Vestibular Hypofunction: ವೆಸ್ಟಿಬುಲರ್ ಹೈಪೋಫಂಕ್ಷನ್ ಎಂದರೇನು? ನಟ ವರುಣ್ ಧವನ್ ಈ ಕಾಯಿಲೆಯಿಂದ ಬಳಲುತ್ತಿರುವುದು ನಿಜನಾ?

ಸಾಮಾನ್ಯವಾಗಿ ಹೇಳುವುದಾದರೆ ಕಿವಿಗೆ ಸಂಬಂಧಪಟ್ಟ ಕಾಯಿಲೆ ಇದಾಗಿದ್ದು, ಕಿವಿಯೊಳಗಿನ ಸಂಕೀರ್ಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಮೆದುಳಿಗೆ ಸಂದೇಶ ಕಳುಹಿಸುವಲ್ಲಿ ತೊಂದರೆಯನ್ನುಂಟು ಮಾಡುತ್ತದೆ.

Vestibular Hypofunction: ವೆಸ್ಟಿಬುಲರ್ ಹೈಪೋಫಂಕ್ಷನ್ ಎಂದರೇನು? ನಟ ವರುಣ್ ಧವನ್ ಈ ಕಾಯಿಲೆಯಿಂದ ಬಳಲುತ್ತಿರುವುದು ನಿಜನಾ?
Vestibular Hypofunction
Image Credit source: Google
Updated By: ಅಕ್ಷತಾ ವರ್ಕಾಡಿ

Updated on: Nov 05, 2022 | 12:02 PM

ವರುಣ್ ಧವನ್ ಓರ್ವ ಪ್ರತಿಭಾವಂತ ನಟನಾಗಿದ್ದು ,ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದ್ದಿದ್ದಾರೆ. ಇತ್ತೀಚೆಗೆ, ತಮ್ಮ ಭೇದಿಯ ಚಿತ್ರದ ಪ್ರಚಾರದ ಸಮಯದಲ್ಲಿ, ಇವರು ವೆಸ್ಟಿಬುಲರ್ ಹೈಪೋಫಂಕ್ಷನ್ ಡಿಸಾರ್ಡರ್ ಸಮಸ್ಯೆಯ ವಿರುದ್ಧ ಹೋರಾಡುವ ಕುರಿತು ಹೇಳಿಕೊಂಡಿದ್ದಾರೆ. ಆದ್ದರಿಂದ ಸ್ಪಲ್ಪ ಸಮಯ ಕೆಲಸದಿಂದ ವಿರಾಮ ತೆಗೆದುಕೊಳ್ಳಬೇಕಾಯಿತು ಎಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ವರುಣ್ ಧವನ್ ಇಂಡಿಯಾ ಟುಡೇಯ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ವೆಸ್ಟಿಬುಲರ್ ಹೈಪೋಫಂಕ್ಷನ್ ಎಂದರೇನು?
ಸಾಮಾನ್ಯವಾಗಿ ಹೇಳುವುದಾದರೆ ಕಿವಿಗೆ ಸಂಬಂಧಪಟ್ಟ ಕಾಯಿಲೆ ಇದಾಗಿದೆ.  ಕಿವಿಯೊಳಗಿನ ಲೋಳಾಕೃತಿಯಲ್ಲಿನ ದ್ರವ ರೂಪದ ವಸ್ತುವಿಗೆ ತೊಂದರೆ ಉಂಟಾದಾಗ ಇದು ದೇಹದ  ಸಂಕೀರ್ಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಅಡ್ಡಿಯುಂಟು ಮಾಡುತ್ತದೆ. ಇದರಿಂದಾಗಿ ಮೆದುಳಿಗೆ  ಸರಿಯಾಗಿ ಸಂದೇಶ ಕಳುಹಿಸವಲ್ಲಿ   ತೊಂದರೆಯನ್ನುಂಟಾಗುತ್ತದೆ. ಇದ್ದರಿಂದ ದಿನನಿತ್ಯದ ಚಟುವಟಿಕೆಗಳಲ್ಲಿ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ.

ಇದರ ಪರಿಣಾಮ ಆಗಾಗ ತಲೆತಿರುಗುವಿಕೆ, ಕಣ್ಣು ಕತ್ತಲಾದಂತೆ ಹಾಗು ನಡೆದಾಡುವಾಗ ಎತ್ತರ ತಗ್ಗುಗಳನ್ನು ಹೊಂದಿರುವಂತೆ ಕಾಣುವುದು ಮುಂತಾದ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬರುತ್ತದೆ. ಈ ವೆಸ್ಟಿಬುಲರ್ ಹೈಪೋಫಂಕ್ಷನ್ ಕೆಲವೊಂದು ರೋಗಿಗಳಲ್ಲಿ ಒಂದು ಕಿವಿಯ ಭಾಗದಲ್ಲಿ ಮಾತ್ರ ಸಂಭವಿಸುತ್ತದೆ. ಆದರೆ ಕೆಲವೊಂದು ರೋಗಿಗಳಲ್ಲಿ ಈ ರೋಗ ಲಕ್ಷಣವು  ತಲೆಯ ಎರಡು ಭಾಗಗಳಲ್ಲಿ ಕಂಡುಬರುತ್ತದೆ.

ವೆಸ್ಟಿಬುಲರ್ ಹೈಪೋಫಂಕ್ಷನ್‌ನ ಸಾಮಾನ್ಯ ಲಕ್ಷಣಗಳು:

ವಾಕರಿಕೆ, ಅತಿಸಾರ, ವಾಂತಿ, ಆತಂಕ, ಭಯ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಂಡುಬರುತ್ತದೆ. ವೆಸ್ಟಿಬುಲರ್ ಕಾರ್ಯವನ್ನು ಸುಧಾರಿಸಲು ಹಾಗು ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಕೆಲವೊಂದು ಟಿಪ್ಸ್ ಇಲ್ಲಿದೆ.

ಇದನ್ನು ಓದಿ: ಕಣ್ಣುಗಳು ಏಕೆ ಒಣಗುತ್ತವೆ? ಈ ಕಾರಣಗಳಿರಬಹುದು

ಪ್ರತಿ ದಿನ 30 ಸೆಕೆಂಡುಗಳ ಕಾಲ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ನೆಲದತ್ತ ಮುಖ ಮಾಡಿ ಹಾಗೆಯೇ ಇದೇ ರೀತಿ ತಲೆಯನ್ನು ಮೇಲಕ್ಕೆ ಎತ್ತಿ ಮೇಲ್ಛಾವಣಿಯನ್ನು ನೋಡಿ. ಇದೇ ರೀತಿ ದಿನದಲ್ಲಿ 10 ಬಾರಿ ಪುನರಾವರ್ತಿಸಿ. ಪ್ರತಿ ದಿನ ಹೀಗೆ ಮಾಡುವುದ್ದರಿಂದ ಕಾಲ ಕ್ರಮೇಣ ಈ ಕಾಯಿಲೆಯಿಂದ ಪರಿಹಾರ ಕಂಡು ಕೊಳ್ಳಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:54 am, Sat, 5 November 22