ಈ ಅಪಾಯಕಾರಿ ರೋಗವು ಹೆರಿಗೆಯ ನಂತರ ಪ್ರತಿ 10ರಲ್ಲಿ 8ಮಹಿಳೆಯ ಮೇಲೆ ಪರಿಣಾಮ ಬೀರುತ್ತದೆ

|

Updated on: Oct 27, 2024 | 6:14 PM

ಹೆರಿಗೆಯ ನಂತರ ಅನೇಕ ಮಹಿಳೆಯರು ಖಿನ್ನತೆಯಿಂದ ಬಳಲುತ್ತಾರೆ. ಇದು ಕೋಪ, ಏಕಾಗ್ರತೆ ಕೊರತೆ, ಅಸ್ಪಷ್ಟ ನೋವು ಮತ್ತು ನಿರಂತರ ಆಯಾಸದ ಲಕ್ಷಣಗಳನ್ನು ಹೊಂದಿರುತ್ತದೆ. ಈ ಖಿನ್ನತೆಯು ದೀರ್ಘಕಾಲ ಮುಂದುವರಿದರೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ ವೈದ್ಯಕೀಯ ಸಹಾಯ ಮತ್ತು ಕುಟುಂಬದ ಬೆಂಬಲ ಅತ್ಯಗತ್ಯ.

ಈ ಅಪಾಯಕಾರಿ ರೋಗವು ಹೆರಿಗೆಯ ನಂತರ ಪ್ರತಿ 10ರಲ್ಲಿ 8ಮಹಿಳೆಯ ಮೇಲೆ ಪರಿಣಾಮ ಬೀರುತ್ತದೆ
Postpartum Depression
Follow us on

ಗರ್ಭಧಾರಣೆ ಮತ್ತು ಹೆರಿಗೆ ಎರಡೂ ಮಹಿಳೆಗೆ ಸವಾಲುಗಳಿಂದ ಕೂಡಿದೆ. ಒಂಬತ್ತು ತಿಂಗಳ ಗರ್ಭಾವಸ್ಥೆಯಲ್ಲಿ ಮಹಿಳೆ ಎದುರಿಸುವ ಸಮಸ್ಯೆಗಳ ಸಂಖ್ಯೆಯು ಮಗುವಿನ ಜನನದ ನಂತರ ಇನ್ನೂ ಹೆಚ್ಚಾಗಬಹುದು. ಹಾಗಾಗಿ ವಿಶೇಷ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ತಜ್ಞರು ತಾಯಿಗೆ ಸಲಹೆ ನೀಡುತ್ತಾರೆ. ಗರ್ಭಧಾರಣೆಯ ನಂತರ ಅನೇಕ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ.

ಪ್ರಸವಾನಂತರದ ಖಿನ್ನತೆಯು ಗರ್ಭಾವಸ್ಥೆಯಲ್ಲಿ ಅಥವಾ ಮಗುವಿನ ಜನನದ ನಂತರ ಒಂದು ವರ್ಷದವರೆಗೆ ಇರುತ್ತದೆ. ಆರಂಭದಲ್ಲಿ, ಪ್ರಸವಾನಂತರದ ಖಿನ್ನತೆ ಮತ್ತು ಸಾಮಾನ್ಯ ಒತ್ತಡ ಅಥವಾ ಆಯಾಸದ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟ.

ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು:

  • ಯಾವುದೇ ಕಾರಣವಿಲ್ಲದೆ ಕೆರಳುವುದು ಅಥವಾ ಕೋಪಗೊಳ್ಳುವುದು
  • ಯಾವುದೇ ಕೆಲಸದಲ್ಲಿ ಏಕಾಗ್ರತೆ ಇರದಿರುವುದು
  • ಅಸ್ಪಷ್ಟ ನೋವು ಅಥವಾ ಯಾವುದೇ ಅನಾರೋಗ್ಯದ ಭಾವನೆ ತುಂಬಾ ಹಸಿದ ಭಾವನೆ
  • ಕಾರಣವಿಲ್ಲದೆ ಅಳು, ದಣಿದ ಭಾವನೆ

ಪ್ರಸವಾನಂತರದ ಖಿನ್ನತೆ ಎಷ್ಟು ಅಪಾಯಕಾರಿ:

ಪ್ರಸವಾನಂತರದ ಖಿನ್ನತೆಯು ಕೆಲವು ತಿಂಗಳುಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರಿದರೆ, ಅದು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ದೈಹಿಕ ಸಮಸ್ಯೆಗಳೂ ಉಂಟಾಗಬಹುದು. ಖಿನ್ನತೆಯಿಂದಾಗಿ, ಬೊಜ್ಜು, ಹೃದಯಾಘಾತ ಮತ್ತು ದೀರ್ಘಕಾಲದ ಅನಾರೋಗ್ಯದ ಅಪಾಯವೂ ಇದೆ.

ಇದನ್ನೂ ಓದಿ: ಇನ್ಮುಂದೆ ಈ AI ಕ್ಯಾಲ್ಕುರೇಟರ್ ಮೂಲಕ ಸಾವಿಗೆ ಎಷ್ಟು ಹತ್ತಿರದಲ್ಲಿದ್ದೇವೆ ಎಂದು ತಿಳಿಯಬಹುದು

ಪ್ರಸವಾನಂತರದ ಖಿನ್ನತೆಗೆ ಚಿಕಿತ್ಸೆ ಏನು?

ಖಿನ್ನತೆಯ ಲಕ್ಷಣಗಳನ್ನು ಗುರುತಿಸಿ ಮತ್ತು ಸರಿಯಾದ ಸಮಯದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯಿರಿ. ಇದಲ್ಲದೇ ಬಾಣಂತಿಗೆ ಕುಟುಂಬದ ಮಾನಸಿಕ  ಬೆಂಬಲ ತುಂಬಾ ಅಗತ್ಯ. ಅವರನ್ನು ಕಾಳಜಿ ನೋಡಿಕೊಳ್ಳುವುದು ತುಂಬಾ ಅಗತ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ