ಟಾನ್ಸಿಲ್​​ ನೋವಿನಿಂದ ಬಳಲುತ್ತಿದ್ದರೆ ಈ ವಿಧಾನಗಳನ್ನು ಅನುಸರಿಸಿ: ಆರೋಗ್ಯವಾಗಿರಿ

| Updated By: Pavitra Bhat Jigalemane

Updated on: Dec 31, 2021 | 3:33 PM

ಉಪ್ಪು ನೀರಿನಿಂದ ಗಂಟಲನ್ನು ಗಾರ್ಗಲ್​ ಮಾಡುವುದರಿಂದ ಟಾನ್ಸಿಲ್​ಗೆ ತಗುಲಿರುವ ಸೋಂಕನ್ನು ನಿವಾರಿಸುತ್ತದೆ, ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಗಂಟಲಿಗೆ ಹಾಕಿ ಗಾರ್ಗಲ್​ ಮಾಡಿ.

ಟಾನ್ಸಿಲ್​​ ನೋವಿನಿಂದ ಬಳಲುತ್ತಿದ್ದರೆ ಈ ವಿಧಾನಗಳನ್ನು ಅನುಸರಿಸಿ: ಆರೋಗ್ಯವಾಗಿರಿ
ಪ್ರಾತಿನಿಧಿಕ ಚಿತ್ರ
Follow us on

ಟಾನ್ಸಿಲ್​ ಸೋಂಕು  ಚಳಿಗಾಲದಲ್ಲಿ  ಕಾಣಿಸಿಕೊಳ್ಳುವ ಪ್ರಮುಖ ಸಮಸ್ಯೆಯಾಗಿದೆ. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು ಗಂಟಲು ನೋವನ್ನು ಉಂಟು ಮಾಡಿ ಹಲವು ದಿನಗಳವರೆಗೆ ಕಾಡುತ್ತದೆ. ದವಡೆಯ ಕೆಳಭಾಗದಲ್ಲಿ ಊತವನ್ನು ಉಂಟುಮಾಡಿ ಆಹಾರವನ್ನು ನುಂಗಲು ಕಷ್ಟವಾಗುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಸೇವಿಸುವ ಕೆಲವು ಅನಾರೋಗ್ಯ ಉಂಟುಮಾಡುವ ಆಹಾರಗಳು ಈ ಟಾನ್ಸಿಲ್​ ನೋವಿಗೆ ಕಾರಣವಾಗುತ್ತದೆ. ಗಂಟಲಿನ ಎರಡೂ ಭಾಗದಲ್ಲಿ ಟಾನ್ಸಿಲ್​ ಗ್ರಂಥಿಗಳು ಇರುತ್ತವೆ. ಆಹಾರದ ವ್ಯತ್ಯಾಸದಿಂದ ಇದಕ್ಕೆ ಸೋಂಕು ತಗುಲಿ ಊದಿಕೊಂಡು ನೋವುಂಟು ಮಾಡುತ್ತದೆ.  ಚಳಿಗಾಲದಲ್ಲಿ ಕಾಡುವ ಟಾನ್ಸಿಲ್​ ಸಮಸ್ಯೆಯನ್ನು ಮನೆಮದ್ದಿನಿಂದಲೇ ಕಡಿಮೆ ಮಾಡಿಕೊಳ್ಳಬಹುದಾಗಿದೆ.  ಟಾನ್ಸಿಲ್ ಗ್ರಂಥಿಗಳ ನೋವಿನಿಂದ ಜ್ವರ ಕೂಡ ಬರಬಹುದು ಹೀಗಾಗಿ ಆರೋಗ್ಯದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಉಪ್ಪು ನೀರಿನ ಗಾರ್ಗಲ್​
ಉಪ್ಪು ನೀರಿನಿಂದ ಗಂಟಲನ್ನು ಗಾರ್ಗಲ್​ ಮಾಡುವುದರಿಂದ ಟಾನ್ಸಿಲ್​ಗೆ ತಗುಲಿರುವ ಸೋಂಕನ್ನು ನಿವಾರಿಸುತ್ತದೆ, ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಗಂಟಲಿಗೆ ಹಾಕಿ ಗಾರ್ಗಲ್​ ಮಾಡಿ. ದಿನಕ್ಕೆ ಎರಡು  ಬಾರಿಯದರೂ ಈ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಟಾನ್ಸಿಲ್​ ನೋವಿನಿಂದ ಮುಕ್ತಿ ಪಡೆಯಬಹುದು. ಇದು ಚಳಿಗಾಲದಲ್ಲಿ ಕಾಡುವ ಗಂಟಲು ನೋವಿಗೂ ಪರಿಹಾರವಾಗಿದೆ.

ಹಾಲು ಮತ್ತು ಜೇನುತುಪ್ಪ
ಹಾಲು ಮತ್ತು ಜೇನುತುಪ್ಪದ ಸೇವನೆಯಿಂದ ಟಾನ್ಸಿಲ್​ ನೋವು ಕಡಿಮೆಯಾಗುತ್ತದೆ. ಪ್ರತಿದಿನ ಮಲಗುವ ಮೊದಲು ಉಗುರು ಬೆಚ್ಚಗಿನ ಹಾಲಿಗೆ ಹಾಲು ಮತ್ತು ಜೇನುತುಪ್ಪವನ್ನು ಸೇರಿಸಿ ಸೇವಿಸಿ. ಇದು ನಿಮ್ಮ ಟಾನ್ಸಿಲ್​ ಸೋಂಕನ್ನು ನಿವಾರಿಸಿ ನೋವಿನಿಂದ ಮುಕ್ತಿ ನೀಡುತ್ತದೆ.  ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಸ್ವಚ್ಛಗೊಳಿಸಿ ನೋವನ್ನು ನಿವಾರಿಸುತ್ತದೆ. ಹಾಲು ನಿಮ್ಮ ದೇಹಕ್ಕೆ ಪ್ರೋಟೀನ್​ ಅಂಶಗಳನ್ನು ಪೂರೈಸಿ ಆರೋಗ್ಯವನ್ನು ಕಾಪಾಡುತ್ತದೆ.

ಅರಿಶಿನ ಮತ್ತು ಕರಿಮೆಣಸಿನ ಕಾಳು
ಅರಿಶಿನ ಆ್ಯಂಟಿಬಯೋಟಿಕ್​ ಆಗಿದೆ. ಇದು ನಿಮ್ಮ ಗಂಟಲಿನ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಕರಿಮೆಣಸಿನ ಕಾಳು ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಅರಿಶಿನದ ಜೊತೆ ಕರಿಮೆಣಸಿನ ಕಾಳಿನ ಪುಡಿಯನ್ನು ಬಿಸಿ ಹಾಲಿಗೆ ಸೇರಿಸಿ ಸೇವಿಸಿ ಇದು ನಿಮ್ಮ ಟಾನ್ಸಿಲ್​ ಸೋಂಕನ್ನು ನಿವಾರಿಸಿ ನೋವಿನಿಂದ ಮುಕ್ತಿ ನೀಡುತ್ತದೆ. 2 ರಿಂದ 3 ದಿನಗಳವರೆಗೆ ಇದನ್ನು ಮುಂದುವರೆಸಿ.

ಇದನ್ನೂ ಓದಿ:

New Year 2022: ಫಿಟ್​ ಆಗಿರಲು ಹೊಸ ವರ್ಷದ ಆರಂಭದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

Published On - 3:30 pm, Fri, 31 December 21