ಒತ್ತಡದ ಜೀವನ ಶೈಲಿ, ಜಡ ಮತ್ತು ಅನಾರೋಗ್ಯಕರ ಜೀವನಶೈಲಿಯನ್ನು ನೀವು ಮುಂದುವರಿಸುತ್ತಾ ಹೋದರೆ, ಅದು ನಿಮ್ಮ ಮರೆವಿನ ಕಾಯಿಲೆ ಹೆಚ್ಚಾಗಲು ಕಾರಣವಾಗಬಹುದು. ನೀವು ಮೆದುಳಿನ ಕಾಯಿಲೆಗಳಿಗೆ ಒಳಗಾಗುವಂತೆ ಮಾಡುವ ನಿಮ್ಮ ದೈನಂದಿನ 5 ಅಭ್ಯಾಸಗಳು ಇಲ್ಲಿವೆ. ಆದ್ದರಿಂದ ಈ ಅಭ್ಯಾಸಗಳನ್ನು ಆದಷ್ಟೂ ಕಡಿಮೆ ಮಾಡಿ.
ಈ ಬದಲಾದ ಜೀವನ ಶೈಲಿಯಿಂದಾಗಿ ನೀವು ಸಾಕಷ್ಟು ಒತ್ತಡದ ಜೀವನ ಶೈಲಿಯನ್ನು ನಡೆಸುತ್ತಿದ್ದರೆ ಇದು ನಿಮ್ಮ ಆರೋಗ್ಯದ ಮೇಲೆ ಅಂದರೆ ಪ್ರಮುಖವಾಗಿ ನಿಮ್ಮ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದರ ಜೊತೆಗೆ ನಿಮ್ಮ ಆಹಾರ ಪದ್ದತಿಯೂ ಕೂಡ ನಿಮ್ಮ ಮೆದುಳಿನ ಚಟುವಟಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ.ಅಲ್ಲದೆ, ಆಲ್ಕೋಹಾಲ್ ಮತ್ತು ಮಾದಕ ದ್ರವ್ಯ ಸೇವನೆಯು ಆರಂಭಿಕ ಮೆದುಳಿನ ಅಂಗಾಂಶದ ನಷ್ಟವನ್ನು ಉಂಟುಮಾಡಬಹುದು.
ಮೆದುಳಿನ ಆರೋಗ್ಯವು ಹದಗೆಡಲು ಪ್ರಾರಂಭಿಸಿದ ನಂತರದ ದಿನಗಳು ನಿಮಗೆ ಹೊರೆಯಂತೆ ತೋರುತ್ತದೆ ವಿನಃ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಬೇಕಿದೆ.
ಈ ಮೆದುಳಿನ ಕಾಯಿಲೆಗೆ ಕಾರಣವಾಗುವ ನಿಮ್ಮ ದೈನಂದಿನ ಅಭ್ಯಾಸಗಳೆಂದರೆ:
1. ಜಡ ಜೀವನಶೈಲಿ:
ನೀವು ವಯಸ್ಸಾದಂತೆ ನಿಮ್ಮ ಮೆದುಳುಗಳನ್ನು ಆರೋಗ್ಯಕರವಾಗಿ ಮತ್ತು ತೀಕ್ಷ್ಣವಾಗಿರಿಸಲು ವ್ಯಾಯಾಮವನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ ಜಡ ಜೀವನಶೈಲಿಯನ್ನು ಬಿಟ್ಟು ಪ್ರತಿ ದಿನ ಒಂದಿಷ್ಟು ಹೊತ್ತು ವ್ಯಾಯಾಮ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ.
2. ಸಾಕಷ್ಟು ನಿದ್ರೆ:
ರಾತ್ರಿಯ ನಿದ್ದೆಯ ಕೊರತೆಯು ನಿಮ್ಮನ್ನು ಹಗಲಲ್ಲಿ ಹೆಚ್ಚು ಹೊತ್ತುಗಳ ಕಾಲ ನಿದ್ರಿಸುವಂತೆ ಮಾಡುತ್ತದೆ. ಆದ್ದರಿಂದ ರಾತ್ರಿಯ ಹೊತ್ತು ಸಾಕಷ್ಟು ನಿದ್ದೆ ಮಾಡುವುದು ಅವಶ್ಯಕ. ನಿದ್ರಾಹೀನತೆಯು ನಿಮ್ಮ ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದು ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ಉಂಟಾಗಲು ಕಾರಣವಾಗುತ್ತದೆ.
3. ಡಿಹೈಡ್ರೇಶನ್:
ಸಾಮಾನ್ಯವಾಗಿ, ದೇಹಕ್ಕೆ 70% ನೀರಿನಾಂಶ ಬೇಕಾಗಿರುವುದರಿಂದ ದಿನಕ್ಕೆ 8 ಗ್ಲಾಸ್ ನೀರನ್ನು ಕುಡಿಯುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ, ಸಾಕಷ್ಟು ನೀರು ಕುಡಿಯದಿರುವುದು ಅಥವಾ ನೀರಿನಾಂಶವಿರುವ ಆಹಾರಗಳನ್ನು ಸೇವಿಸದಿರುವುದು ಡಿಹೈಡ್ರೇಶನ್ ಗೆ ಕಾರಣವಾಗುತ್ತದೆ. ಇದು ಮರೆವಿನ ಕಾಯಿಲೆಯನ್ನು ಉಂಟುಮಾಡಲು ಕಾರಣವಾಗುತ್ತದೆ.
4. ಡ್ರಗ್ ಮತ್ತು ಆಲ್ಕೋಹಾಲ್ ಬಳಕೆ:
ದೀರ್ಘಾವಧಿಯವರೆಗೆ ಆಲ್ಕೋಹಾಲ್ ಅನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಮೆದುಳಿಗೆ ಹಾನಿಯಾಗುತ್ತದೆ ಮತ್ತು ನಿಮ್ಮ ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆದಷ್ಟು ಡ್ರಗ್ ಮತ್ತು ಆಲ್ಕೋಹಾಲ್ ಸೇವನೆಯನ್ನು ಕಡಿಮೆಗೊಳಿಸುವುದು ಉತ್ತಮ.
5. ಕಳಪೆ ಆಹಾರ:
ಚೀಸ್, ಬೆಣ್ಣೆ ,ಕೇಕ್, ಮಾಂಸ ಇತ್ಯಾದಿಗಳಂತಹ ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಿ. ಬದಲಾಗಿ, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಈ ಆಹಾರವನ್ನು ಬದಲಿಸಿ.
ಮೆದುಳನ್ನು ಆರೋಗ್ಯವಾಗಿಡಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ
– ಆರೋಗ್ಯಕರ ಆಹಾರ ಪದ್ದತಿ ರೂಢಿಸಿಕೊಳ್ಳಿ.
– ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರಿ
-ಒತ್ತಡದ ಕೆಲಸದಿಂದ ವಿರಾಮ ತೆಗೆದುಕೊಳ್ಳಿ
– ನಿಮ್ಮ ಕುಟುಂಬದವರಿಗೆ ಕೆಲವೊಂದಿಷ್ಟು ಸಮಯ ಹಂಚಿಕೊಳ್ಳಿ.
– ವ್ಯಾಯಾಮ ಮತ್ತು ಯೋಗವನ್ನು ಅಭ್ಯಾಸ ಮಾಡಿ
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:45 pm, Wed, 9 November 22