AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss: ಹಾಲು ಕುಡಿಯುವ ವಿಧಾನವನ್ನು ಸ್ವಲ್ಪ ಬದಲಿಸಿದರೂ ಸಾಕು, ತೂಕ ಇಳಿಸಿಕೊಳ್ಳಬಹುದು

ನೀವು ನಿತ್ಯ ಒಂದು ಅಥವಾ ಎರಡು ಲೋಟ ಹಾಲು(Milk) ಕುಡಿಯುತ್ತೀರ ಎಂದಾದರೆ ನೀವು ಕುಡಿಯುವ ವಿಧಾನವನ್ನು ಸ್ವಲ್ಪ ಬದಲಾಯಿಸಿದರೆ ಸಾಕು ತೂಕ ಇಳಿಸಿಕೊಳ್ಳಬಹುದು.

Weight Loss: ಹಾಲು ಕುಡಿಯುವ ವಿಧಾನವನ್ನು ಸ್ವಲ್ಪ ಬದಲಿಸಿದರೂ ಸಾಕು, ತೂಕ ಇಳಿಸಿಕೊಳ್ಳಬಹುದು
Milk
TV9 Web
| Edited By: |

Updated on: Dec 06, 2022 | 4:30 PM

Share

ನೀವು ನಿತ್ಯ ಒಂದು ಅಥವಾ ಎರಡು ಲೋಟ ಹಾಲು(Milk) ಕುಡಿಯುತ್ತೀರ ಎಂದಾದರೆ ನೀವು ಕುಡಿಯುವ ವಿಧಾನವನ್ನು ಸ್ವಲ್ಪ ಬದಲಾಯಿಸಿದರೆ ಸಾಕು ತೂಕ ಇಳಿಸಿಕೊಳ್ಳಬಹುದು. ಹಾಲು ಕುಡಿಯುವುದು ಆರೋಗ್ಯ(Health)ಕ್ಕೆ ಒಳ್ಳೆಯದು, ಎಂದು ಎಲ್ಲರಿಗೂ ತಿಳಿದಿದೆ. ಹಾಲು ದೇಹವನ್ನು ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದಲೂ ಬಲಗೊಳಿಸುತ್ತದೆ.

ಹಾಲು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಅನೇಕ ಜನರು ಅದರ ಪ್ರಯೋಜನಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದಾರೆ, ಆದರೆ ದಪ್ಪಗಾಗುವ ಭಯದಿಂದ ಹಾಲು ಕುಡಿಯುವುದಿಲ್ಲ.

ಹಾಲು ಕುಡಿಯುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ, ಬೊಜ್ಜು ತಪ್ಪಿಸಬಹುದು. ದೇಹದ ದೌರ್ಬಲ್ಯವನ್ನು ಹೋಗಲಾಡಿಸುವ ಜೊತೆಗೆ ತೂಕವನ್ನು ನಿಯಂತ್ರಣದಲ್ಲಿಡಲು ನೀವು ಬಯಸಿದರೆ, ಹಾಲು ಕುಡಿಯುವಾಗ ನೀವು ಕೆಲವು ತಂತ್ರಗಳನ್ನು ಅನುಸರಿಸಬಹುದು.

ಜೇನುತುಪ್ಪವನ್ನು ಬೆರೆಸುವುದು ಪ್ರಯೋಜನಕಾರಿ

ಬೆಳಗಿನ ಉಪಾಹಾರದ ಸಮಯದಲ್ಲಿ ಹಾಲು ಕುಡಿಯುವುದು ಒಳ್ಳೆಯದು. ನೀವು ತೂಕ ಹೆಚ್ಚಾಗುವುದನ್ನು ತಡೆಯಲು ಬಯಸಿದರೆ, ಹಾಲಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ಹಾಲಿಗೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ತೂಕ ಕಡಿಮೆಯಾಗುವುದು.

ಕಡಿಮೆ ಕೊಬ್ಬಿನ ಹಾಲು ಕುಡಿಯಿರಿ

ಅಧಿಕ ಕೊಬ್ಬಿನಂಶವಿರುವ ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗಬಹುದು. ನೀವು ತೆಳ್ಳಗಾಗಲು ಬಯಸಿದರೆ, ಕಡಿಮೆ ಕೊಬ್ಬಿನ ಹಾಲನ್ನು ಸೇವಿಸಬೇಕು. ನೀವು ಕೊಬ್ಬನ್ನು ಕಡಿಮೆ ಮಾಡಲು ಬಯಸಿದರೆ, ಕಡಿಮೆ ಕೊಬ್ಬಿನ ಹಾಲನ್ನು ಕುಡಿಯುವುದು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಅರಿಶಿನ ಬೆರೆಸಿದ ಹಾಲನ್ನು ಕುಡಿಯುವುದು ಕೂಡ ಪ್ರಯೋಜನಕಾರಿ.

ಮಲಗುವ ಮುನ್ನ ಹಾಲು ಕುಡಿಯಿರಿ

ಮಲಗುವಾಗ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಈ ಸಮಯದಲ್ಲಿ ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗುವುದಿಲ್ಲ. ತೂಕವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದರೆ ರಾತ್ರಿ ಮಲಗುವಾಗ ಹಾಲು ಕುಡಿಯಬೇಕು. ವ್ಯಾಯಾಮದ ನಂತರ ಕುಡಿಯಿರಿ

ವ್ಯಾಯಾಮದ ನಂತರ ಅನೇಕ ರೀತಿಯ ಪಾನೀಯಗಳನ್ನು ಸೇವಿಸಲಾಗುತ್ತದೆ. ದೇಹವು ಬಲಗೊಳ್ಳಬೇಕಾದರೆ ವ್ಯಾಯಾಮದ ನಂತರ ಹಾಲು ಕುಡಿಯುವುದು ಒಳ್ಳೆಯದು. ವ್ಯಾಯಾಮದ ನಂತರ ಹಾಲು ಕುಡಿಯುವುದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ ಮತ್ತು ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.

ದೈಹಿಕ ಚಟುವಟಿಕೆ ಮುಖ್ಯವಾಗಿದೆ

ನೀವು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಿದರೆ, ಆದರೆ ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡದಿದ್ದರೆ, ನಂತರ ತೂಕ ಹೆಚ್ಚಾಗುತ್ತದೆ. ನೀವು ಹೆಚ್ಚು ಹಾಲು ಕುಡಿಯುತ್ತಿದ್ದರೆ, ಸ್ವಲ್ಪ ದೈಹಿಕ ಚಟುವಟಿಕೆಯನ್ನು ಮಾಡಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್