯವಾಗಿ ಗ್ರೇವ್ಸ್ ಕಾಯಿಲೆ ಎಂದು ಕರೆಯಲ್ಪಡುವ ಸ್ಥಿತಿಯು ಪುರುಷರಲ್ಲಿ ಈ ಸಮಸ್ಯೆಗೆ ಕಾರಣ ಎಂದು ಹೇಳಲಾಗುತ್ತದೆ. ವೈದ್ಯರು ಹೇಳುವ ಪ್ರಕಾರ, ಈ ವಿಭಿನ್ನ ಗ್ರೇವ್ಸ್ ಕಾಯಿಲೆ ಆರೋಗ್ಯಕರ ಥೈರಾಯ್ಡ್ ಗ್ರಂಥಿಯ ಮೇಲೆ ತಪ್ಪಾಗಿ ದಾಳಿ ಮಾಡುವುದರಿಂದ ಉಂಟಾಗುತ್ತದೆ. ಈ ಮೂಲಕ ಹೆಚ್ಚು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಲು ಕಾರಣವಾಗುತ್ತದೆ. ಹಾಗಾಗಿ ಪುರುಷರು, ಹೆಚ್ಚು ಅಯೋಡಿನ್ ಸೇವನೆ ಮತ್ತು ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ಔಷಧಿಗಳಿಂದ ದೂರವಿರುವುದು ಬಹಳ ಒಳ್ಳೆಯದು.

ಪುರುಷ ಲೈಂಗಿಕ ಆರೋಗ್ಯದ ಯಾವ ರೀತಿಯ ಪರಿಣಾಮ ಬೀರುತ್ತದೆ?

ಈ ಥೈರಾಯ್ಡ್ ಹಾರ್ಮೋನುಗಳು ಪುರುಷರ ವೃಷಣಗಳಲ್ಲಿನ ಕೆಲವು ಜೀವಕೋಶಗಳ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಹೈಪರ್ ಥೈರಾಯ್ಡಿಸಮ್ ವೀರ್ಯ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇದು ವೀರ್ಯ ಸಾಂದ್ರತೆಯನ್ನು ಕಡಿಮೆ ಮಾಡುವುದಲ್ಲದೆ, ವೀರ್ಯದ ಆಕಾರ ಅಥವಾ ರೂಪದ ಮೇಲೆ, ನಿಮಿರುವಿಕೆಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಜೊತೆಗೆ ಬಂಜೆತನಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ನಿಮ್ಮ ದೇಹ ನೀಡುವ ಸಂಕೇತಗಳನ್ನು ನಿರ್ಲಕ್ಷಿಸಬೇಡಿ, ಇದು ನಿಮ್ಮ ಆರೋಗ್ಯದ ಎಚ್ಚರಿಕೆ

ತಡೆಗಟ್ಟುವುದು ಹೇಗೆ?

ಪ್ರತಿನಿತ್ಯ ಆರೋಗ್ಯಕರ ಆಹಾರ ಸೇವನೆ ಮಾಡಬೇಕು ಜೊತೆಗೆ ತಪ್ಪದೆ ದಿನನಿತ್ಯ ವ್ಯಾಯಾಮ ಮಾಡಬೇಕು. ಏಕೆಂದರೆ ಇದು ದೇಹಕ್ಕೆ ಬಹಳ ಒಳ್ಳೆಯದು. ಅದಲ್ಲದೆ ಮಹಿಳೆಯರು ಅಥವಾ ಪುರುಷರು ವರ್ಷಕ್ಕೊಮ್ಮೆ ಥೈರಾಯ್ಡ್‌ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ