Health Tips: ಕಟ್ಟಿದ ಮೂಗು ಗಂಟಲು ಕೆರೆತದಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರೆ ಇಲ್ಲಿದೆ ಕೆಲವು ಮನೆ ಮದ್ದುಗಳು

| Updated By: ಅಕ್ಷತಾ ವರ್ಕಾಡಿ

Updated on: Oct 27, 2022 | 11:40 AM

ಈ ಎಲ್ಲಾ ಸಮಸ್ಯೆಗಳಿಗೆ ಸುಲಭವಾಗಿ ಮನೆಯಲ್ಲೇ ದಿನ ಬಳಕೆಗೆ ಬಳಸುವ ಪದಾರ್ಥಗಳನ್ನು ಉಪಯೋಗಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು

Health Tips: ಕಟ್ಟಿದ ಮೂಗು ಗಂಟಲು ಕೆರೆತದಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರೆ ಇಲ್ಲಿದೆ ಕೆಲವು ಮನೆ ಮದ್ದುಗಳು
Stuffy nose
Follow us on

ದಿನ ನಿತ್ಯದ ಜೀವನದಲ್ಲಿ ಕಟ್ಟಿದ ಮೂಗು ಗಂಟಲು ಕೆರೆತದಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದೀರೇ? ಇದು ನಿಮ್ಮ ನಿತ್ಯದ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದೆಯೇ? ಈ ಎಲ್ಲಾ ಸಮಸ್ಯೆಗಳಿಗೆ ಸುಲಭವಾಗಿ ಮನೆಯಲ್ಲೇ ದಿನ ಬಳಕೆಗೆ ಬಳಸುವ ಪದಾರ್ಥಗಳನ್ನು ಉಪಯೋಗಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಮುಂಬೈನ ಪ್ರಾಣ ಹೆಲ್ತ್ ಕೇರ್ ಅಂಡ್ ಅಕಾಡೆಮಿ ಫೋರ್ ಆಯುರ್ವೇದದ,ಆಯುರ್ವೇದ ಮತ್ತು ಕರುಳಿನ ತಜ್ಞರಾದ ಡಾ.ಡಿಂಪಲ್ ಸಲಹೆಗಳನ್ನು ತಮ್ಮ ಇನ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • ಓಮು ಕಾಳು:

ಅಜ್ವೈನ ಅಥವಾ ಓಮು ಕಾಳನ್ನು ಕರಿದ ಪದಾರ್ಥಗಳಿಗೆ ಸುವಾಸನೆಗೆಂದು ಬಳಸುತ್ತಾರೆ. ಆದರೆ ಓಮು ಕಾಳಿನಲ್ಲಿ ಅಚ್ಚರಿ ಮೂಡಿಸುವ ಕೆಲವು ಔಷಧೀಯ ಗುಣಗಳೂ ಇದೆ. ಚಳಿ ವಾತಾವರಣವಿದ್ದಾಗ, ಈ ಕಾಳನ್ನು ತಿಂದರೆ ಕೆಮ್ಮು ಮತ್ತು ನೆಗಡಿ ಉಪಶಮನವಾಗುತ್ತದೆ. ಓಮನ್ನು ಅಗಿದು ಬಿಸಿ ನೀರಿನೊಂದಿಗೆ ನುಂಗಬೇಕು. ಇದು ಅಸ್ತಮಾ ಖಾಯಿಲೆಗೂ ಸೂಕ್ತ. ಬೆಲ್ಲದೊಂದಿಗೆ ಓಮು ಕಾಳನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು. * ಹೊಟ್ಟೆ ನೋವು: ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ ಮುಂತಾದ ಕಾರಣದಿಂದ ಹೊಟ್ಟೆ ನೋವು ಬಂದಾಗ ಬಿಸಿ ನೀರಿನೊಂದಿಗೆ ಓಮು ಕಾಳನ್ನು ತಿನ್ನುವುದರಿಂದ ಉಪಶಮನಗೊಳ್ಳುತ್ತದೆ.

ಇದು ಬಹುಶ ನನ್ನ ಬಾಲ್ಯದ ದಿನಗಳಿಂದಲೂ ನನ್ನ ನೆಚ್ಚಿನ ಪರಿಹಾರವಾಗಿದೆ. ಪ್ರತಿ ಬಾರಿ ನನಗೆ ಸೈನುಟಿಸ್ ಸಮಸ್ಯೆ ಅಥವಾ ಮೂಗು ಕಟ್ಟಿದಾಗ, ನನ್ನ ತಾಯಿ ಕೆಲವು ಓಮು ಕಾಳನ್ನು ಬಾಣಲೆಯಲ್ಲಿ (ಎಣ್ಣೆ ಅಥವಾ ಬೆಣ್ಣೆ ಇಲ್ಲದೆ) ಹುರಿಯುತ್ತಿದ್ದರು. ತದನಂತರ ಅವಳು ಅದನ್ನು ಬೆಚ್ಚಗಿರುವಾಗಲೇ ಒಂದು ಸಣ್ಣ ಕರ್ಚೀಫ್‌ಗೆ ಸುತ್ತಿಕೊಳ್ಳುತ್ತಿದ್ದಳು ಮತ್ತು ಅದನ್ನು ಚೀಲವಾಗಿ ತಯಾರಿಸಿ ಕೊಡುತ್ತಿದ್ದಳು. ಓಮು ಬೀಜಗಳು ಶಕ್ತಿಯುತವಾದ ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಅವು ಮೂಗಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಉರಿಯೂತದ ಮತ್ತು ಸೈನಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ, ಕೆಮ್ಮುವಿಕೆಯನ್ನು ತಡೆಯಲು ಮತ್ತು ಕಟ್ಟಿದ ಮೂಗನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.

  • ನೀಲಗಿರಿ ಎಣ್ಣೆ :

ಇದು ಮತ್ತೊಂದು ಪರಿಣಾಮಕಾರಿ ಪರಿಹಾರವಾಗಿದೆ. ಫೇಸ್ ಸ್ಟೀಮರ್‌ನಲ್ಲಿ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಸೇರಿಸಿ ಮತ್ತು ಅದನ್ನು ಸುರಕ್ಷಿತವಾಗಿ ಇರಿಸಿ. ಅಂದರೆ ಚಿಕ್ಕ ಮಕ್ಕಳಿಗೆ ಎಟಕದಂತೆ ಇಡಿ. ನಂತರ ಇದರಲ್ಲಿ ಆಳವಾಗಿ ನೀವು ಸಂಪೂರ್ಣ ಬೆವರುವವರೆಗೆ ಸ್ಟೀಮ್ ತೆಗೆದು ಕೊಳ್ಳಿ. ಇದು ಕೆಮ್ಮಿನಿಂದ ಪರಿಹಾರವನ್ನು ಪಡೆಯಲು, ಸುಲಭವಾಗಿ ಉಸಿರಾಡಲು, ಸೈನಸ್ ಗ್ರಂಥಿಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದು ಮೂಗು ಮತ್ತು ಎದೆಯ ಭಾಗಗಳ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳನ್ನು ಕೊಲ್ಲುತ್ತದೆ. ಆಸ್ತಮಾ ಮತ್ತು ಸೈನುಟಿಸ್‌ನಂತಹ ಉಸಿರಾಟದ ಸಮಸ್ಯೆಗೆ ನೀಲಗಿರಿ ಎಣ್ಣೆಯು ಅತ್ಯಂತ ಸಹಾಯಕವಾಗಿದೆ.

  • ಶುಂಠಿ, ಪುದೀನ ಚಹಾ:

ಒಂದು ಪಾತ್ರೆಯಲ್ಲಿ 1 ಗ್ಲಾಸ್ ನೀರನ್ನು ತೆಗೆದುಕೊಂಡು, ಸ್ವಲ್ಪ ಹೋಳು ಮಾಡಿದ ಶುಂಠಿ, ಪುದೀನ ಎಲೆಗಳನ್ನು ಸೇರಿಸಿ ಮತ್ತು ಅದನ್ನು ಕುದಿಸಿ. ದಾಲ್ಚಿನ್ನಿ ಕಡ್ಡಿ, ಏಲಕ್ಕಿ, ಲವಂಗ, ತುರಿದ ಶುಂಠಿ, ಮೆಣಸು ಕೂಡ ಸೇರಿಸಬಹುದು

ಶುಂಠಿಯು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು  ವಾಕರಿಕೆ, ಉಬ್ಬುವುದು, ಗ್ಯಾಸ್ಟ್ರಿಕ್ ನಿಂದ  ಪರಿಹಾರವನ್ನು ನೀಡುತ್ತದೆ.  ಶೀತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು  ಕಫ ಮತ್ತು ಕಟ್ಟಿರುವ ಮೂಗಿನಿಂದ ಉಪಶಮನ ನೀಡುತ್ತದೆ.

ಇದನ್ನು ಓದಿ: ಎಳ್ಳು ನಿಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಬಳಸುವುದ್ದರಿಂದ ಆಗುವ ಪ್ರಯೋಜನಗಳೇನು ಇಲ್ಲಿದೆ ತಜ್ಞರ ಸಲಹೆ

ಇದರೊಂದಿಗೆ ಪ್ರತಿ ದಿನ 3-4 ಕರಿಮೆಣಸುಗಳನ್ನು ಅಗಿಯಿರಿ. ಇದು ಸೀನುವಿಕೆಯ ಲಕ್ಷಣಗಳಿಗೆ ಚಿಕಿತ್ಸೆ ನೀಡಲು, ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯಮಾಡುತ್ತದೆ. ಇದು ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ ಎಂದು ಸಲಹೆ ನೀಡುತ್ತಾರೆ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

Published On - 11:19 am, Thu, 27 October 22