New Year 2022: ಫಿಟ್​ ಆಗಿರಲು ಹೊಸ ವರ್ಷದ ಆರಂಭದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಸೂರ್ಯನ ಎಳೆ ಕಿರಣಗಳು ದೇಹಕ್ಕೆ ಬೇಕಾದ ವಿಟಮಿನ್​ ಡಿ ಅಂಶವನ್ನು ನೀಡುತ್ತದೆ. ಹೀಗಾಗಿ ಪ್ರತಿದಿನ 15 ರಿಂದ 20 ನಿಮಿಷ ಸೂರ್ಯ ಕಿರಣಗಳಿಗೆ ಒಡ್ಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ.

New Year 2022: ಫಿಟ್​ ಆಗಿರಲು ಹೊಸ ವರ್ಷದ ಆರಂಭದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 31, 2021 | 1:38 PM

ಹೊಸ ವರ್ಷ ಆರಂಭಗೊಳ್ಳುತ್ತಿದೆ. ಆದರೆ ಕೊರೋನಾ ಸಾಂಕ್ರಾಮಿಕ ಮಾತ್ರ ಬೆನ್ನುಬಿಟ್ಟಿಲ್ಲ. ಹೀಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವುದರ ಕಡೆಗೆ ಗಮನವಿರಲಿ. ಹೊಸ ವರ್ಷಕ್ಕೆ ಒಂದಷ್ಟು ಹೊಸ ಅಭ್ಯಾಸಗಳನ್ನು ರೂಡಿಸಿಕೊಂಡು ಫಿಟ್ ಆಗಿರಿ.  ದೈಹಿಕ. ಮಾನಸಿಕ ಆರೋಗ್ಯದ ಕುರಿತು ಬಗ್ಗೆ ರಾಜಿಯಾಗದೆ ಫಿಟ್​ನೆಸ್​ ಅಭ್ಯಾಸಗಳನ್ನು ಜಾರಿಗೆ ತನ್ನಿ. ಇವು ನಿಮ್ಮ ಇಡೀ ವರ್ಷವನ್ನು ಆರೋಗ್ಯಯುತವಾಗಿರಿಸುತ್ತದೆ ಮತ್ತು ಸಾಂಕ್ರಾಮಿಕ ಕಾಯಿಲೆಗಳಿಂದಲೂ ದೂರವಿಡಲು ಸಹಾಯಮಾಡುತ್ತದೆ. ಹಾಗಾದರೆ ಯಾವೆಲ್ಲಾ ಹೊಸ ಅಭ್ಯಾಸಗಳು ನಿಮ್ಮ ಹೊಸ ವರ್ಷದ ಪಟ್ಟಿಯಲ್ಲಿರಬೇಕು? ಇಲ್ಲಿದೆ ಮಾಹಿತಿ

ಆರೋಗ್ಯಯುತ ಆಹಾರ ಪದ್ಧತಿ ಹೊಸ ವರ್ಷದ ಆರಂಭದಲ್ಲೆ  ಪರಿಪೂರ್ಣ ಆಹಾರದ  ಸೇವನೆ ಅಭ್ಯಾಸ ಮಾಡಿಕೊಳ್ಳಿ. ನೆನಪಿಡಿ ನೀವು ಆರಂಭಿಸಿದ ಅಭ್ಯಾಸಕ್ಕೆ ಬದ್ಧವಾಗಿರಿ. ನಿಮ್ಮ ಆಹಾರದಲ್ಲಿ ಹಸಿರು ತರಕಾರಿ, ಹಣ್ಣುಗಳು, ಡ್ರೈ ಪ್ರೂಟ್ಸ್​ ಇರಲಿ. ಆದರೆ ಮಾಂಸ, ಚೀಸ್​ಗಳ ಬಳಕೆ ಕಡಿಮೆಯಿರಲಿ. ಉತ್ತಮ ಆಹಾರ ಪದ್ಧತಿ ನಿಮ್ಮ ಇಡೀ ವರ್ಷದಲ್ಲಿ ಪ್ರತಿದಿನ ಆರೋಗ್ಯವನ್ನು  ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ವಿಟಮಿನ್​ ಡಿ ಬಳಕೆ ಹೆಚ್ಚಿಸಿ ಸೂರ್ಯನ ಎಳೆ ಕಿರಣಗಳು ದೇಹಕ್ಕೆ ಬೇಕಾದ ವಿಟಮಿನ್​ ಡಿ ಅಂಶವನ್ನು ನೀಡುತ್ತದೆ. ಹೀಗಾಗಿ ಪ್ರತಿದಿನ 15 ರಿಂದ 20 ನಿಮಿಷ ಸೂರ್ಯ ಕಿರಣಗಳಿಗೆ ಒಡ್ಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ.

ಡಯೆಟ್​ಗೆ ಪೂರಕವಾದ ಆಹಾರ ಸೇವಿಸಿ 2022ರಲ್ಲಿ ನಿಮ್ಮ ಡಯೆಟ್​ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಿ. ನಿಯಮಿತ ಪೌಷ್ಟಿಕ ಆಹಾರ ಸೇವಿಸಿ. ಅತಿಯಾದ ಕೊಬ್ಬು, ಕ್ಯಾಲೋರಿಗಳಿರುವ ಆಹಾರ ಸೇವನೆ ಬೇಡ. ವಾತಾವರಣಕ್ಕೆ ತಕ್ಕ ಹಾಗೆ ನಿಮ್ಮ ಡಯೆಟ್​ ಅಭ್ಯಾಸಗಳನ್ನು ಬದಲಿಸಿ. ನಿಗದಿತ ಅಳತೆಯಿಲ್ಲದ ಆಹಾರ ಸೇವನೆಗೆ ಬ್ರೇಕ್​ ಹಾಕಿ.

ಏರೋಬಿಕ್ಸ್​ ಅಥವಾ ವ್ಯಾಯಾಮದ ಅಭ್ಯಾಸವಿರಲಿ ದೇಹದ ಆರೋಗ್ಯ ಹೆಚ್ಚಿಸಲು ಏರೋಬಿಕ್ಸ್​ ಅಥವಾ ವ್ಯಾಯಾಮದ ಅಭ್ಯಾಸವಿರಲಿ. ಪ್ರತಿದಿನ ಕನಿಷ್ಠ ಅರ್ಧಗಂಟೆಯಾದರೂ ವರ್ಕೌಟ್​ ಮಾಡಿ. ಇದು ನಿಮ್ಮ ದೇಹದ ಚಯಾಪಚಯಗಳನ್ನು ಸುಲಲಿತವಾಗಿಡುತ್ತದೆ.  ಜತೆಗೆ ವಾಕಿಂಗ್​ ಅಭ್ಯಾಸವಿಲ್ಲದಿದ್ರೆ ಅದನ್ನು ಮರೆಯದೆ ಆರಂಭಿಸಿ. ಇಡೀ ದೇಹದ ಆರೋಗ್ಯಕ್ಕೆ ನಡಿಗೆ ಉತ್ತಮ ಅಭ್ಯಾಸವಾಗಿದೆ

ಉತ್ತಮ ನಿದ್ದೆ ಕೆಲಸದ ಒತ್ತಡ, ಇನ್ಯಾವುದೋ ಟೆನ್ಷನ್​ ನಿಂದ ಸರಿಯಾದ ನಿದ್ದೆ ಇರುವುದಿಲ್ಲ. ಆದ್ದರಿಂದ ಹೊಸ ವರ್ಷದಿಂದ ಈ ಅಭ್ಯಾಸಕ್ಕೆ ಕಡಿವಾಣ ಹಾಕಿ.  ಪ್ರತಿದಿನ 7 ರಿಂದ 8 ಗಂಟೆಯಾದರೂ ನಿದ್ದೆ ಮಾಡಿ. ಇದು ನಿಮ್ಮ ಮಾನಸಿಕ ಅರೋಗ್ಯವನ್ನೂ ಹೆಚ್ಚಿಸುತ್ತದೆ. ಪ್ರತಿದಿನ ಪ್ರೆಶ್​ ಮೂಡ್​ ಇರುವಂತೆ ಮಾಡುತ್ತದೆ.

ಒತ್ತಡದಿಂದ ಮುಕ್ತರಾಗಿ ಒತ್ತಡ ಎಲ್ಲಿರಗೂ ಇರುತ್ತದೆ. ಆದರೆ ಅದರಿಂದ ಹೊರ ಬರಲು ಯತ್ನಿಸಿ. ನಿಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ. ಇದು ನಿಮಗೆ ಒತ್ತಡವನ್ನು ನಿವಾರಿಸುತ್ತದೆ. ಸಣ್ಣ ಸಣ್ಣ ವಿಷಯಗಳನ್ನೂ ಆನಂದಿಸಿ. ಇದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.

ಪ್ಯಾಷನ್​ಗೆ ಒತ್ತು ನೀಡಿ ನಿಮ್ಮ ಪ್ಯಾಷನ್​ಅನ್ನು ಪಾಲಿಸಿ. ಆಗ ನೀವು ಮಾಡುವ ಕೆಲಸಕ್ಕೂ ನಿಮಗೆ ನೆಮ್ಮದಿ ಇರುತ್ತದೆ. ಅರೆಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪೂರ್ಣವಲ್ಲ. ಹೀಗಾಗಿ ನಿಮ್ಮ ಕನಸಿನ ಕೆಲಸ, ನಿಮ್ ನೆಚ್ಚಿನ ಕೆಲಸಕ್ಕೆ ವಿಧೇಯರಾಗಿರಿ.

ಇದನ್ನೂ ಓದಿ:

ಬೆಳಗಿನ ಉಪಾಹಾರ ತಿನ್ನುವಾಗ ಬೊಜ್ಜು ಹೆಚ್ಚಾಗಲು ಕಾರಣವಾಗುವ ಈ ತಪ್ಪುಗಳನ್ನು ಮಾಡಬೇಡಿ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ