ಇತ್ತೀಚಿನ ದಿನಗಳಲ್ಲಿ ನಮ್ಮ ಅನಾರೋಗ್ಯಕರ ಜೀವನಶೈಲಿಯಿಂದಾಗಿ ಸಾಕಷ್ಟು ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಎಲ್ಲಕ್ಕಿಂತಲೂ ಆರೋಗ್ಯವೇ ಮುಖ್ಯವಾದ್ದರಿಂದ, ನಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಲು ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಈಗಿನಿಂದಲೇ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಆದರೆ ನಾವು ದೇಹವನ್ನು ರೋಗಗಳಿಂದ ದೂರವಿಟ್ಟುಕೊಳ್ಳಲು ವೈದ್ಯರ ಮೊರೆ ಹೋಗುವುದರ ಜೊತೆಗೆ ಹಿತ್ತಲಲ್ಲಿರುವ ಗಿಡಗಳಿಂದ ಮದ್ದು ಮಾಡಬೇಕು. ಏಕೆಂದರೆ ಔಷಧೀಯ ಗುಣವಿರುವ ಗಿಡಗಳು ನಮ್ಮನ್ನು ಆರೋಗ್ಯವಾಗಿಡುತ್ತದೆ. ಅವುಗಳಲ್ಲಿ ತುಳಸಿ ಅಗ್ರಸ್ಥಾನದಲ್ಲಿರುತ್ತದೆ. ಏಕೆಂದರೆ ತುಳಸಿಯಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿವೆ. ಹಾಗಾಗಿಯೇ ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ಜೊತೆಗೆ ತುಳಸಿ ಸಸ್ಯವನ್ನು ಆಯುರ್ವೇದದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಜೊತೆಗೆ ತುಳಸಿ ಎಲೆಗಳು ಎಲ್ಲಾ ಋತುಗಳಲ್ಲಿಯೂ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇದರ ಸೇವನೆ ಹೇಗೆ ಮಾಡಬೇಕು? ಯಾವ ರೋಗಗಳಿಗೆ ಒಳ್ಳೆಯದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಚಳಿಗಾಲದ ತಂಪಾದ ವಾತಾವರಣ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ಈ ಋತುವಿನಲ್ಲಿ ಶೀತ, ಕೆಮ್ಮು, ರೋಗನಿರೋಧಕ ಶಕ್ತಿಯಂತಹ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ, ತುಳಸಿ ಎಲೆಗಳನ್ನು ದಿನನಿತ್ಯ ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ಆರೋಗ್ಯಕ್ಕೂ ವರದಾನ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ತುಳಸಿ ಎಲೆಗಳನ್ನು ಪ್ರತಿದಿನ ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅದರ ಜೊತೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ತುಳಸಿಯನ್ನು ಸೇವನೆ ಮಾಡುವುದು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಚಳಿಗಾಲದಲ್ಲಿ ಪ್ರತಿದಿನ ನಾಲ್ಕು ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಆರೋಗ್ಯಕ್ಕೆ ಒಂದು ರೀತಿಯ ವರದಾನವಿದ್ದಂತೆ. ಹಾಗಾದರೆ ಈ ಎಲೆಗಳನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದರ ಬಗೆಗಿನ ವಿವರ ಇಲ್ಲಿದೆ.
ಪ್ರತಿದಿನ ಬೆಳಿಗ್ಗೆ, ಖಾಲಿ ಹೊಟ್ಟೆಯಲ್ಲಿ ನಾಲ್ಕು ತಾಜಾ ತುಳಸಿ ಎಲೆಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಕುದಿಸಿ ಚಹಾ ಅಥವಾ ಕಷಾಯದ ರೀತಿಯಲ್ಲಿ ಕುಡಿಯಿರಿ. ಜೊತೆಗೆ ತುಳಸಿಯನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವನೆ ಮಾಡಿದರೆ, ಅದರ ಪ್ರಯೋಜನಗಳು ಹೆಚ್ಚಾಗುತ್ತವೆ. ಇದರ ಜೊತೆಗೆ ತುಳಸಿ ಎಲೆಗಳನ್ನು ನೇರವಾಗಿ ಜಗಿದು ತಿನ್ನಬಹುದು.
(ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.)
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ