ಹೃದ್ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಎಐ ನಿಮಗೆ ಸೂಚನೆ ನೀಡುತ್ತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 30, 2024 | 5:22 PM

ಎಐ ನಿಮಗೆ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಿಮ್ಮ ಹೃದ್ರೋಗದ ಅಪಾಯವನ್ನು ಊಹಿಸುತ್ತದೆ. ಎಐ- ಚಾಲಿತ ಕ್ರಮಾವಳಿಗಳು ವ್ಯಕ್ತಿಯ ವೈದ್ಯಕೀಯ ಇತಿಹಾಸ, ಆನುವಂಶಿಕ ಮಾಹಿತಿ ಮತ್ತು ಜೀವನಶೈಲಿ ಅಂಶಗಳು ಸೇರಿದಂತೆ ರೋಗಿಯ ಡೇಟಾವನ್ನು ಬಳಸಿಕೊಂಡು ಹೆಚ್ಚಿನ ಅಪಾಯದಲ್ಲಿದ್ದರೆ ಅವರನ್ನು ಗುರುತಿಸುತ್ತದೆ. ಜೆನೆಟಿಕ್ಸ್, ಆಹಾರ, ದೈಹಿಕ ನಿಷ್ಕ್ರಿಯತೆ, ಒತ್ತಡದ ಮಟ್ಟಗಳು, ಆರೋಗ್ಯ ಪರಿಸ್ಥಿತಿಗಳಂತಹ ಅನೇಕ ಅಂಶಗಳು ಆರೋಗ್ಯವಂತ ವ್ಯಕ್ತಿಗೆ ಭವಿಷ್ಯದಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಗುರಿಯಾಗಿಸಬಹುದು. ಹಾಗಾಗಿ ಎಐ ಬಳಕೆಯನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ, ವೈದ್ಯರಿಗೂ ತಿಳಿಯದಂತಹ ಮಾಹಿತಿಗಳನ್ನು ಪತ್ತೆಹಚ್ಚಬಹುದು, ರೋಗದ ಆರಂಭ ತಿಳಿದು ಅದನ್ನು ತಡೆಗಟ್ಟಲು ಮತ್ತು ನಮ್ಮ ಜೀವನಶೈಲಿಯಲ್ಲಿ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಸುಲಭವಾಗಲಿದೆ.

ಹೃದ್ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಎಐ ನಿಮಗೆ ಸೂಚನೆ ನೀಡುತ್ತೆ
ಸಾಂದರ್ಭಿಕ ಚಿತ್ರ
Follow us on

ತಂತ್ರಜ್ಞಾನ ದಿನದಿಂದ ದಿನಕ್ಕೆ ಆವಿಷ್ಕಾರಗೊಳ್ಳುತ್ತಿದೆ. ಇದೀಗ ಎಐ ನಿಮಗೆ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಿಮ್ಮ ಹೃದ್ರೋಗದ ಅಪಾಯವನ್ನು ಊಹಿಸುತ್ತದೆ. ಎಐ- ಚಾಲಿತ ಕ್ರಮಾವಳಿಗಳು ವ್ಯಕ್ತಿಯ ವೈದ್ಯಕೀಯ ಇತಿಹಾಸ, ಆನುವಂಶಿಕ ಮಾಹಿತಿ ಮತ್ತು ಜೀವನಶೈಲಿ ಅಂಶಗಳು ಸೇರಿದಂತೆ ರೋಗಿಯ ಡೇಟಾವನ್ನು ಬಳಸಿಕೊಂಡು ಹೆಚ್ಚಿನ ಅಪಾಯದಲ್ಲಿದ್ದರೆ ಅವರನ್ನು ಗುರುತಿಸುತ್ತದೆ. ಜೆನೆಟಿಕ್ಸ್, ಆಹಾರ, ದೈಹಿಕ ನಿಷ್ಕ್ರಿಯತೆ, ಒತ್ತಡದ ಮಟ್ಟಗಳು, ಆರೋಗ್ಯ ಪರಿಸ್ಥಿತಿಗಳಂತಹ ಅನೇಕ ಅಂಶಗಳು ಆರೋಗ್ಯವಂತ ವ್ಯಕ್ತಿಗೆ ಭವಿಷ್ಯದಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಗುರಿಯಾಗಿಸಬಹುದು. ಹಾಗಾಗಿ ಎಐ ಬಳಕೆಯನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ, ವೈದ್ಯರಿಗೂ ತಿಳಿಯದಂತಹ ಮಾಹಿತಿಗಳನ್ನು ಪತ್ತೆಹಚ್ಚಬಹುದು, ರೋಗದ ಆರಂಭ ತಿಳಿದು ಅದನ್ನು ತಡೆಗಟ್ಟಲು ಮತ್ತು ನಮ್ಮ ಜೀವನಶೈಲಿಯಲ್ಲಿ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಸುಲಭವಾಗಲಿದೆ.

ರೋಗನಿರ್ಣಯ ಮಾಡುವುದು ಸುಲಭ;

ಎಐನ ಪ್ರಯೋಜನಗಳು ಊಹೆಗೂ ಮೀರಿ ವಿಸ್ತರಿಸುತ್ತಿದೆ. ಇದು ರೋಗನಿರ್ಣಯ ಮಾಡುವುದಲ್ಲದೆ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಗಳು (ಇಸಿಜಿಗಳು) ಮತ್ತು ಎಕೋಕಾರ್ಡಿಯೋಗ್ರಾಮ್ ಗಳಂತಹ ಸಾಂಪ್ರದಾಯಿಕ ರೋಗನಿರ್ಣಯ ಮಾಡುವ ವಿಧಾನಗಳು ಕೂಡ, ನಂಬಲಾಗದಂತಹ ನಿಖರತೆಯ ಫಲಿತಾಂಶವನ್ನು ಇದು ನೀಡುತ್ತದೆ, ಮಾನವ ಕಣ್ಣಿನಿಂದ ತಪ್ಪಿಸಿಕೊಂಡದ್ದನ್ನು ಕೂಡ ಪತ್ತೆಹಚ್ಚುತ್ತದೆ. ಅಷ್ಟೇ ಅಲ್ಲ, ನಿಮ್ಮ ಹೃದಯ ಈಗಿರುವ ಸ್ಥಿತಿಯನ್ನು ಊಹಿಸುವುದರ ಜೊತೆಗೆ ಅದಕ್ಕೆ ಸರಿಯಾದ ಕಾರಣ ನೀಡುವುದರ ಜೊತೆಗೆ ರೋಗನಿರ್ಣಯಕ್ಕೆ ತ್ವರಿತ ಸಲಹೆಗಳು ಮತ್ತು ನಿಖರವಾದ ಚಿಕಿತ್ಸೆಗಳನ್ನು ತಿಳಿಸುವುದಕ್ಕೆ ಎಐ ಸಹಾಯ ಮಾಡುತ್ತದೆ. ಇದರಿಂದ ರೋಗನಿರ್ಣಯ ಮಾಡುವುದು ಸುಲಭವಾಗುವುದಲ್ಲದೆ ಎಷ್ಟೋ ಜೀವಗಳನ್ನು ಉಳಿಸಬಹುದು.

ಅದಲ್ಲದೆ ಇದು ರೋಗಿಯ ಗುಣಲಕ್ಷಣಗಳಿಗೆ ಅನುಗುಣವಾಗಿ ವೈಯಕ್ತಿಕಗೊಳಿಸಿದ ಔಷಧ ನೀಡಬಲ್ಲದು. ಅಂದರೆ ಎಐ ರೋಗಿಯ ಆನುವಂಶಿಕ ರಚನೆಯ ಆಧಾರದ ಮೇಲೆ ಅತ್ಯಂತ ಪರಿಣಾಮಕಾರಿ ಔಷಧಿ ಅಥವಾ ಡೋಸೇಜ್ ಅನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಇದರಿಂದ ವ್ಯಕ್ತಿಯು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಬಹುದು. ಇದೆಲ್ಲದರ ಜೊತೆಗೆ ಇದರಿಂದ ಅವರಿಗೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ನೋಡಿಕೊಳ್ಳುತ್ತದೆ.

ಭಾರತದಲ್ಲಿ ಆರೋಗ್ಯ ಸಂಪನ್ಮೂಲಗಳು ಸೀಮಿತವಾಗಿದ್ದರು ಕೂಡ, ಎಐ ಹೃದ್ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ದೂರದ ಪ್ರದೇಶಗಳಲ್ಲಿನ ರೋಗಿಗಳನ್ನು ಹೃದ್ರೋಗ ತಜ್ಞರೊಂದಿಗೆ ಸಂಪರ್ಕಿಸುವ ವ್ಯವಸ್ಥೆ ಮಾಡಿಸುತ್ತದೆ, ಹಾಗಾಗಿ ದೀರ್ಘ ಪ್ರಯಾಣದ ಅಗತ್ಯವಿಲ್ಲದೆ ತಜ್ಞರ ಸಲಹೆಯನ್ನು ಕುಳಿತಲ್ಲಿಯೇ ಪಡೆಯಬಹುದಾಗಿದೆ. ಹೆಚ್ಚುವರಿಯಾಗಿ, ಎಐ-ಚಾಲಿತ ಮೊಬೈಲ್ ಅಪ್ಲಿಕೇಶನ್ ಮೂಲಕ ರೋಗಿಯ ಆರೋಗ್ಯ ಲಕ್ಷಣಗಳನ್ನು ಟ್ರ್ಯಾಕ್ ಮಾಡಬಹುದು, ಯಾವ ಸಮಯಕ್ಕೆ ಯಾವ ರೀತಿಯ ಔಷಧಿಗಳ ಸೇವನೆ ಮಾಡಬೇಕು ಎಂಬುದನ್ನು ಮೇಲ್ವಿಚಾರಣೆ ಮಾಡುತ್ತದೆ ಜೊತೆಗೆ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಶಿಫಾರಸು ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ವ್ಯಕ್ತಿಗಳು ತಮ್ಮ ಹೃದಯದ ಆರೋಗ್ಯವನ್ನು ನಿಯಂತ್ರಿಸಬಹುದು.

ಇದನ್ನೂ ಓದಿ: ಬಳ್ಳಾರಿಯ ಸಲೂನ್​​​ನಲ್ಲಿ ತಲೆಗೆ ಮಸಾಜ್ ಮಾಡಿಕೊಂಡ ವ್ಯಕ್ತಿಗೆ ಪಾರ್ಶ್ವವಾಯು; ಇದಕ್ಕೆ ಕಾರಣವೇನು? ತಜ್ಞರು ಹೇಳುವುದೇನು?

ಎಐ ಪಾತ್ರ ಅಪಾರ;

ಆದರೆ ಹೃದ್ರೋಗ ನಿರ್ವಹಣೆಯಲ್ಲಿ ಎಐಗೆ ಯಾವುದೇ ರೀತಿಯ ಸವಾಲುಗಳಿಲ್ಲದೆ ಇಲ್ಲ. ರೋಗಿಯ ಮಾಹಿತಿಯನ್ನು ರಕ್ಷಿಸಬೇಕಾಗುತ್ತದೆ. ಇದಲ್ಲದೆ, ಎಐ-ಚಾಲಿತ ಸಾಧನಗಳ ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ಗಮನಾರ್ಹ ಹೂಡಿಕೆಯ ಅಗತ್ಯವಿದೆ. ಈ ಅಡೆತಡೆಗಳ ಹೊರತಾಗಿಯೂ, ಹೃದ್ರೋಗ ನಿರ್ವಹಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಎಐ ಪಾತ್ರ ಅಪಾರವಾಗಿವೆ. ಆರಂಭಿಕ ಪತ್ತೆ, ರೋಗನಿರ್ಣಯ ಮತ್ತು ಅಗತ್ಯ ಚಿಕಿತ್ಸೆಯನ್ನು ನೀಡುವ ಮೂಲಕ, ಈ ತಂತ್ರಜ್ಞಾನ ಜೀವಗಳನ್ನು ಉಳಿಸಬಹುದು ಮತ್ತು ಲಕ್ಷಾಂತರ ಜನರ ಜೀವನ ಶೈಲಿಯನ್ನು ಸುಧಾರಿಸಬಹುದು. ಇನ್ನುಮುಂದೆ ಹೃದ್ರೋಗಕ್ಕೆ ಭಯ ಪಡುವ ಅವಶ್ಯಕತೆ ಇಲ್ಲ. ಆದರೆ ಪರಿಣಾಮಕಾರಿಯಾಗಿ ತಡೆಗಟ್ಟಬಹುದಾದ ಮತ್ತು ಅಗತ್ಯವಿರುವ ಔಷಧಗಳನ್ನು ತೆಗೆದುಕೊಳ್ಳುವ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.

ಸೂಚನೆ: ಲೇಖನದಲ್ಲಿ ತಿಳಿಸಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದರೂ ನಿಮ್ಮ ವೈದ್ಯರ ಜೊತೆ ಚರ್ಚಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ