ನಿಮ್ಮ ದೇಹ ನೀಡುವ ಸಂಕೇತಗಳನ್ನು ನಿರ್ಲಕ್ಷಿಸಬೇಡಿ, ಇದು ನಿಮ್ಮ ಆರೋಗ್ಯದ ಎಚ್ಚರಿಕೆ

ದೇಹ ಪೂರ್ವಭಾವಿಯಾಗಿ ನೀಡುವ ಎಚ್ಚರಿಕೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸಮಸ್ಯೆಗಳು ಕೈ ಮೀರಿ ಹೋಗುವ ಮೊದಲು ಅವುಗಳಿಂದ ಮುಕ್ತಿ ಪಡೆದುಕೊಳ್ಳಬೇಕು. ತಜ್ಞರು ಹೇಳುವ ಪ್ರಕಾರ ನಮ್ಮ ದೇಹದ ಮಾತನ್ನು ನಾವು ಕೇಳಿ ಆರೋಗ್ಯ ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಸಮಸ್ಯೆಗಳು ಬರುವ ಮೊದಲು ದೇಹ ಯಾವ ರೀತಿಯ ಮುನ್ಸೂಚನೆಗಳನ್ನು ನೀಡುತ್ತದೆ? ಅದರ ಅರ್ಥವೇನು? ಯಾವ ರೀತಿಯಲ್ಲಿ ಪರಿಹಾರ ಪಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ದೇಹ ನೀಡುವ ಸಂಕೇತಗಳನ್ನು ನಿರ್ಲಕ್ಷಿಸಬೇಡಿ, ಇದು ನಿಮ್ಮ ಆರೋಗ್ಯದ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 28, 2025 | 4:12 PM

ಸಾಮಾನ್ಯವಾಗಿ ಕೆಲವು ಆರೋಗ್ಯ ಸಮಸ್ಯೆಗಳು ಬರುವುದಕ್ಕಿಂತ ಮೊದಲು ದೇಹವು ನಮಗೆ ಕೆಲವು ಸಂಕೇತಗಳನ್ನು ನೀಡುತ್ತದೆ. ಆದರೆ ನಾವು ಅಷ್ಟಾಗಿ ಗಮನಹರಿಸದೆಯೇ ಅವುಗಳನ್ನು ನಿರ್ಲಕ್ಷಿಸುತ್ತೇವೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ದೇಹ ನೀಡುವ ಎಚ್ಚರಿಕೆಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡು ಸಮಸ್ಯೆಗಳು ಕೈ ಮೀರಿ ಹೋಗುವ ಮೊದಲು ಅವುಗಳಿಂದ ಮುಕ್ತಿ ಪಡೆದುಕೊಳ್ಳಬೇಕು. ತಜ್ಞರು ಹೇಳುವ ಪ್ರಕಾರ ನಮ್ಮ ದೇಹದ ಮಾತನ್ನು ನಾವು ಕೇಳಿ ಆರೋಗ್ಯ ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಸಮಸ್ಯೆಗಳು ಬರುವ ಮೊದಲು ದೇಹ ಯಾವ ರೀತಿಯ ಮುನ್ಸೂಚನೆಗಳನ್ನು ನೀಡುತ್ತದೆ? ಅದರ ಅರ್ಥವೇನು? ಯಾವ ರೀತಿಯಲ್ಲಿ ಪರಿಹಾರ ಪಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಸಾಮಾನ್ಯವಾಗಿ, ನಿಮ್ಮ ಬಾಯಿ ಅಥವಾ ತುಟಿಗಳು ಬಿರುಕು ಬಿಟ್ಟಿದ್ದರೆ ನಿಮಗೆ ವಿಟಮಿನ್ ಬಿ ಕೊರತೆಯಿದೆ ಎಂದರ್ಥ. ಈ ರೀತಿ ಆಗುತ್ತಿದ್ದರೆ ಹೆಚ್ಚು ನೀರನ್ನು ಕುಡಿಯಿರಿ. ವೈದ್ಯರ ಸಲಹೆ ಪಡೆದುಕೊಂಡು ಪ್ರತಿನಿತ್ಯ ವ್ಯಾಯಾಮ ಮಾಡಿ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯುಕ್ತ ಆಹಾರವನ್ನು ಸೇವಿಸಿ. ನೋವಿರುವ ಜಾಗಕ್ಕೆ ತಣ್ಣಗಿರುವ ಅಥವಾ ಉಗುರು ಬೆಚ್ಚಗಿನ ಒತ್ತಡ ನೀಡಿ. ತುಟಿಗಳಿಗೆ ನಿಯಮಿತವಾಗಿ ತೇವಾಂಶ ನೀಡಿ. ತುಟಿಗಳನ್ನು ಸ್ಕ್ರಬ್ ಮಾಡಿ.
  • ನಿಮಗೆ ತೀವ್ರವಾದ ಬೆನ್ನು ನೋವು ಇದ್ದರೆ ನಿಮಗೆ ವಿಟಮಿನ್ ಡಿ ಕೊರತೆಯಿದೆ. ಹಾಗಾಗಿ ನೀವು ಸಾಧ್ಯವಾದಷ್ಟು ನೇರವಾಗಿ ಕುಳಿತುಕೊಳ್ಳಿ. ಬೆಳಗ್ಗಿನ ಸೂರ್ಯನ ಕಿರಣ ನಿಮ್ಮ ದೇಹಕ್ಕೆ ಬೀಳುವಂತೆ ನೋಡಿಕೊಳ್ಳಿ. ವಿಟಮಿನ್ ಬಿ ಸಮೃದ್ಧ ಆಹಾರವನ್ನು ಸೇವಿಸಿ.
  • ಮುಖದ ಮೇಲೆ ಮೊಡವೆಗಳು ಇದ್ದರೆ ನಿಮಗೆ ವಿಟಮಿನ್ ಇ ಮತ್ತು ಸತುವಿನ ಕೊರತೆಯಿದೆ ಎಂದರ್ಥ. ಹಾಗಾಗಿ ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯಿರಿ. ಖರೀದ ಆಹಾರ, ಜಂಕ್ ಫುಡ್, ಚಾಕಲೇಟ್, ಐಸ್ ಕ್ರೀಮ್ ಮುಂತಾದ ಆಹಾರಗಳನ್ನು ಕಡಿಮೆ ಸೇವಿಸಿ. ದಿನಕ್ಕೆ ಎರಡು ಬಾರಿ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ನೀವು ಬಳಸುವ ಸೋಪಿನಲ್ಲಿ ಸೌಮ್ಯ ಗುಣಗಳಿರಲಿ.
  • ನಿರಂತರವಾಗಿ ಆಯಾಸ ಮತ್ತು ನಿದ್ರೆ ಬರುತ್ತಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್ ಬಿ2, ಸಿ ಮತ್ತು ಕಬ್ಬಿಣದ ಕೊರತೆ ಇರಬಹುದು. ಸಾಮಾನ್ಯವಾಗಿ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಆಯಾಸ ಉಂಟಾಗುತ್ತದೆ. ಹಾಗಾಗಿ ದಿನವಿಡೀ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ. ಅಲ್ಲದೆ ಒತ್ತಡ ನಿಮ್ಮ ನಿದ್ರೆಗೆ ಅಡ್ಡಿಪಡಿಸುತ್ತದೆ ಜೊತೆಗೆ ಆಯಾಸವನ್ನು ಹೆಚ್ಚಿಸುತ್ತದೆ. ಆದ್ದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ, ಯೋಗ ಅಥವಾ ಯಾವುದೇ ರೀತಿಯ ವಿಶ್ರಾಂತಿ ಚಟುವಟಿಕೆಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.
  • ನಿಮ್ಮ ಕಣ್ಣಿನ ಸುತ್ತ ಕಪ್ಪು ಕಲೆಗಳು ಕಂಡು ಬರುತ್ತಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್ ಇ ಮತ್ತು ಕೆ ನ ಕೊರತೆಯಾಗಿದೆ ಎಂದರ್ಥ. ಹಾಗಾಗಿ ಕಣ್ಣುಗಳಿಗೆ ನಿಯಮಿತವಾಗಿ ವಿರಾಮ ನೀಡಿ. ದೀರ್ಘಕಾಲದ ವರೆಗೆ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆಯನ್ನು ತಪ್ಪಿಸಿ. ಜೊತೆಗೆ ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
  • ನಿಮಗೆ ಕೂದಲು ಉದುರುವಿಕೆ ಮ್ಯಾಟ್ ಬಿಳಿ ಕೂದಲಿನ ಸಮಸ್ಯೆ ಇದ್ದಲ್ಲಿ ಬಯೋಟಿನ್ ಮತ್ತು ವಿಟಮಿನ್ ಬಿ ೧೨ ಕೊರತೆಯಿದೆ ಎಂದರ್ಥ. ಹಾಗಾಗಿ ಪ್ರತಿನಿತ್ಯ ಕೂದಲನ್ನು ಸರಿಯಾಗಿ ಬಾಚಿಕೊಳ್ಳಿ. ಒದ್ದೆ ಇರುವಾಗ ಕೂದಲನ್ನು ಬಾಚಿಕೊಳ್ಳಬೇಡಿ. ಜೊತೆಗೆ ಸಾಧ್ಯವಾದಷ್ಟು ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ
ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ, ಅದು ಸುಳ್ಳು ಸುದ್ದಿ: ಸತೀಶ್ ಜಾರಕಿಹೊಳಿ
ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ, ಅದು ಸುಳ್ಳು ಸುದ್ದಿ: ಸತೀಶ್ ಜಾರಕಿಹೊಳಿ
ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಮೋದಿ ಘೋಷಣೆ
ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಮೋದಿ ಘೋಷಣೆ
ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ
ವಿಡಿಯೋ: ‘ರಾಜು ಜೇಮ್ಸ್ ಬಾಂಡ್’ಗಾಗಿ ಬಂದ ನಟಿ ರಮ್ಯಾ
ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ
ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ
ಬಸವೇಶ್ ವಿರುದ್ಧ ಎಫ್​ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ
ಬಸವೇಶ್ ವಿರುದ್ಧ ಎಫ್​ಐಎರ್ ದಾಖಲಾಗಿದೆ, ಎಲ್ಲ ವಿವರ ಅದರಲ್ಲಿವೆ: ಜ್ಯೋತಿ
ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ
ಮಹಾಕುಂಭದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ಕುಟುಂಬ
ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್
ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್
ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ
ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ