Heart Problem: ಹಾಲು ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರುತ್ತಾ? ಇಲ್ಲಿದೆ ಮಾಹಿತಿ
ಹಾಲು(Milk) ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಕಾಫಿ, ಟೀ, ಕಷಾಯ ಏನೇ ಇರಲಿ ಹಾಲಿಲ್ಲದೇ ಆಗುತ್ತಾ, ಅಷ್ಟೇ ಅಲ್ಲದೆ ಮಕ್ಕಳ ಬೆಳವಣಿಗೆಗಂತೂ ಹಾಲು ಮುಖ್ಯ ಎಂದು ಪ್ರತಿ ದಿನವೂ ಎರಡು ಹೊತ್ತಾದರೂ ಹಾರ್ಲಿಕ್ಸ್, ಬೋರ್ನ್ವೀಟಾ, ಬೂಸ್ಟ್ ಹೀಗೆ ಯಾವುದೇ ಒಂದು ಪುಡಿ ಹಾಲಿನೊಂದಿಗೆ ಬೆರೆಸಿ ಮಕ್ಕಳಿಗೆ ಕೊಡುತ್ತೀರಿ.
ಹಾಲು(Milk) ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಕಾಫಿ, ಟೀ, ಕಷಾಯ ಏನೇ ಇರಲಿ ಹಾಲಿಲ್ಲದೇ ಆಗುತ್ತಾ, ಅಷ್ಟೇ ಅಲ್ಲದೆ ಮಕ್ಕಳ ಬೆಳವಣಿಗೆಗಂತೂ ಹಾಲು ಮುಖ್ಯ ಎಂದು ಪ್ರತಿ ದಿನವೂ ಎರಡು ಹೊತ್ತಾದರೂ ಹಾರ್ಲಿಕ್ಸ್, ಬೋರ್ನ್ವೀಟಾ, ಬೂಸ್ಟ್ ಹೀಗೆ ಯಾವುದೇ ಒಂದು ಪುಡಿ ಹಾಲಿನೊಂದಿಗೆ ಬೆರೆಸಿ ಮಕ್ಕಳಿಗೆ ಕೊಡುತ್ತೀರಿ. ಆದರೆ ಈ ಹಾಲಿನಿಂದ ಹೃದ್ರೋಗದ ಅಪಾಯವಿದೆ ಎಂದು ವಿಜ್ಞಾನಿಯೊಬ್ಬರು ಹೇಳಿರುವುದು ಇದೀಗ ಜನರಲ್ಲಿ ಆತಂಕ ಮನೆ ಮಾಡಿದೆ.
ಹೆಚ್ಚಿನ ಮಂದಿ ಹಾಲು(Milk) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸುತ್ತಾರೆ. ಬಹುತೇಕ ತಾಯಂದಿರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಒಂದು ಲೋಟ ಹಾಲು ನೀಡಿ ಕಳುಹಿಸುತ್ತಾರೆ. ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಪಡೆಯಬಹುದು ಎಂದು ನಂಬಲಾಗಿದೆ. ಆದರೆ ಆರೋಗ್ಯವಾಗಿರಲು ನೀವು ಕುಡಿಯುವ ಹಾಲು ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಹಾಲು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಬ್ರಿಸ್ಟಲ್ ವಿಶ್ವವಿದ್ಯಾನಿಲಯದಿಂದ ಮಾಲಿಕ್ಯುಲರ್ ಬಯಾಲಜಿಯಲ್ಲಿ ಪಿಎಚ್‌ಡಿ ಮಾಡಿರುವ ಡಾ.ಜಸ್ಟಿನ್ ಬಟ್ಲರ್ ಇದನ್ನು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಹಾಲು ಸೇರಿದಂತೆ ಎಲ್ಲಾ ಡೈರಿ ಉತ್ಪನ್ನಗಳನ್ನು ಸೇವಿಸುವುದು ಹೃದ್ರೋಗಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಹೃದ್ರೋಗದಿಂದ ದೂರವಿರಲು ಡೈರಿ ಉತ್ಪನ್ನಗಳನ್ನು ತ್ಯಜಿಸಿ ಸಸ್ಯಾಹಾರಿಗಳಾಗುವುದು ಉತ್ತಮ ಎಂದು ಡಾ.ಬಟ್ಲರ್ ಹೇಳಿದ್ದಾರೆ.
ಸಂಶೋಧನೆಯ ಪ್ರಕಾರ, ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳು ಸಸ್ಯಾಹಾರಿಗಳಲ್ಲಿ ಬಹಳ ಕಡಿಮೆ ಎಂಬುದು ಕಂಡುಬಂದಿದೆ. ಅಷ್ಟೇ ಅಲ್ಲ, ಈ ಜನರಲ್ಲಿ ಹೃದ್ರೋಗದ ಅಪಾಯವೂ ತುಂಬಾ ಕಡಿಮೆ ಇದೆ.
ಮತ್ತಷ್ಟು ಓದಿ: Weight Loss: ಹಾಲು ಕುಡಿಯುವ ವಿಧಾನವನ್ನು ಸ್ವಲ್ಪ ಬದಲಿಸಿದರೂ ಸಾಕು, ತೂಕ ಇಳಿಸಿಕೊಳ್ಳಬಹುದು
ಅದೇ ಸಮಯದಲ್ಲಿ, ಬ್ರಿಟಿಷ್ ಹಾರ್ಟ್ ಫೌಂಡೇಶನ್‌ನ ಡಯೆಟಿಷಿಯನ್ ಟ್ರೇಸಿ ಪಾರ್ಕರ್ ಕೂಡ ಡೈರಿ ಉತ್ಪನ್ನಗಳನ್ನು ಬಳಸುವುದನ್ನು ವಿರೋಧಿಸಿದರು. ಹೃದಯ ಮತ್ತು ರಕ್ತಪರಿಚಲನಾ ಅಸ್ವಸ್ಥತೆಗಳನ್ನು ತಪ್ಪಿಸಲು ಡೈರಿ ಉತ್ಪನ್ನಗಳನ್ನು ಸೇವಿಸುವುದು ಅನಿವಾರ್ಯವಲ್ಲ ಎಂದು ಪಾರ್ಕರ್ ಹೇಳಿದರು. ಅಧಿಕ ಕೊಬ್ಬಿನಂಶವಿರುವ ಡೈರಿ ಉತ್ಪನ್ನಗಳನ್ನು ಬಳಸದಂತೆ ಸಲಹೆ ನೀಡಿದರು. ಕೊಬ್ಬಿನಂಶ ಕಡಿಮೆ ಇರುವ ಹಾಲಿನ ಉತ್ಪನ್ನಗಳು ಉತ್ತಮವಾಗಿವೆ ಎಂದರು.
ಅವರ ಪ್ರಕಾರ, ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ನೀವು ಪ್ರಯತ್ನಿಸುತ್ತಿದ್ದರೆ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು ಉಪಯುಕ್ತವಾಗಿವೆ.
ಏಕೆಂದರೆ ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಹಾರ್ಟ್ ಫೌಂಡೇಶನ್‌ನ ವರದಿಯು ಹೃದ್ರೋಗವು ಹಾಲಿಗೆ ಸಂಬಂಧಿಸಿದೆ ಎಂಬ ಕಲ್ಪನೆಯನ್ನು ತಿರಸ್ಕರಿಸಿದೆ ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ಡೈರಿ ಹಾಲನ್ನು ಸೇವಿಸಬಹುದು ಎಂದು ಹೇಳಿದೆ.
ಜನರು ಕೊಬ್ಬಿನ ಉತ್ಪನ್ನಗಳನ್ನು ಸೇವಿಸಬಹುದು. ಈಗಾಗಲೇ ಯಾವುದೇ ಹೃದ್ರೋಗ ಅಥವಾ ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವ ಜನರಿಗೆ ಕಡಿಮೆ ಕೊಬ್ಬಿರುವ ಹಾಲಿನ ಬಳಕೆ ಮಾಡಬಹುದು ಎಂದು ಹೇಳಲಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ