ಟಾನ್ಸಿಲ್​​ ನೋವಿನಿಂದ ಬಳಲುತ್ತಿದ್ದರೆ ಈ ವಿಧಾನಗಳನ್ನು ಅನುಸರಿಸಿ: ಆರೋಗ್ಯವಾಗಿರಿ

ಉಪ್ಪು ನೀರಿನಿಂದ ಗಂಟಲನ್ನು ಗಾರ್ಗಲ್​ ಮಾಡುವುದರಿಂದ ಟಾನ್ಸಿಲ್​ಗೆ ತಗುಲಿರುವ ಸೋಂಕನ್ನು ನಿವಾರಿಸುತ್ತದೆ, ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಗಂಟಲಿಗೆ ಹಾಕಿ ಗಾರ್ಗಲ್​ ಮಾಡಿ.

ಟಾನ್ಸಿಲ್​​ ನೋವಿನಿಂದ ಬಳಲುತ್ತಿದ್ದರೆ ಈ ವಿಧಾನಗಳನ್ನು ಅನುಸರಿಸಿ: ಆರೋಗ್ಯವಾಗಿರಿ
ಪ್ರಾತಿನಿಧಿಕ ಚಿತ್ರ
Follow us
| Updated By: Pavitra Bhat Jigalemane

Updated on:Dec 31, 2021 | 3:33 PM

ಟಾನ್ಸಿಲ್​ ಸೋಂಕು  ಚಳಿಗಾಲದಲ್ಲಿ  ಕಾಣಿಸಿಕೊಳ್ಳುವ ಪ್ರಮುಖ ಸಮಸ್ಯೆಯಾಗಿದೆ. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು ಗಂಟಲು ನೋವನ್ನು ಉಂಟು ಮಾಡಿ ಹಲವು ದಿನಗಳವರೆಗೆ ಕಾಡುತ್ತದೆ. ದವಡೆಯ ಕೆಳಭಾಗದಲ್ಲಿ ಊತವನ್ನು ಉಂಟುಮಾಡಿ ಆಹಾರವನ್ನು ನುಂಗಲು ಕಷ್ಟವಾಗುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಸೇವಿಸುವ ಕೆಲವು ಅನಾರೋಗ್ಯ ಉಂಟುಮಾಡುವ ಆಹಾರಗಳು ಈ ಟಾನ್ಸಿಲ್​ ನೋವಿಗೆ ಕಾರಣವಾಗುತ್ತದೆ. ಗಂಟಲಿನ ಎರಡೂ ಭಾಗದಲ್ಲಿ ಟಾನ್ಸಿಲ್​ ಗ್ರಂಥಿಗಳು ಇರುತ್ತವೆ. ಆಹಾರದ ವ್ಯತ್ಯಾಸದಿಂದ ಇದಕ್ಕೆ ಸೋಂಕು ತಗುಲಿ ಊದಿಕೊಂಡು ನೋವುಂಟು ಮಾಡುತ್ತದೆ.  ಚಳಿಗಾಲದಲ್ಲಿ ಕಾಡುವ ಟಾನ್ಸಿಲ್​ ಸಮಸ್ಯೆಯನ್ನು ಮನೆಮದ್ದಿನಿಂದಲೇ ಕಡಿಮೆ ಮಾಡಿಕೊಳ್ಳಬಹುದಾಗಿದೆ.  ಟಾನ್ಸಿಲ್ ಗ್ರಂಥಿಗಳ ನೋವಿನಿಂದ ಜ್ವರ ಕೂಡ ಬರಬಹುದು ಹೀಗಾಗಿ ಆರೋಗ್ಯದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಉಪ್ಪು ನೀರಿನ ಗಾರ್ಗಲ್​ ಉಪ್ಪು ನೀರಿನಿಂದ ಗಂಟಲನ್ನು ಗಾರ್ಗಲ್​ ಮಾಡುವುದರಿಂದ ಟಾನ್ಸಿಲ್​ಗೆ ತಗುಲಿರುವ ಸೋಂಕನ್ನು ನಿವಾರಿಸುತ್ತದೆ, ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಗಂಟಲಿಗೆ ಹಾಕಿ ಗಾರ್ಗಲ್​ ಮಾಡಿ. ದಿನಕ್ಕೆ ಎರಡು  ಬಾರಿಯದರೂ ಈ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಟಾನ್ಸಿಲ್​ ನೋವಿನಿಂದ ಮುಕ್ತಿ ಪಡೆಯಬಹುದು. ಇದು ಚಳಿಗಾಲದಲ್ಲಿ ಕಾಡುವ ಗಂಟಲು ನೋವಿಗೂ ಪರಿಹಾರವಾಗಿದೆ.

ಹಾಲು ಮತ್ತು ಜೇನುತುಪ್ಪ ಹಾಲು ಮತ್ತು ಜೇನುತುಪ್ಪದ ಸೇವನೆಯಿಂದ ಟಾನ್ಸಿಲ್​ ನೋವು ಕಡಿಮೆಯಾಗುತ್ತದೆ. ಪ್ರತಿದಿನ ಮಲಗುವ ಮೊದಲು ಉಗುರು ಬೆಚ್ಚಗಿನ ಹಾಲಿಗೆ ಹಾಲು ಮತ್ತು ಜೇನುತುಪ್ಪವನ್ನು ಸೇರಿಸಿ ಸೇವಿಸಿ. ಇದು ನಿಮ್ಮ ಟಾನ್ಸಿಲ್​ ಸೋಂಕನ್ನು ನಿವಾರಿಸಿ ನೋವಿನಿಂದ ಮುಕ್ತಿ ನೀಡುತ್ತದೆ.  ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಸ್ವಚ್ಛಗೊಳಿಸಿ ನೋವನ್ನು ನಿವಾರಿಸುತ್ತದೆ. ಹಾಲು ನಿಮ್ಮ ದೇಹಕ್ಕೆ ಪ್ರೋಟೀನ್​ ಅಂಶಗಳನ್ನು ಪೂರೈಸಿ ಆರೋಗ್ಯವನ್ನು ಕಾಪಾಡುತ್ತದೆ.

ಅರಿಶಿನ ಮತ್ತು ಕರಿಮೆಣಸಿನ ಕಾಳು ಅರಿಶಿನ ಆ್ಯಂಟಿಬಯೋಟಿಕ್​ ಆಗಿದೆ. ಇದು ನಿಮ್ಮ ಗಂಟಲಿನ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಕರಿಮೆಣಸಿನ ಕಾಳು ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಅರಿಶಿನದ ಜೊತೆ ಕರಿಮೆಣಸಿನ ಕಾಳಿನ ಪುಡಿಯನ್ನು ಬಿಸಿ ಹಾಲಿಗೆ ಸೇರಿಸಿ ಸೇವಿಸಿ ಇದು ನಿಮ್ಮ ಟಾನ್ಸಿಲ್​ ಸೋಂಕನ್ನು ನಿವಾರಿಸಿ ನೋವಿನಿಂದ ಮುಕ್ತಿ ನೀಡುತ್ತದೆ. 2 ರಿಂದ 3 ದಿನಗಳವರೆಗೆ ಇದನ್ನು ಮುಂದುವರೆಸಿ.

ಇದನ್ನೂ ಓದಿ:

New Year 2022: ಫಿಟ್​ ಆಗಿರಲು ಹೊಸ ವರ್ಷದ ಆರಂಭದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

Published On - 3:30 pm, Fri, 31 December 21

ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ