ಹಾಸನ: ಹೆಚ್ ಡಿ ರೇವಣ್ಣನವರ (HD Revanna) ಕ್ಷೇತ್ರವಾಗಿರುವ ಹೊಳೆನರಸೀಪುರದಲ್ಲಿ ಇಂದು ಲಕ್ಷ್ಮಿ ರಥೋತ್ಸವ ನಡೆಯುತ್ತಿರುವ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವ ನಡೆಯುತ್ತಿದೆ. ರೇವಣ್ಣನವರು ಪತ್ನಿ ಭವಾನಿ (Bhavani) ಮತ್ತು ಸಂಸದರೂ ಆಗಿರುವ ಅವರ ಮಗ ಪ್ರಜ್ವಲ್ ರೇವಣ್ಣನವರೊಂದಿಗೆ (Prajwal Revanna) ಪೂಜಾವಿಧಿಗಳಲ್ಲಿ ಭಾಗಿಯಾಗಿದ್ದರು. ಕುಟುಂಬದ ಪರವಾಗಿ ರೇವಣ್ಣನವರು ಲಕ್ಷ್ಮಿನರಸಿಂಹ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ದೇಶದಾದ್ಯಂತ ಇಂದು ರಂಗಿನ ಹಬ್ಬ ಹೋಳಿಯನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರಜ್ವಲ್ ರೇವಣ್ಣಗೆ ಬಣ್ಣ ಹಚ್ಚಲು ಮುಂದಾದಾಗ ಅವರು ಹಚ್ಚಿಸಿಕೊಳ್ಳಲು ನಿರಾಕರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ