ಶ್ವಾನಕ್ಕೆ ಹೊಟ್ಟೆಕಿಚ್ಚು ತಂದ ನತಾಶಾ ಕಿಸ್; ವರುಣ್ ಧವನ್ ಹಂಚಿಕೊಂಡ್ರು ವಿಶೇಷ ವಿಡಿಯೋ
ಈ ರೀಲ್ಸ್ಗೆ ‘ತೇರಾ ಜೇಸಾ ಯಾರ್ ಕಹಾ..’ ಹಾಡನ್ನು ಹಾಕಿದ್ದಾರೆ ವರುಣ್. ಈ ವಿಡಿಯೋದಲ್ಲಿ ಜಾಯ್ಗೆ ವರುಣ್ ಅವರು ಕಿಸ್ ಮಾಡುತ್ತಿರುವುದು ಕೂಡ ಇದೆ.
ನಟ ವರುಣ್ ಧವನ್ (Varun Dhawan) ಹಾಗೂ ಅವರ ಪತ್ನಿ ನತಾಶಾ ದಲಾಲ್ (Natasha Dalal) ದಂಪತಿ ಜಾಯ್ ಹೆಸರಿನ ಶ್ವಾನವನ್ನು ಸಾಕಿದ್ದಾರೆ. ಇದನ್ನು ಕಂಡರೆ ಈ ದಂಪತಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ವರುಣ್ ಧವನ್ ಅವರು ಜಾಯ್ ಜತೆಗಿನ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದನ್ನು ಕಂಡರೆ ಅವರ ಅಭಿಮಾನಿಗಳಿಗೂ ಎಲ್ಲಿಲ್ಲದ ಪ್ರೀತಿ. ಈಗ ಜಾಯ್ ಜತೆ ಕಳೆದ ಸಮಯದ ವಿಡಿಯೋ ಹಾಗೂ ಫೋಟೋಗಳನ್ನು ಜೋಡಿಸಿ ಒಂದು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ ವರುಣ್. ಈ ರೀಲ್ಸ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಶ್ವಾನಗಳಿಗೂ ಹೊಟ್ಟೆಕಿಚ್ಚು ಆಗುತ್ತದೆ. ತನ್ನ ಮಾಲೀಕ ಬೇರೆ ನಾಯಿಯನ್ನು ಮುದ್ದು ಮಾಡಿದರೆ ಅಥವಾ ಬೇರೆಯವರು ತನ್ನ ಯಜಮಾನನಿಗೆ ಕ್ಲೋಸ್ ಆದರೆ ಅವುಗಳು ಇದನ್ನು ಸಹಿಸಿಕೊಳ್ಳುವುದಿಲ್ಲ. ಈಗ ವರುಣ್ ಸಾಕಿರುವ ನಾಯಿ ವಿಚಾರದಲ್ಲೂ ಹಾಗೆಯೇ ಆಗಿದೆ. ನತಾಶಾ ಅವರು ವರುಣ್ಗೆ ಕಿಸ್ ಮಾಡಿದ್ದಾರೆ. ಈ ವೇಳೆ ಜಾಯ್ ಹೊಟ್ಟೆಕಿಚ್ಚು ಪಟ್ಟಂತೆ ಕಂಡುಬಂತು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
View this post on Instagram
ಈ ರೀಲ್ಸ್ಗೆ ‘ತೇರಾ ಜೇಸಾ ಯಾರ್ ಕಹಾ..’ ಹಾಡನ್ನು ಹಾಕಿದ್ದಾರೆ ವರುಣ್. ಈ ವಿಡಿಯೋದಲ್ಲಿ ಜಾಯ್ಗೆ ವರುಣ್ ಅವರು ಕಿಸ್ ಮಾಡುತ್ತಿರುವುದು ಕೂಡ ಇದೆ. ಈ ವಿಡಿಯೋಗೆ ನಾನಾ ಸೆಲೆಬ್ರಿಟಿಗಳು ಕಮೆಂಟ್ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ ಅವರಿಗೆ ಪ್ರಾಣಿಗಳೆಂದರೆ ಪಂಚಪ್ರಾಣ. ಅವರು ಈ ಫೋಟೋಗೆ ‘ಅದ್ಭುತ’ ಎಂದು ಕಮೆಂಟ್ ಮಾಡಿದ್ದಾರೆ. ಕೆಲ ಅಭಿಮಾನಿಗಳು ‘ವಿಡಿಯೋ ಸಖತ್ ಕ್ಯೂಟ್ ಆಗಿದೆ’ ಎಂದು ಬರೆದುಕೊಂಡಿದ್ದಾರೆ.
ವರುಣ್ ಅವರು ಕಳೆದ ತಿಂಗಳು ಜಾಯ್ ಜತೆ ಇರುವ ಫೋಟೋ ಹಂಚಿಕೊಂಡಿದ್ದರು. ‘ನಿನ್ನಿಂದಾಗಿ ನಾನು ಜೋರಾಗಿ ನಗುತ್ತೇನೆ, ಕಡಿಮೆ ಅಳುತ್ತೇನೆ ಮತ್ತು ಮುಖದ ಮೇಲೆ ಹೆಚ್ಚು ನಗು ಇರುತ್ತದೆ’ ಎಂದು ಅವರು ಬರೆದುಕೊಂಡಿದ್ದರು. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಜತೆ ವರುಣ್ ಧವನ್ ಅವರು ಬೀಚ್ನಲ್ಲಿ ಮಾಡಿದ್ದ ರೀಲ್ಸ್ 8 ಕೋಟಿ ಬಾರಿ ವೀಕ್ಷಣೆ ಕಂಡಿದೆ.
‘ಭೇಡಿಯಾ’ ಸಿನಿಮಾ ಶೂಟಿಂಗ್ನಲ್ಲಿ ವರುಣ್ ಧವನ್ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಕೃತಿ ಸನನ್ ಅವರು ನಾಯಕಿ ಆಗಿ ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ಜತೆಗಿನ ‘ಜುಗ್ ಜುಗ್ ಜಿಯೋ’ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ ವರುಣ್. ಅನಿಲ್ ಕಪೂರ್ ಹಾಗೂ ನೀತು ಕಪೂರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೆ, ವೆಬ್ ಸರಣಿ ಒಂದರಲ್ಲಿ ವರುಣ್ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಕೊಟ್ಟ ಚಮಕ್ ಕಂಡು ಹೌಹಾರಿದ ವರುಣ್ ಧವನ್; ವೈರಲ್ ಆಗಿದೆ ಈ ವಿಡಿಯೋ
ಮೊನ್ನೆ ರಶ್ಮಿಕಾ, ನಿನ್ನೆ ಸಮಂತಾ; ದಕ್ಷಿಣ ಭಾರತದ ಬೆಡಗಿಯರ ಜತೆ ವರುಣ್ ಧವನ್ ಸುತ್ತಾಟ