ಬೆಂಗಳೂರು ಹಾಲು ಒಕ್ಕೂಟ ನಿಯಮಿತದಲ್ಲಿ ತಾಂತ್ರಿಕ ತೊಂದರೆ, 2-3 ದಿನಗಳ ಕಾಲ ಹಾಲು ಪೂರೈಕೆಯಲ್ಲಿ ಆಗಲಿದೆ ವ್ಯತ್ಯಯ
ತೊಂದರೆ ನಿವಾರಣೆಗೆ ಕನಿಷ್ಟ ಎರಡು ಮೂರು ಬೇಕಾಗುವುದರಿಂದ ನಗರದ ಕೆಲ ಭಾಗಗಳಿಗೆ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿ ಹೇಳುತ್ತಾರೆ.
ಬೆಂಗಳೂರು: ನಗರದ ನಿವಾಸಿಗಳು ಇದುವರೆಗೆ ವಿದ್ಯುತ್ ಮತ್ತು ನೀರು ಸರಬರಾಜುಗಳಲ್ಲಿ (water supply) ಆಗುವ ವ್ಯತ್ಯಯ ಮತ್ತು ಸಮಸ್ಯೆಗಳಿಂದ ಏಗುತ್ತಿದ್ದರು. ಮುಂದಿನ ಎರಡು ಮೂರು ದಿನಗಳ ಅವರು ನಂದಿನಿ ಹಾಲು (Nandini milk) ಸರಬರಾಜಿನಲ್ಲಾಗುವ ವ್ಯತ್ಯಯವನ್ನು ಸಹ ಅನುಭವಿಸಬೇಕಿದೆ. ಬೆಂಗಳೂರು ಹಾಲು ಒಕ್ಕೂಟ ನಿಯಮಿತ (Bengaluru Milk Union Limited) ಸಂಸ್ಥೆಯಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆ ಮತ್ತು ಅಲ್ಲಿನ ಸರ್ವರ್ ಡೌನ್ ಆಗಿರುವುದರಿಂದ ಹಾಲನ್ನು ಕಂಟೇನರ್ ಗಳಿಗೆ ಲೋಡ್ ಮಾಡುವುದು ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ತಾಂತ್ರಿಕ ದೋಷವನ್ನು ಸರಿಪಡಿಸಲು ಹೈದರಾಬಾದ್ ನಿಂದ ತಜ್ಞರ ತಂಡವೊಂದು ಅಗಮಿಸಲಿದೆಯಂತೆ. ತೊಂದರೆ ನಿವಾರಣೆಗೆ ಕನಿಷ್ಟ ಎರಡು ಮೂರು ಬೇಕಾಗುವುದರಿಂದ ನಗರದ ಕೆಲ ಭಾಗಗಳಿಗೆ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 07, 2023 10:55 AM
Latest Videos