ನವದೆಹಲಿ: ಕೇಂದ್ರ ಸರ್ಕಾರ ಕಾಲಕಾಲಕ್ಕೆ ದೇಶೀಯ ಸಂಪ್ರದಾಯ ಪಾಲನೆಗೆ ಒತ್ತುನೀಡುತ್ತಾ ಬಂದಿದೆ. ಆಗಾಗ್ಗೆ ಈ ನಿಟ್ಟಿನಲ್ಲಿ ಅನೇಕ ಮಾರ್ಪಾಡುಗಳನ್ನು ತರುವುದು ಸಹಜವಾಗಿದೆ. ಮುಂದುವರಿದ ಭಾಗವಾಗಿ ಇದೀಗ ಕೇಂದ್ರ ಆರೋಗ್ಯ ಸಚಿವಾಲಯದ (Union Health Ministry) ಕ್ಯಾಂಟೀನ್ನಲ್ಲಿ (canteen) ಆರೋಗ್ಯಕರ ಆಹಾರ ಸರಬರಾಜಿಗಷ್ಟೇ ಪ್ರಾಮುಖ್ಯತೆ ನೀಡಿದೆ. ಕರಿದ ಆಹಾರ ಪದಾರ್ಥ ಮತ್ತು ಕುರುಕುಲು ತಿಂಡಿಗೆ ಕೊಕ್ ನೀಡಲಾಗಿದೆ. ಸಮೋಸಾ (samosas), ಬ್ರೆಡ್ ಪಕೋಡಾಗಳಿಗೆ ಗುಡ್ಬೈ ಹೇಳಲಾಗಿದೆ. ದಾಲ್, ದಾಲ್ ದೋಸೆ, ಗ್ರೀನ್ ಪೀ, ಸಾಂಬಾರು, ಮಿಲೆಟ್ ರೊಟ್ಟಿ (millet rotis), ಮಿಲೆಟ್ ಪಲಾವ್ ಇವೇ ಮುಂತಾದ ಆರೋಗ್ಯಕರ ಆಹಾರಕ್ಕೆ ಮಣೆ ಹಾಕಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಇನ್ನು ಕರಿದ, ಕುರುಕುಲು ತಿಂಡಿ ಸಿಗುವುದಿಲ್ಲ!
ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ಈ ವ್ಯವಸ್ಥೆ ಅದಾಗಲೇ ಪ್ರಯೋಗಾರ್ಥ ಚಾಲ್ತಿಯಲ್ಲಿದೆ. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಅಲ್ಪಸ್ವಲ್ಪ ಏರ್ಪಾಡುಗಳೊಂದಿಗೆ ಇದನ್ನೇ ಕಾಯಂ ವ್ಯವಸ್ಥೆಯನ್ನಾಗಿಸಲಾಗುವುದು ಎಂದು ತಿಳಿದುಬಂದಿದೆ. ದಾಲ್ ದೋಸೆ ಸದ್ಯಕ್ಕೆ 10 ರೂಪಾಯಿ ದರ ನಿಗದಿಪಡಿಸಲಾಗಿದೆ. ಅಪ್ಪಟ ದೇಶೀಯ ಬೆಳಗಿನ ತಿಂಡಿ 25 ರೂಪಾಯಿಗೆ ಸಿಗಲಿದೆ. ಇನ್ನು ಮಧ್ಯಾಹ್ನದ ವೇಳೆಗೆ ಊಟ 40 ರೂಪಾಯಿಗೆ ಸಿಗಲಿದೆ.
ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ಅವರ ಒತ್ತಾಸೆಯ ಫಲವಾಗಿ ಈ ವ್ಯವಸ್ಥೆ ಏರ್ಪಾಡಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಾವು ಅಧಿಕಾರಕ್ಕೆ ಬಂದಾಗಲೇ ಇಂತಹ ದಾಲ್, ದಾಲ್ ದೋಸೆ, ಗ್ರೀನ್ ಪೀ, ಸಾಂಬಾರು, ಮಿಲೆಟ್ ರೊಟ್ಟಿ, ಮಿಲೆಟ್ ಪಲಾವ್ ದೇಶೀಯ ಆಹಾರಕ್ಕೆ ಒತ್ತು ನೀಡುವುದಾಗಿ ಅವರು ಘೋಷಿಸಿದ್ದರು. ಹಾಗಂತ ಕಳೆದ ಅಕ್ಟೋಬರ್ ತಿಂಗಳಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ. ಗ್ರಾಹಕರೂ ದನ್ನುಇಷ್ಟಪಟ್ಟಿದ್ದಾರೆ. ಹಾಗಾಗಿ ಇದನ್ನು ಮುಂದುವರಿಸಲಾಗುವುದು ಆರೋಗ್ಯಕ್ಕೆ ಕುತ್ತು ತರುವಂತಹ ಕರಿದ ಆಹಾರ ಪದಾರ್ಥ ಮತ್ತು ಕುರುಕುಲು ತಿಂಡಿಗಳಿಗೆ ಗುಡ್ಬೈ ಹೇಳಲಾಗಿದೆ.
ಸ್ವತಃ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ಅವರೇ ಆರೋಗ್ಯಕ್ಕೆ ಹೆಚ್ಚು ನೀಡುವ ವ್ಯಕ್ತಿ. ಅವರು ಸಂಸತ್ತಿಗೆ ಸೈಕಲ್ಲಿನಲ್ಲಿ ಬರುತ್ತಾರೆ. ಪ್ರತಿ ದಿನಾ 20 ಕಿಮೀ ಸೈಕ್ಲಿಂಗ್ ಮಾಡುವ ಅಭ್ಯಾಸ ಅವರಿಗಿದೆ. ನಿಯಮಿತ ಆರೋಗ್ಯ ವ್ಯಾಯಾಮಗಳು, ಯೋಗ ಅವರ ದಿನಚರಿಯಲ್ಲಿದೆ. ಹಾಗಾಗಿ ಮನೆಯೇ ಪಾಠಶಾಲೆ ಎಂಬಂತೆ ತಮ್ಮ ಸಚಿವಾಲಯದಿಂದಲೇ ಬದಲಾವಣೆ ಬಯಸಿ, Healthy foodಗೆ ಮಣೆ ಹಾಕಿದ್ದಾರೆ. (ANI)
Fried food ditched in favour of healthier options in Union Health Ministry canteen
Read @ANI Story | https://t.co/dw8f64ZkH1#HealthMinistry pic.twitter.com/APUGD6WzqB
— ANI Digital (@ani_digital) February 8, 2022