Diabetes and Heart Diseases: 4 ಮಧುಮೇಹಿಗಳಲ್ಲಿ ಒಬ್ಬರಿಗೆ ಹೃದ್ರೋಗದ ಅಪಾಯವಿದೆ! ಇದಕ್ಕೆ ಕಾರಣವೇನು?

ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಅನೇಕ ಜನರು ಮಧುಮೇಹ ಮತ್ತು ಹೃದ್ರೋಗಕ್ಕೆ ಬಲಿಯಾಗುತ್ತಿದ್ದಾರೆ. ವೇಗದ ಜೀವನದಲ್ಲಿಯಿಂದಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಇದರಿಂದಾಗಿ ಈ ರೀತಿಯ ಸಮಸ್ಯೆಗಳನ್ನು ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ವಯಸ್ಸಾದವರಿಂದ ಹಿಡಿದು ಯುವ ಪೀಳಿಗೆಯ ವರೆಗೆ ಈ ರೋಗ ಯಾರನ್ನೂ ಬಿಟ್ಟಿಲ್ಲ. ಅಂಕಿಅಂಶಗಳ ಪ್ರಕಾರ, ಪ್ರತಿ ನಾಲ್ಕು ಮಧುಮೇಹ ರೋಗಿಗಳಲ್ಲಿ ಒಬ್ಬರಿಗೆ ಹೃದ್ರೋಗದ ಸಮಸ್ಯೆ ಇರುತ್ತದೆ. ಇದು ಅತ್ಯಂತ ಗಂಭೀರ ಸ್ಥಿತಿಯಾಗಿದ್ದು, ಮಧುಮೇಹ ರೋಗಿಗಳಲ್ಲಿ ಹೃದ್ರೋಗದ ಅಪಾಯ ಹೆಚ್ಚಾಗುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

Diabetes and Heart Diseases: 4 ಮಧುಮೇಹಿಗಳಲ್ಲಿ ಒಬ್ಬರಿಗೆ ಹೃದ್ರೋಗದ ಅಪಾಯವಿದೆ! ಇದಕ್ಕೆ ಕಾರಣವೇನು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 01, 2024 | 10:38 AM

ಇತ್ತೀಚಿನ ದಿನಗಳಲ್ಲಿ ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಗಳು ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಾಗಿವೆ. ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಅನೇಕ ಜನರು ಮಧುಮೇಹ ಮತ್ತು ಹೃದ್ರೋಗಕ್ಕೆ ಬಲಿಯಾಗುತ್ತಿದ್ದಾರೆ. ವೇಗದ ಜೀವನದಲ್ಲಿಯಿಂದಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಇದರಿಂದಾಗಿ ಈ ರೀತಿಯ ಸಮಸ್ಯೆಗಳನ್ನು ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ವಯಸ್ಸಾದವರಿಂದ ಹಿಡಿದು ಯುವ ಪೀಳಿಗೆಯ ವರೆಗೆ ಈ ರೋಗ ಯಾರನ್ನೂ ಬಿಟ್ಟಿಲ್ಲ. ಅಂಕಿಅಂಶಗಳ ಪ್ರಕಾರ, ಪ್ರತಿ ನಾಲ್ಕು ಮಧುಮೇಹ ರೋಗಿಗಳಲ್ಲಿ ಒಬ್ಬರಿಗೆ ಹೃದ್ರೋಗದ ಸಮಸ್ಯೆ ಇರುತ್ತದೆ. ಇದು ಅತ್ಯಂತ ಗಂಭೀರ ಸ್ಥಿತಿಯಾಗಿದ್ದು, ಮಧುಮೇಹ ರೋಗಿಗಳಲ್ಲಿ ಹೃದ್ರೋಗದ ಅಪಾಯ ಹೆಚ್ಚಾಗುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ನಮ್ಮ ದೇಹವು ಇನ್ಸುಲಿನ್ ಹಾರ್ಮೋನ್ ಅನ್ನು ಹೊಂದಿರುತ್ತದೆ, ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪತ್ತಿಯಾಗದಿದ್ದಾಗ ಅಥವಾ ಈ ಹಾರ್ಮೋನ್ ಸರಿಯಾಗಿ ಕೆಲಸ ಮಾಡದಿದ್ದಾಗ, ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ, ಇದು ಮಧುಮೇಹಕ್ಕೆ ಕಾರಣವಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ. ಮೊದಲನೆಯದಾಗಿ, ಟೈಪ್ 1 ಮಧುಮೇಹವು ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಇದರಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯು ಇನ್ಸುಲಿನ್ ತಯಾರಿಸುವ ಜೀವಕೋಶಗಳನ್ನು ನಾಶಪಡಿಸುತ್ತದೆ. ಎರಡನೆಯದು ಟೈಪ್ 2 ಡಯಾಬಿಟಿಸ್. ಬೊಜ್ಜು, ಅನಾರೋಗ್ಯಕರ ಆಹಾರ ಮತ್ತು ಕಳಪೆ ಜೀವನಶೈಲಿಯಿಂದ ಈ ಸಮಸ್ಯೆ ಉಂಟಾಗುತ್ತದೆ. ಟೈಪ್ 2 ಡಯಾಬಿಟಿಸ್ ಇರುವ ರೋಗಿಗಳಲ್ಲಿ ಹೃದ್ರೋಗದ ಅಪಾಯವಿರುತ್ತದೆ. ಹಾಗಾದರೆ ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಬಳ್ಳಾರಿಯ ಸಲೂನ್​​​ನಲ್ಲಿ ತಲೆಗೆ ಮಸಾಜ್ ಮಾಡಿಕೊಂಡ ವ್ಯಕ್ತಿಗೆ ಪಾರ್ಶ್ವವಾಯು; ಇದಕ್ಕೆ ಕಾರಣವೇನು? 

ಇದಕ್ಕೆ ಕಾರಣವೇನು?

ಮಧುಮೇಹ ಇರುವ ರೋಗಿಗಳಲ್ಲಿ ಹೃದ್ರೋಗದ ಅಪಾಯ ಹೆಚ್ಚಾಗಲು ಅನೇಕ ಕಾರಣಗಳಿವೆ. ರಕ್ತದಲ್ಲಿ ಸಕ್ಕರೆ ಮಟ್ಟವು ದೀರ್ಘಕಾಲದ ವರೆಗೆ ಹೆಚ್ಚಾದಾಗ, ಅದು ದೇಹದ ಅನೇಕ ಅಂಗಗಳ ಮೇಲೆ, ವಿಶೇಷವಾಗಿ ಹೃದಯ ಮತ್ತು ಅದರ ಸಂಪರ್ಕಿತ ನರಗಳ ಮೇಲೆ ಪರಿಣಾಮ ಬೀರುತ್ತದೆ. ಆ ಪರಿಸ್ಥಿತಿಯಲ್ಲಿ, ಹೃದಯದ ಮೇಲೆ ಸಾಕಷ್ಟು ಒತ್ತಡ ಬೀಳುತ್ತದೆ ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಇರುವ ರೋಗಿಗಳಲ್ಲಿ ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ. ಜೊತೆಗೆ ಇತರ ಕಾರಣಗಳಲ್ಲಿ ಅಂದರೆ ಧೂಮಪಾನ, ಮದ್ಯಪಾನ, ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟ, ಮೂತ್ರಪಿಂಡದ ಕಾಯಿಲೆ, ವ್ಯಾಯಾಮದ ಕೊರತೆ ಅಥವಾ ಕುಟುಂಬದಲ್ಲಿ ಹೃದ್ರೋಗದ ಇತಿಹಾಸ ಇದ್ದರೆ ಅಪಾಯ ಇನ್ನಷ್ಟು ಹೆಚ್ಚಾಗಬಹುದು.

ಹೇಗೆ ರಕ್ಷಿಸಿಕೊಳ್ಳುವುದು?

*ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ ಮತ್ತು ಅದನ್ನು ನಿಯಂತ್ರಣದಲ್ಲಿಡಿ.

*ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ.

*ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿಕೊಳ್ಳಿ.

*ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಿ.

*ಹಣ್ಣು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ ಆಹಾರಗಳನ್ನು ಸೇವಿಸಿ.

*ಪ್ರತಿದಿನ ವ್ಯಾಯಾಮ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್