ಬೆಳಗಿನ ಉಪಾಹಾರ ತಿನ್ನುವಾಗ ಬೊಜ್ಜು ಹೆಚ್ಚಾಗಲು ಕಾರಣವಾಗುವ ಈ ತಪ್ಪುಗಳನ್ನು ಮಾಡಬೇಡಿ

Fitness Tips: ಬೊಜ್ಜು ಕರಗಿಸಲು, ಫಿಟ್ ಆಗಿರಲು ಎಲ್ಲರೂ ಒಂದಲ್ಲಾ ಒಂದು ವಿಧಾನದ ಮೊರೆಹೋಗುತ್ತಾರೆ. ಈ ಸಂದರ್ಭದಲ್ಲಿ ಆಹಾರ ಪದ್ಧತಿಯ ಬಗ್ಗೆ ಎಚ್ಚರಿಕೆ ಅಗತ್ಯ. ಬೆಳಗಿನ ಉಪಾಹಾರದ ಸಂದರ್ಭದಲ್ಲಿ ಅನುಸರಿಸಬೇಕಾದ ಸಲಹೆಗಳು ಇಲ್ಲಿವೆ.

ಬೆಳಗಿನ ಉಪಾಹಾರ ತಿನ್ನುವಾಗ ಬೊಜ್ಜು ಹೆಚ್ಚಾಗಲು ಕಾರಣವಾಗುವ ಈ ತಪ್ಪುಗಳನ್ನು ಮಾಡಬೇಡಿ
ಪ್ರಾತಿನಿಧಿಕ ಚಿತ್ರ
Follow us
| Updated By: shivaprasad.hs

Updated on: Dec 31, 2021 | 7:20 AM

ಸಾಮಾನ್ಯವಾಗಿ ಪ್ರತಿಯೊಬ್ಬರೂ ಫಿಟ್ ಆಗಿರಲು ತಮ್ಮದೇ ಆದ ಕ್ರಮಗಳನ್ನು ಅನುಸರಿಸುತ್ತಾರೆ. ದೈನಂದಿನ ಜೀವನ ಶೈಲಿಗೆ ಸೂಕ್ತವಾಗುವಂತೆ ಆಹಾರ ಪದ್ಧತಿ, ಜಿಮ್, ವರ್ಕೌಟ್ ಸೇರಿದಂತೆ ಹಲವು ವಿಧಾನಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಫಿಟ್ ಆಗಿರುವುದು ಬಹಳ ಮುಖ್ಯ. ಕಾರಣ, ದಿನವಿಡೀ ಕೆಲಸ ಮಾಡಲು, ಚಟುವಟಿಕೆಯಿಂದಿರಲು ಇದು ಬಹಳ ಅತ್ಯಗತ್ಯ. ಆದರೆ ಕೆಲವೊಮ್ಮೆ ನಮಗೆ ತಿಳಿಯದೇ ನಾವು ತಪ್ಪು ಮಾಡುತ್ತಿರುತ್ತೇವೆ. ಇದು ನಮ್ಮ ಫಿಟ್​ನೆಸ್​ಗೆ ಸಮಸ್ಯೆಯಾಗುತ್ತದೆ. ಅಲ್ಲದೇ ತೂಕದ ಬಗ್ಗೆ ಕಾಳಜಿ ವಹಿಸುವವರಿಗೆ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಆಹಾರ ಪದ್ಧತಿಯಲ್ಲಿನ ಸಣ್ಣ ವ್ಯತ್ಯಾಸ ತಕ್ಕ ಪರಿಣಾಮಗಳು ಲಭ್ಯವಾಗದಂತೆ ತಡೆಯುತ್ತವೆ. ಅದರಲ್ಲೂ ಬೆಳಗಿನ ಉಪಾಹಾರ ದೈನಂದಿನ ಚಟುವಟಿಕೆಗೆ ಅಗತ್ಯವಾಗಿ ಬೇಕು. ಆದರೆ ಅದರಲ್ಲಿ ಮಾಡುವ ಸಣ್ಣ ತಪ್ಪುಗಳೂ ನಿಮ್ಮ ತೂಕ ಇಳಿಸಿಕೊಳ್ಳುವ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಬಹುದು. ಬೆಳಗಿನ ತಿಂಡಿಯಲ್ಲಿ ಯಾವೆಲ್ಲಾ ತಪ್ಪುಗಳಾಗುತ್ತವೆ? ಈ ಕುರಿತ ಮಾಹಿತಿ ಇಲ್ಲಿದೆ.

ಪ್ರಯಾಣದಲ್ಲಿರುವಾಗ ತಿನ್ನುವುದು: ಕೆಲವೊಮ್ಮೆ ಬೆಳಿಗ್ಗೆ ನಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದಾಗಿ ನಾವು ಕಡಿಮೆ ತಿನ್ನುತ್ತೇವೆ ಅಥವಾ ಅವಸರದಲ್ಲಿ ತಿನ್ನುತ್ತೇವೆ. ಇದು ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ಉಪಹಾರವನ್ನು ನಿಧಾನವಾಗಿ ತಿನ್ನಿ ಮತ್ತು ಚೆನ್ನಾಗಿ ಅಗಿದು ತಿನ್ನಿ.

ಹೆಚ್ಚು ಸಕ್ಕರೆ ಅಂಶವಿರುವ ಪದಾರ್ಥ ತಿನ್ನುವುದು: ಕೆಲವರು ಬೆಳಗಿನ ತಿಂಡಿ ತಿನ್ನುತ್ತಾರೆ. ಹೊಟ್ಟೆ ತುಂಬಿಲ್ಲ ಎಂದೆನ್ನಿಸಿದರೆ ಪ್ಯಾಕ್ಡ್ ಆಹಾರ ಅಥವಾ ಪ್ಯಾಕ್ಡ್ ಜ್ಯೂಸ್ ಮೊರೆ ಹೋಗುತ್ತಾರೆ. ಪ್ಯಾಕ್ ಮಾಡಿದ ಜ್ಯೂಸ್​ಗಳಲ್ಲಿ ಸಕ್ಕರೆಯ ಅಂಶ ಹೆಚ್ಚಿರುತ್ತದೆ ಎಂಬುದನ್ನು ಗಮನಿಸಿ. ಅವು ಬೊಜ್ಜಿನ ಅಪಾಯ ಹೆಚ್ಚಿಸುತ್ತವೆ.

ಖಾಲಿ ಕ್ಯಾಲೋರಿಗಳನ್ನು ತಿನ್ನುವುದು: ಮೊದಲನೆಯದಾಗಿ, ಖಾಲಿ ಕ್ಯಾಲೋರಿಗಳು ಯಾವುವು, ಹಾಗಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲಾ ಕ್ಯಾಲೊರಿಗಳು ದೇಹಕ್ಕೆ ಶಕ್ತಿ ನೀಡಲು ಬಳಕೆಯಾಗುತ್ತವೆ ಅಥವಾ ಕೊಬ್ಬಾಗಿ ಪರಿವರ್ತನೆಯಾಗುತ್ತವೆ. ಊಟದಲ್ಲಿ ಯಾವುದೇ ಪೋಷಕಾಂಶಗಳಿಲ್ಲದಿದ್ದರೆ ಅಥವಾ ಸಕ್ಕರೆ ಮತ್ತು ಕ್ಯಾಲೊರಿಗಳ ಪ್ರಮಾಣವು ಆಹಾರದಲ್ಲಿನ ಪೋಷಕಾಂಶಗಳಿಗಿಂತ ಹೆಚ್ಚಿದ್ದರೆ ಅದನ್ನು ಖಾಲಿ ಕ್ಯಾಲೋರಿಗಳು ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉಪಹಾರ ಮಾಡುವಾಗ ನಾವು ಕೇವಲ ಖಾಲಿ ಕ್ಯಾಲೋರಿಗಳೊಂದಿಗೆ ಊಟ ಮಾಡುತ್ತಿಲ್ಲ ಎಂಬುದನ್ನು ಗಮನಿಸಬೇಕು.

(ವಿ.ಸೂ.:ಡಯಟ್ ಕುರಿತು ಕಠಿಣ ಕ್ರಮಗಳನ್ನು ಅನುಸರಿಸುವ ಮುನ್ನ ತಜ್ಞರ ಸಲಹೆ ಪಡೆದು ಅವುಗಳನ್ನು ಪಾಲಿಸಿ)

ಇದನ್ನೂ ಓದಿ:

Women Health: ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಲು ಮಹಿಳೆಯರಿಗೆ ಕೆಲವು ಸಲಹೆಗಳು

Women Health: ಯುವತಿಯರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​; ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ವಿಧಾನಗಳು

ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು