ವೈದ್ಯರನ್ನೇ ಬೆಚ್ಚಿ ಬೀಳಿಸಿತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಸ್ಕ್ಯಾನಿಂಗ್​ ರಿಪೋರ್ಟ್

|

Updated on: Mar 12, 2023 | 12:32 PM

ವ್ಯಕ್ತಿಯೊಬ್ಬ ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇತನ ಚಡಪಡಿಕೆ ಕಂಡು ಸ್ಕ್ಯಾನಿಂಗ್​ ಮಾಡಿಸಲಾಗಿದೆ. ಆದರೆ ಕೆಲವೇ ಸಮಯಗಳಲ್ಲಿ ಸ್ಕ್ಯಾನಿಂಗ್​ ರಿಪೋರ್ಟ್​ ಕಂಡು ವೈದರೇ ಬೆಚ್ಚಿ ಬಿದ್ದಿದ್ದಾರೆ.

ವೈದ್ಯರನ್ನೇ ಬೆಚ್ಚಿ ಬೀಳಿಸಿತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಸ್ಕ್ಯಾನಿಂಗ್​ ರಿಪೋರ್ಟ್
ಹೊಟ್ಟೆಯೊಳಗೆ ವೋಡ್ಕಾ ಬಾಟಲಿ ಪತ್ತೆ
Image Credit source: Frontiers
Follow us on

ಸಾಮಾನ್ಯವಾಗಿ ಹೊಟ್ಟೆ ನೋವು ಎಂದಾಕ್ಷಣ ಫುಡ್​​ ಪಾಯಿಸನ್​ ಆಗಿರಬಹುದು, ಎರಡು ದಿನದಲ್ಲಿ ಸರಿಯಾಗುತ್ತದೆ ಎಂದು ಕಡೆಗಣಿಸುವವರೇ ಹೆಚ್ಚು. ಆದರೆ ಇಲ್ಲೊಬ್ಬ ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇತನ ಚಡಪಡಿಕೆ ಕಂಡು ಸ್ಕ್ಯಾನಿಂಗ್​ ಮಾಡಿಸಲಾಗಿದೆ. ಆದರೆ ಕೆಲವೇ ಸಮಯಗಳಲ್ಲಿ ಸ್ಕ್ಯಾನಿಂಗ್​ ರಿಪೋರ್ಟ್​ ಕಂಡು ವೈದರೇ ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ಆತನ ಸ್ಕ್ಯಾನಿಂಗ್​ ರಿಪೋರ್ಟ್ ತಿಳಿದರೆ ನೀವೂ ಶಾಕ್​​ ಆಗೋದಂತೂ ಖಂಡಿತಾ. ಇಲ್ಲಿದೆ ನೋಡಿ ಕಂಪ್ಲೀಟ್​​ ಸ್ಟೋರಿ.

ಏನಿದು ಘಟನೆ?

ಐದು ದಿನಗಳ ಹಿಂದೆ ನೇಪಾಳದ ಆಸ್ಪತ್ರೆವೊಂದರಲ್ಲಿ 26 ವರ್ಷದ ನೂರ್ಸಾದ್‌ ಎಂಬ ಹೆಸರಿನ ಯುವಕನೊಬ್ಬನನ್ನು ದಾಖಲಿಸಲಾಗಿತ್ತು. ಈತ ವಿಷರೀತ ಹೊಟ್ಟೆನೋವಿನಿಂದ ಚಡಪಡಿಸುತ್ತಿದ್ದ, ತಕ್ಷಣ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ಆತನ ಹೊಟ್ಟೆಯೊಳಗಡೆ ವೋಡ್ಕಾ ಬಾಟಲಿ ಇರುವುದು ಪತ್ತೆಯಾಗಿದೆ. ಎರಡೂವರೆ ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಬಾಟಲಿಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ವೋಡ್ಕಾ ಬಾಟಲಿ ಆತನ ಕರುಳಿಗೆ ಹಾನಿಯುಂಟು ಮಾಡಿದ್ದು, ಇದರಿಂದಾಗಿ ಆತ ಸಹಿಸಿಕೊಳ್ಳಲಾಗದಷ್ಟು ಹೊಟ್ಟೆ ನೋವನ್ನು ಅನುಭವಿಸಿದ್ದ. ಜೊತೆಗೆ ಮಲ ಸೋರಿಕೆ ಮತ್ತು ಕರುಳಿನ ಊತಕ್ಕೂ ಕಾರಣವಾಗಿದೆ. ಆದರೆ ಶಸ್ತ್ರಚಿಕಿತ್ಸೆ ನಂತರ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ: ನಿಮ್ಮ ಚರ್ಮದ ಮೇಲೆ ಇಂತಹ ಲಕ್ಷಣ ಕಂಡುಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ

ವೋಡ್ಕಾ ಬಾಟಲಿ ಹೊಟ್ಟೆಯೊಳಗೆ ಹೇಗೆ?

ವೋಡ್ಕಾ ಬಾಟಲಿ ಹೊಟ್ಟೆಯೊಳಗೆ ಹೇಗೆ ಬಂತು ಎಂಬ ಪ್ರಶ್ನೆ ಹುಟ್ಟುವುದು ಸಹಜ. ಆದರೆ ಇದಕ್ಕೆ ಕಾರಣನೂ ಇದೆ. ಹೌದು ಕೆಲವು ದಿನಗಳ ಹಿಂದೆಯಷ್ಟೇ ನೂರ್ಸಾದ್‌ ತನ್ನ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದಾನೆ. ಬಲವಂತವಾಗಿ ನೂರ್ಸಾದ್​​ಗೆ ಕುಡಿಸಲಾಗಿದೆ. ನಂತರ ಬಾಟಲಿಯಲ್ಲಿ ಗುದದ್ವಾರದ ಮೂಲಕ ಹೊಟ್ಟೆಗೆ ತಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತನೊಬ್ಬನನ್ನು ಈಗಾಗಲೇ ಬಂಧಿಸಲಾಗಿದೆ. ಜೊತೆಗೆ ಅನೇಕ ಸಹಚರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನೂರ್ಸಾದ್‌ನ ಇತರ ಕೆಲ ಸ್ನೇಹಿತರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ರೌತಹತ್‌ನ ಪೊಲೀಸ್ ವರಿಷ್ಠಾಧಿಕಾರಿ ಬೀರ್ ಬಹದ್ದೂರ್ ಬುಧಾ ಮಗರ್ ಹೇಳಿಕೆ ನೀಡಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:28 pm, Sun, 12 March 23