ಮಹಿಳೆಯರು ಥೈರಾಯ್ಡ್(Thyroid) ಕಾಯಿಲೆಗೆ ಒಳಗಾಗುವ ಅಪಾಯವು ಪುರುಷರಿಗಿಂತ 10 ಪಟ್ಟು ಹೆಚ್ಚು ಎಂದು ತಜ್ಞರು ಸೂಚಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಥೈರಾಯ್ಡ್ ಅಸ್ವಸ್ಥತೆಗಳು ಸ್ವಯಂ ನಿರೋಧಕ ಪ್ರಕ್ರಿಯೆಗಳಿಂದ ಉಂಟಾಗುತ್ತದೆ. ಥೈರಾಯ್ಡ್ ಗ್ರಂಥಿ, ಕತ್ತಿನ ಬುಡದಲ್ಲಿರುವ ಚಿಟ್ಟೆಯ ಆಕಾರದ ಸಣ್ಣ ಗ್ರಂಥಿ. ಮಾನವನ ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಯಾಪಚಯ ಮತ್ತು ಬೆಳವಣಿಗೆಯಂತಹ ಕಾರ್ಯಗಳನ್ನು ನಿಯಂತ್ರಿಸುವ ಹಾರ್ಮೋನುಗಳಿಗೆ ಇದು ಕಾರಣವಾಗಿದೆ. ಥೈರಾಯ್ಡ್ ಗ್ರಂಥಿಯು ಹಾರ್ಮೋನುಗಳನ್ನು ಸ್ರವಿಸುತ್ತದೆ. ಥೈರಾಕ್ಸಿನ್, ಟ್ರೆಯೋಡೋಥೈರೋನೈನ್ ಮತ್ತು ಕ್ಯಾಲ್ಸಿಟೋನಿನ್ ಇದು ಮಾನವನ ದೇಹದ ಚಯಾಪಚಯ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಈ ಹಾರ್ಮೋನುಗಳ ಅಧಿಕ ಉತ್ಪಾದನೆ ಅಥವಾ ಕಡಿಮೆ ಉತ್ಪಾದನೆ ಸಾಮಾನ್ಯವಾಗಿ 34 ಮತ್ತು 34 ರೋಗಗಳಿಗೆ ಕಾರಣವಾಗುತ್ತದೆ. ಮಹಿಳೆಯರು ಥೈರಾಯ್ಡ್ ಕಾಯಿಲೆಗೆ ಒಳಗಾಗುವ ಅಪಾಯವು ಪುರುಷರಿಗಿಂತ 10 ಪಟ್ಟು ಹೆಚ್ಚು ಎಂದು ತಜ್ಞರು ಸೂಚಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಥೈರಾಯ್ಡ್ ಅಸ್ವಸ್ಥತೆಗಳು ಸ್ವಯಂ ನಿರೋಧಕ ಪ್ರತಿಕ್ರಿಯೆಗಳಿಂದ ಉಂಟಾಗುತ್ತದೆ.
ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ತನ್ನದೇ ಆದ ಥೈರಾಯ್ಡ್ ಗ್ರಂಥಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಸೋಂಕನ್ನು ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮ ದೇಹದ ಮೇಲೆ ತಪ್ಪಾಗಿ ದಾಳಿ ಮಾಡಿದಾಗ ಸ್ವಯಂ ನಿರೋಧಕ ಕಾಯಿಲೆ ಉಂಟಾಗುತ್ತದೆ. ಪುರಿಷರಿಗಿಂತ ಮಹಿಳೆಯರಲ್ಲಿ ಸ್ವಯಂ ನಿರೋಧಕ ಪ್ರತಿಕ್ರಿಯೆಗಳು ಏಕೆ ಹೆಚ್ಚು ಸಾಮಾನ್ಯವಾಗಿದೆ ಎಂದು ಇನ್ನೂ ತಿಳಿದಿಲ್ಲ. ಆದರೆ ಬಹುಶಃ ಇದು ಅನುವಂಶಿಕ, ಪರಿಸರ ಮತ್ತು ಜೀವನಶೈಲಿಯ ಅಂಶಗಳಿಗೆ ಸಂಬಂಧಿಸಿದೆ ಎಂದು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಡಾ. ಬಿಪ್ಲಬ್ ಪಾಲ್ ಹೇಳುತ್ತಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಈ ಜೀವನಶೈಲಿ ಪಾಲಿಸಿ
ನವದೆಹಲಿಯ ಶಾಲಿಮಾರ್ ಬಾಗ್‌ನ ಪೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕರಾದ ಡಾ. ವಿನಿತಾ ತನೇಜಾ ಅವರ ಪ್ರಕಾರ, ಈಸ್ಟೊಜೆನ್ ಥೈರಾಯ್ಡ್ ಹಾರ್ಮೋನ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಥೈರಾಯ್ಡ್ ಹಾರ್ಮೋನ್‌ಗೆ ಸಂಬಂಧಿಸಿದ ಪ್ರೋಟೀನ್‌ನ್ನು ಉತ್ತೇಜಿಸುತ್ತದೆ. ಈಸ್ಟೊಜೆನ್ ಥೈರೋಗ್ಲೋಬ್ಯುಲಿನ್‌ನ್ನು ಉತ್ತೇಜಿಸುತ್ತದೆ, ಇದು ಥೈರಾಯ್ಡ್ ಹಾರ್ಮೋನ್‌ಗಳಿಗೆ ಪ್ರಮುಖ ಕಾರಣವಾಗಿದೆ. ಮಹಿಳೆಯ ಜೀವನದ ವಿವಿಧ ಹಂತಗಳಲ್ಲಿ ಈಸ್ಟೊಜೆನ್ ಮಟ್ಟವು ಏರಿಕೆಗೊಳ್ಳುತ್ತದೆ. ಋತುಬಂಧ, ಪ್ರೌಢಾವಸ್ಥೆ, ಗರ್ಭಾವಸ್ಥೆ, ಹಾಲುಣಿಸುವ ಮತ್ತು ಋತುಬಂಧದ ಪರಿಣಾಮವಾಗಿ ಥೈರಾಯ್ಡ್ ಅಸ್ವಸ್ಥತೆಗಳು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂದು ಡಾ. ತನೇಜಾ ಹೇಳುತ್ತಾರೆ.
ಹೈಪೋಥೈರಾಯ್ಡಿಸಮ್ ಹೆಚ್ಚಾಗಿ ಪ್ರೌಢಾವಸ್ಥೆ, ಗರ್ಭಾವಸ್ಥೆಯಲ್ಲಿ ಮತ್ತು ಋತುಬಂಧದಲ್ಲಿ ಕಂಡುಬರುತ್ತದೆ ಮತ್ತು ಮಹಿಳೆಯ ಜೀವನದ ಈ ಹಂತಗಳಲ್ಲಿ ನಿರ್ಧಿಷ್ಟವಾಗಿ ಪರೀಕ್ಷಿಸಬೇಕು. ಗರ್ಭಾವಸ್ಥೆಯಲ್ಲಿ ಹೈಪೋಥೈರಾಯ್ಡಿಸಮ್ ಗರ್ಭಾಶಯದಲ್ಲಿನ ಭ್ರೂಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಥೈರಾಯ್ಡ್ ಕ್ಯಾನ್ಸರ್ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ.
ಇದನ್ನೂ ಓದಿ: ಈ ಚಳಿಗಾಲದಲ್ಲಿ ರಾಗಿಯನ್ನು ನಿಮ್ಮ ಆಹಾರದ ಭಾಗವಾಗಿಸಿಕೊಳ್ಳಿ, ಅದ್ಭುತ ಪ್ರಯೋಜನಗಳ ಅರಿಯಿರಿ
ಅಯೋಡಿನ್ ಸೇವನೆಯ ಪ್ರಮಾಣ, ನಿಯಮಿತ ವ್ಯಾಯಾಮ, ಸರಿಯಾದ ನಿದ್ರೆ ಮತ್ತು ತಂಬಾಕಿನಂತಹ ಹಾನಿಕಾರಕ ಪದಾರ್ಥಗಳಿಂದ ದೂರವಿರುವುದು ಮುಂತಾದ ಜೀವನ ಶೈಲಿ ಅಂಶಗಳು ಥೈರಾಯ್ಡ್ ಗ್ರಂಥಿಯ ಸರಿಯಾದ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಸಮಸ್ಯೆಗಳನ್ನು ಸರಿಯಾದ ಆರೈಕೆ ಮತ್ತು ಔಷಧಿಗಳೊಂದಿಗೆ ನಿರ್ವಹಿಸಬಹುದು.
ಥೈರಾಯ್ಡ್ ಅಸ್ವಸ್ಥತೆಗಳ ಸಾಮಾನ್ಯ ಲಕ್ಷಣಗಳು ಆತಂಕ, ಕಿರಿಕಿರಿ, ಹೆದರಿಕೆ, ನಿದ್ರೆಯ ತೊಂದರೆ, ಸ್ನಾಯು ದೌರ್ಬಲ್ಯ, ತೂಕವನ್ನು ಕಳೆದುಕೊಳ್ಳುವುದು, ವಿಸ್ತರಿಸಿದ ಥೈರಾಯ್ಡ್ ಗ್ರಂಥಿ ಹೀಗೆ ಕೆಲವು ಲಕ್ಷಣಗಳನ್ನು ಒಳಗೊಂಡಿರುತ್ತದೆ. ಥೈರಾಯ್ಡ್ ಸಮಸ್ಯೆಯ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ ಮಹಿಳೆಯರು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ಡಾ. ಬಿಪ್ಲಬ್ ಪಾಲ್ ಸಲಹೆ ನೀಡಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:31 pm, Tue, 10 January 23